ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

61ನೇ ಮನ್ ಕೀ ಬಾತ್: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

|
Google Oneindia Kannada News

Recommended Video

Mann Ki Baat : Modi stresses on 'Khelo India ' on his 61st MKB | Oneindia Kannada

ನವದೆಹಲಿ, ಜನವರಿ.26: ಖೇಲೋ ಇಂಡಿಯಾ ಹಾಗೂ ಕ್ರೀಡಾಪಟುಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. 71ನೇ ಗಣರಾಜ್ಯೋತ್ಸವ ದಿನವೇ ದೇಶದ ಪ್ರಜೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ನವದೆಹಲಿಯಲ್ಲಿ 61ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಕಲಿಕೆ ಮತ್ತು ಬೆಳವಣಿಗೆಗೆ ಮನ್ ಕೀ ಬಾತ್ ಉತ್ತಮ ವೇದಿಕೆಯಾಗಿದೆ. ಪ್ರತಿತಿಂಗಳ ಸಾಕಷ್ಟು ಜನರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಇದೇ ದಿನ ಮನ್ ಕೀ ಬಾತ್ ನಲ್ಲಿ ಈ ಹಿಂದೆ ಚರ್ಚಿಸದ ಹಲವು ವಿಚಾರ, ಸಾಧನೆ ಹಾಗೂ ನಮ್ಮ ಮುಂದಿರುವ ಗುರಿಯ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.

Prime Minister Narendra Modi Speech In 61st Mann Ki Baat

ಖೇಲೋ ಇಂಡಿಯಾ ಬಗ್ಗೆ ಉಲ್ಲೇಖ:

ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಕೋಲ್ಕತ್ತಾ, ಭುವನೇಶ್ವರ್ ಹಾಗೂ ಒಡಿಶಾದಲ್ಲಿ ಖೇಲೋ ಇಂಡಿಯಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಫೆಬ್ರವರಿ.22 ರಿಂದ ಆರಂಭಗೊಳ್ಳುವ ಖೇಲೋ ಇಂಡಿಯಾ ಮಾರ್ಚ್.01ರವರೆಗೂ ನಡೆಯಲಿದ್ದು, ಇದರಲ್ಲಿ ಸುಮಾರು 3 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.

English summary
Prime Minister Narendra Modi Speech In 61st Mann Ki Baat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X