• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಮೋದಿ ಮುಖ "ಮಿಣಿ ಮಿಣಿ' ಮಿಂಚಲು ಕಾರಣ ಇದು..!

|

ನವದೆಹಲಿ, ಜನವರಿ 25: ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ತಾಸು ಕೆಲಸ ಮಾಡುತ್ತಾರೆ. ತಪ್ಪದೇ ಯೋಗ ಮಾಡುತ್ತಾರೆ, ಸದಾ ದೇಶಕ್ಕಾಗಿ ಯೋಚಿಸುತ್ತಾ ಕ್ರಿಯಾಶೀಲರಾಗಿರುತ್ತಾರೆ ಎಂಬ ಮಾತು ಜನಜನಿತ.

ಮೋದಿ ಅವರು ಫಳಫಳನೇ ಹೊಳೆಯುವ ಕುರ್ತಾ ಪೈಜಾಮಿನಲ್ಲಿ ಮಿಂಚುವುಕ್ಕಿಂತ, ಬಿಳಿ ಗಡ್ಡದಲ್ಲಿ ಅವರ ಆಕರ್ಷಕ ಮುಖಕಾಂತಿ ಹೆಚ್ಚು ಹೊಳೆಯುತ್ತದೆ ಎಂದು ಹಲವರು ಹೇಳುತ್ತಾರೆ. ಮೋದಿ ಮುಖಕಾಂತಿ ಕೂಡ ಅವರ ಟೀಕಾಕಾರರಿಗೆ ಹಲವು ಬಾರಿ ಆಹಾರವಾಗಿದೆ. ಆದರೆ, ಮೋದಿ ಅವರ ಮುಖಕಾಂತಿಗೆ ಅಸಲಿ ಕಾರಣ ಏನು? ಎಂಬುದನ್ನು ಸ್ವತಃ ಮೋದಿ ಅವರೇ ಬಹಿರಂಗಪಡಿಸಿದ್ದಾರೆ.

ಇಂದಿಗೂ ಮೋದಿಯೇ ಅತ್ಯುತ್ತಮ ಪ್ರಧಾನಿ: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ

ಶುಕ್ರವಾರ ನವದೆಹಲಿಯಲ್ಲಿ ನಡೆದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಕಾರ್ಯಕ್ರಮದಲ್ಲಿ ತಮ್ಮ ಹೊಳೆಯುವ ಮುಖಕಾಂತಿಯ ರಹಸ್ಯವನ್ನು ಮೋದಿ ಬಹಿರಂಗಪಡಿಸಿದ್ದಾರೆ.

ಬೆವರಿನಲ್ಲಿಯೇ ಮುಖ ಮಸಾಜ್ ಮಾಡಿಕೊಳ್ಳುತ್ತೇನೆ

ಬೆವರಿನಲ್ಲಿಯೇ ಮುಖ ಮಸಾಜ್ ಮಾಡಿಕೊಳ್ಳುತ್ತೇನೆ

ಮೋದಿ ಅವರು ಬಾಲ ಪುರಸ್ಕಾರ ಸಮಾರಂಭದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡುತ್ತಾ, ""ಹಲವು ವರ್ಷಗಳ ಹಿಂದೆ ಯಾರೋ ಒಬ್ಬರು ನನ್ನ ಬಳಿ ಕೇಳಿದ್ದರು. ನಿಮ್ಮ ಮುಖ ಇಷ್ಟೊಂದು ಕಾಂತಿಯುಕ್ತವಾಗಿರಲು ಕಾರಣ ಏನು ಎಂದು. ಆಗ ನಾನು ತುಂಬ ಸರಳವಾಗಿ ಅವರಿಗೆ ಉತ್ತರಿಸಿದ್ದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಆಗ ಮುಖದಿಂದ ಬೆವರಿಳಿಯುತ್ತದೆ. ಕೆಲಸ ಮಾಡಿ ಬೆವರಿನಲ್ಲಿಯೇ ನನ್ನ ಮುಖ ಮಸಾಜ್ ಮಾಡಿಕೊಳ್ಳುತ್ತೇನೆ. ಹಾಗಾಗಿಯೇ ನನ್ನ ಮುಖ ಫಳ ಫಳ ಹೊಳೆಯುತ್ತದೆ ಎಂದು ಹೇಳಿದ್ದೆ'' ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಮಕ್ಕಳು ದೈಹಿಕ ಶ್ರಮ ಪಡಬೇಕು

