ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ವಲಸಿಗರು ಅನ್ನೋದಾ?

|
Google Oneindia Kannada News

ದೆಹಲಿ, ಡಿಸೆಂಬರ್.01: ಭಾರತದಲ್ಲಿ ನಾಗರಿಕ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರೊಬ್ಬರು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ವಲಸಿಗರು ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ವಲಸಿಗರೇ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರ್ ಹೇಳಿದ್ದಾರೆ. ಗುಜರಾತ್ ಮೂಲದ ಈ ಇಬ್ಬರು ನಾಯಕರು ದೆಹಲಿಗೆ ವಲಸೆ ಬಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?

ಭಾರತ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರುವ ದೇಶವಲ್ಲ ಎಂದಿರುವ ಅಧೀರ್ ರಂಜನ್ ಚೌಧರಿ, ಕೇಂದ್ರ ಸರ್ಕಾರದ ನಾಗರಿಕ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಾಗರಿಕ ಮಸೂದೆ ಮೂಲಕ ದೇಶವನ್ನು ಧರ್ಮದ ಆಧಾರದಲ್ಲಿ ಕೇಂದ್ರ ಸರ್ಕಾರ ಇಬ್ಭಾಗಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ದೆಹಲಿಗೆ ವಲಸೆ ಬಂದವರೇ ಈ ಗುಜರಾತಿಗಳು!

ದೆಹಲಿಗೆ ವಲಸೆ ಬಂದವರೇ ಈ ಗುಜರಾತಿಗಳು!

ಭಾರತದಲ್ಲಿ ಹಿಂದೂಗಳೂ ಇದ್ದಾರೆ, ಮುಸ್ಲೀಂರೂ ಇದ್ದಾರೆ. ಈ ದೇಶ ಎರಡೂ ಧರ್ಮದ ಜನರಿಗೆ ಸೇರಿದ್ದಾಗಿದೆ. ಒಂದು ಸಮುದಾಯವನ್ನು ಹೊರಗಟ್ಟುವ ಅಧಿಕಾರ ಇಲ್ಲಿ ಯಾರಿಗೂ ಇಲ್ಲ. ಆದರೆ, ಕೇಂದ್ರ ಸರ್ಕಾರ ಹಿಂದೂಗಳನ್ನಷ್ಟೇ ಉಳಿಸಿಕೊಂಡು ಮುಸ್ಲಿಂರನ್ನು ದೇಶದಿಂದ ಹೊರ ಕಳುಹಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಧೀರ್ ರಂಜನ್ ಹೇಳಿಕೆಯಲ್ಲಿ ಶಾ ಮಾತು ಪ್ರಸ್ತಾಪ

ಅಧೀರ್ ರಂಜನ್ ಹೇಳಿಕೆಯಲ್ಲಿ ಶಾ ಮಾತು ಪ್ರಸ್ತಾಪ

ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಹೇಳಿಕೆಯನ್ನೂ ಕೂಡಾ ಅಧೀರ್ ರಂಜನ್ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರದ ನಾಗರಿಕ ಕಾಯ್ದೆ ದೇಶದ ಹಿಂದೂಗಳು, ಬುದ್ಧರು, ಜೈನರು, ಪಾರ್ಸಿಗಳು, ಕ್ರಿಶ್ಚಿಯನ್ನರು, ಸಿಖ್ಖ್ ರಿಗೆ ಅನುಕೂಲಕರವಾಗಲಿದೆ ಎಂದು ಹೇಳಿದ್ದಾರೆ. ಅಂದರೆ, ಭಾರತವನ್ನು ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ದಿಂದ ದೇಶಕ್ಕೆ ಆಗಮಿಸಿರುವ ವಲಸಿಗರನ್ನು ಧರ್ಮದ ಆಧಾರದಲ್ಲಿ ವಿಂಗಡಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಪಾಕ್ ನಿಂದ ವಲಸೆ ಬಂದಿದ್ದ ಹಿಂದೂಗಳಿಗೆ ಭಾರತದ ಪೌರತ್ವಪಾಕ್ ನಿಂದ ವಲಸೆ ಬಂದಿದ್ದ ಹಿಂದೂಗಳಿಗೆ ಭಾರತದ ಪೌರತ್ವ

ವಿದೇಶಗಳಲ್ಲಿ ನಮ್ಮ ