• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಜಯಂತಿ: ರಾಜ್ ಘಾಟ್‌ಗೆ ತೆರಳಿ ನಮಸ್ಕರಿಸಿದ ಪ್ರಧಾನಿ ಮೋದಿ

|

ನವದೆಹಲಿ, ಅಕ್ಟೋಬರ್ 02: ದೇಶಾದ್ಯಂತ ಇಂದು ಮಹಾತ್ಮಾ ಗಾಂಧಿ ಅವರ 151 ನೇ ಜನ್ಮ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರವ್ಯಾಪಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ ಘಾಟ್ ಗೆ ಭೇಟಿ ನೀಡಿ, ಗಾಂಧಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಭೇಟಿಗೂ ಮುನ್ನ ನಾವು ಗಾಂಧಿ ಜಯಂತಿಯಂದು ಪ್ರೀತಿಯ ಬಾಪುವಿಗೆ ನಮಸ್ಕರಿಸುತ್ತೇವೆ. ಅವರ ಜೀವನ ಮತ್ತು ಉದಾತ್ತ ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ರಚಿಸುವಲ್ಲಿ ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ ಎಂದಿದ್ದಾರೆ.

 ಪ್ರಧಾನಿ ಮೋದಿಗೆ ಹೊಸ ರಥ: ಭಾರತಕ್ಕೆ VVIP ವಿಮಾನ ಬೋಯಿಂಗ್ ಬಿ 777 ಪ್ರಧಾನಿ ಮೋದಿಗೆ ಹೊಸ ರಥ: ಭಾರತಕ್ಕೆ VVIP ವಿಮಾನ ಬೋಯಿಂಗ್ ಬಿ 777

ರಾಜ್ ಘಾಟ್‌ ಭೇಟಿ ಬಳಿಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಇರುವ ವಿಜಯ್ ಘಾಟ್ ಗೆ ತೆರಳಿ ನಮನ ಸಲ್ಲಿಸಲಿದ್ದಾರೆ.

'' ಲಾಲ್ ಬಹದ್ದೂರ್ ಶಾಸ್ತ್ರಿ ಜೀ ವಿನಮ್ರ ಮತ್ತು ದೃಢವಾಗಿದ್ದ ವ್ಯಕ್ತಿತ್ವದವರು. ಅವರು ಸರಳತೆಯನ್ನು ನಿರೂಪಿಸಿದರು ಮತ್ತು ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದರು. ಭಾರತಕ್ಕಾಗಿ ಅವರು ಮಾಡಿದ ಎಲ್ಲ ಸೇವೆಗೂ ಆಳವಾದ ಕೃತಜ್ಞತೆಯೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ'' ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.

English summary
Prime Minister Narendra Modi pays tribute to Mahatma Gandhi At Raj Ghat on his birth anniversary today. and also pays tribute to former PM Lal Bahadur Shastri at Vijay Ghat, on his birth anniversary today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X