ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

|
Google Oneindia Kannada News

ನವದೆಹಲಿ, ನವೆಂಬರ್ 26: ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

"ಅವರ ಫುಟ್ಬಾಲ್ ವೃತ್ತಿ ಜೀವನದುದ್ದಕ್ಕೂ ಅವರು ಮೈದಾನದಲ್ಲಿ ಕೆಲವು ಅತ್ಯುತ್ತಮ ಕ್ರೀಡಾ ಕ್ಷಣಗಳನ್ನು ನಮಗೆ ನೀಡಿದ್ದರು. ಅವರ ಅಕಾಲಿಕ ಸಾವು ನಮ್ಮೆಲ್ಲರನ್ನೂ ದುಃಖಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪ್ರಧಾನಿ ಹೇಳಿದ್ದಾರೆ.

ಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿ

ಕೊಕೇನ್ ಬಳಕೆ ಮತ್ತು ಸ್ಥೂಲಕಾಯದೊಂದಿಗೆ ಹೋರಾಡುವ ಮುನ್ನ ಅರ್ಜೆಂಟೀನಾದ ಮರಡೋನಾ ಅವರು ಶ್ರೇಷ್ಠ ಆಟಗಾರರಾಗಿದ್ದರು. 1986 ರ ವಿಶ್ವಕಪ್ ಪ್ರಶಸ್ತಿಯಲ್ಲಿ ತನ್ನ ದೇಶವನ್ನು ಮುನ್ನಡೆಸಿದ್ದ ಡಿಯಾಗೋ ಮರಡೋನಾ ಅವರು ನವೆಂಬರ್ 25 ರ ಬುಧವಾರ ನಿಧನರಾಗಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು.

Prime Minister Narendra Modi Mourns The Death Of Football Legend Diego Maradona

ಡಿಯಾಗೋ ಮರಡೋನಾ ಅವರ ನಿಧನದಿಂದಾಗಿ ಅರ್ಜೆಂಟೀನಾ ಅಧ್ಯಕ್ಷರ ಕಚೇರಿ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ತೀರ್ಪು ನೀಡಿದ್ದು ಮತ್ತು ಅರ್ಜೆಂಟೀನಾದ ಸಾಕರ್ ಅಸೋಸಿಯೇಷನ್ ​​ಟ್ವಿಟರ್‌ನಲ್ಲಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಮರಡೋನಾ ಅವರ ಮಿದುಳಿನ ಶಸ್ತ್ರಚಿಕಿತ್ಸೆಯ ನಂತರ ಬ್ಯೂನಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ವಾರಕ್ಕೆ ನಿಧನರಾಗಿದ್ದಾರೆ.

1986ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಚೆಂಡನ್ನು ಇಂಗ್ಲೆಂಡ್‌ನ ಬಲೆಗೆ ಹೊಡೆದ "ಹ್ಯಾಂಡ್ ಆಫ್ ಗಾಡ್' ಗೋಲಿಗೆ ಹೆಸರು ವಾಸಿಯಾಗಿದ್ದ ಮರಡೋನಾ, ಎರಡು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಮೋಡಿ ಮಾಡಿದ್ದರು.

ಮರಡೋನಾ ಅವರ ವ್ಯಸನಗಳಿಂದಾಗಿ ಮತ್ತು ರಾಷ್ಟ್ರೀಯ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಅವರ ಖ್ಯಾತಿಗೆ ಕಳಂಕ ಬಂದಿದ್ದರೂ, ಅವರು ಸಾಕರ್-ಹುಚ್ಚು ಅರ್ಜೆಂಟೀನಾದಲ್ಲಿ "ಪೈಬೆ ಡಿ ಓರೊ" ಅಥವಾ "ಗೋಲ್ಡನ್ ಬಾಯ್' ಎಂದು ಪೂಜಿಸಲ್ಪಟ್ಟಿದ್ದರು.

ಅವರು ಧರಿಸಿದ್ದ ಸಂಖ್ಯೆ 10 ನಂಬರಿನ ಜೆರ್ಸಿ ಅವರೊಂದಿಗೆ ಸಮಾನಾರ್ಥಕವಾದಂತಿತ್ತು. ಇದು ಬ್ರೆಜಿಲ್ ನ ಮಹಾನ್ ಆಟಗಾರ ಪೀಲೆ ಹಾಗೂ ಮರಡೋನಾರನ್ನು ಸಾರ್ವಕಾಲಿಕ ಅತ್ಯುತ್ತಮ ಜೋಡಿ ಎಂದು ಕರೆಯಲಾಗುತ್ತದೆ.

ವೇಗವಾದ ಮತ್ತು ಸಂಪೂರ್ಣ ಅನಿರೀಕ್ಷಿತ ದಾಳಿಯ ಮಾಸ್ಟರ್ ಆಗಿದ್ದ ಮರಡೋನಾ, ಚೆಂಡನ್ನು ಸುಲಭವಾಗಿ ಕಣ್ಕಟ್ಟು ಮಾಡಿದಂತೆ ಅವರು ಇನ್ನೊಬ್ಬರಿಗೆ ಕಳಿಸುತ್ತಿದ್ದರು.

English summary
Prime Minister Narendra Modi has condoled the death of football legend, Diego Maradona of Argentina, in a tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X