ಮಕ್ಕಳು ದೈಹಿಕ ಶ್ರಮ ಪಡಬೇಕು

""ನೀರು ಮತ್ತು ಜ್ಯೂಸ್ ಕುಡಿದರೆ ಮಾತ್ರ ಆರೋಗ್ಯವಾಗಿರುವುದಿಲ್ಲ. ಶಾರೀರಿಕವಾಗಿ ನಾವು ದಿನನಿತ್ಯ ಚಟುವಟಿಕೆಯಿಂದಿರಬೇಕು. ಅಂದಾಗ ಮಾತ್ರ ನಮ್ಮ ಮುಖ ಇತರರಿಗೆ ಕಾಂತಿಯುಕ್ತವಾಗಿ ಕಾಣುತ್ತದೆ'' ಎಂದು ಮೋದಿ ಅವರು ಮಕ್ಕಳಿಗೆ ದೈಹಿಕ ಶ್ರಮದ ಮಹತ್ವವನ್ನು ಅರಿವು ಮಾಡಿಸಿದ್ದಾರೆ. ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು 5ರಿಂದ 18 ವರ್ಷದೊಳಗಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ ನೀಡಲಾಗುತ್ತದೆ. ಪ್ರಶಸ್ತಿಯು ಪದಕ, 1 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣಪತ್ರಗಳನ್ನು ಹೊಂದಿರುತ್ತದೆ.

ಪೌರತ್ವ: ಮೋದಿ ವಿರುದ್ದ ತಿರುಗಿಬಿದ್ದ ಪತ್ನಿ ಜಶೋಧಾ ಬೆನ್, ಸತ್ಯಾಸತ್ಯತೆ

ಮುಖ ಹೊಳೆಯಲು ಅಣಬೆ ತಿನ್ನುತ್ತಾರೆ

ಮುಖ ಹೊಳೆಯಲು ಅಣಬೆ ತಿನ್ನುತ್ತಾರೆ

ಮೋದಿಯವರ ಹೊಳೆಯುವ ಮುಖ ಕಾಂತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. "ಮೋದಿಯವರು ತಮ್ಮ ಮುಖ ಫಳಫಳನೇ ಹೊಳೆಯಲು ಸಾಕಷ್ಟು ಖರ್ಚು ಮಾಡುತ್ತಾರೆ. ದುಬಾರಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದರು. ಶಾಸಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್‌ನಲ್ಲಿದ್ದಾಗ (ಈಗ ಬಿಜೆಪಿ), ಮೋದಿ ಮುಖ ಕಾಂತಿಗಾಗಿ ತೈವಾನ್ ದೇಶದ 80 ಸಾವಿರ ರುಪಾಯಿ ಬೆಲೆಯ ಅಣಬೆ (ಮಶ್ರೂಮ್) ತಿನ್ನುತ್ತಾರೆ. ದಿನಕ್ಕೆ ಇಂತಹ ಐದು ಅಣಬೆಗಳನ್ನು ಮೋದಿ ತಿನ್ನುತ್ತಾರೆ ಎಂದು ಎಂದು ಅವರ ವಿರೋಧಿಗಳು ಟೀಕಿಸಿದ್ದರು.

ಪ್ರತಿದಿನ ವ್ಯಾಕ್ಸ್​ ಮಾಡಿಸಿಕೊಳ್ಳುತ್ತಾರೆ

ಪ್ರತಿದಿನ ವ್ಯಾಕ್ಸ್​ ಮಾಡಿಸಿಕೊಳ್ಳುತ್ತಾರೆ

ಮೋದಿ ಅವರಿಗೆ ಚುಚ್ಚು ಮಾತುಗಳ ಮೂಲಕ ಸದಾ ಟೀಕಿಸುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಸಹ ಮೋದಿ ಮುಖ ಕಾಂತಿಯ ಬಗ್ಗೆ ಕಾಮೆಂಟ್ ಮಾಡಿದ್ದರು. ನರೇಂದ್ರ ಮೋದಿ ಪ್ರತಿದಿನ ಬೆಳಿಗ್ಗೆ ವ್ಯಾಕ್ಸ್​ ಮಾಡಿಸಿಕೊಂಡು ಮನೆಯಿಂದ ಹೊರಡುತ್ತಾರೆ. ಹಾಗಾಗಿ ಅವರ ಮುಖ ಫಳಫಳ ಹೊಳೆಯುತ್ತದೆ ಎಂದು ಟೀಕಿಸಿದ್ದರು.

ಇಂದಿಗೂ ಮೋದಿಯೇ ಅತ್ಯುತ್ತಮ ಪ್ರಧಾನಿ: 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ

English summary
Narendra Modi revealed his shining face Reason at the Prime Minister's National Child Award Program in New Delhi on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X