ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸೂಚನೆ

|
Google Oneindia Kannada News

ದೆಹಲಿ, ಜುಲೈ 1: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Recommended Video

Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada

ಜೊತೆಗೆ ಪ್ರಿಯಾಂಕಾ ಅವರಿಗೆ ಒದಗಿಸಲಾಗಿದ್ದು ಎಸ್‌ಪಿಜಿ ಭದ್ರತೆಯನ್ನು ಸಹ ಹಿಂಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

'ನಾನು ಇಂದಿರಾ ಗಾಂಧಿ ಮೊಮ್ಮಗಳು, ಬೇರೆ ನಾಯಕರಂತೆ.....'- ಪ್ರಿಯಾಂಕಾ ವಾಗ್ದಾಳಿ'ನಾನು ಇಂದಿರಾ ಗಾಂಧಿ ಮೊಮ್ಮಗಳು, ಬೇರೆ ನಾಯಕರಂತೆ.....'- ಪ್ರಿಯಾಂಕಾ ವಾಗ್ದಾಳಿ

ಎಸ್‌ಪಿಜಿ ಭದ್ರತೆ ಹಿಂಪಡೆದ ಕಾರಣ ಆಗಸ್ಟ್ 1ರೊಳಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸರ್ಕಾರ ಒದಗಿಸಿರುವ ಮನೆಯನ್ನು ಖಾಲಿ ಮಾಡಬೇಕಿದೆ. ಇಲ್ಲವಾದಲ್ಲಿ ಆಗಸ್ಟ್ 1ರ ನಂತರ ಎಷ್ಟು ದಿನ ಆ ಮನೆಯಲ್ಲಿ ವಾಸವಾಗಿರುತ್ತಾರೋ ಅಷ್ಟು ದಿನಕ್ಕೆ ದಂಡ ಹಾಗೂ ಹಾನಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಪ್ರಿಯಾಂಕಾ ಗಾಂಧಿಗೆ ಒದಗಿಸಲಾಗಿದ್ದ ಎಸ್‌ಪಿಜಿ ಭದ್ರತೆ ಹಾಗು ಝೆಡ್ + ಸೆಕ್ಯುರಿಟಿ ಮುಂದುವರಿಯದೆ ಹೋದರೆ ಸರ್ಕಾರಿ ವಸತಿ ಸೌಲಭ್ಯ ಇರುವುದಿಲ್ಲ. ಹೀಗಾಗಿ, ದೆಹಲಿಯ ಲೂದಿ ಎಸ್ಟೇಟ್‌ನಲ್ಲಿ ಒದಗಿಸಲಾಗಿರುವ ಟೈಪ್ 6ಬಿ, ಮನೆ ನಂ 35ರ ಮನೆಯನ್ನು ರದ್ದುಗೊಳಿಸಲಾಗಿದೆ.

Priyanka Gandhi Vadra To Vacate Government Accommodation By August 1st

ಕೇಂದ್ರದ ಈ ಆದೇಶಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಪ್ರಿಯಾಂಕಾ ಗಾಂಧಿ ಅವರಗಾಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಬರಿ ಪ್ರಚಾರ ಅಷ್ಟೆ': ಮೋದಿ ಯೋಜನೆ ವಿರುದ್ಧ ಪ್ರಿಯಾಂಕಾ ವಾಗ್ದಾಳಿ'ಬರಿ ಪ್ರಚಾರ ಅಷ್ಟೆ': ಮೋದಿ ಯೋಜನೆ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ಪ್ರಿಯಾಂಕಾ ಗಾಂಧಿಯವರಿಗೆ ಫೆಬ್ರವರಿ 21, 1997 ರಂದು ಎಸ್‌ಪಿಜಿ ಭದ್ರತಾ ನೆಲೆಯಲ್ಲಿ ಲೋಧಿ ಎಸ್ಟೇಟ್ ಬಂಗಲೆ ನೀಡಲಾಗಿತ್ತು. ಎಸ್‌ಪಿಜಿ ಭದ್ರತೆ ಎನ್ನುವುದು ಮಾಜಿ ಪ್ರಧಾನಿ ಮತ್ತು ಕುಟುಂಬಸ್ಥರಿಗೆ ನಿರ್ದಿಷ್ಟ ಅವಧಿಯವರೆಗೂ ನೀಡಲಾಗುವುದು ಭದ್ರತಾ ನಿಯಮ.

English summary
Congress leader Priyanka Gandhi Vadra asked to vacate government allotted accommodation within one month, by Ministry of Housing and Urban Affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X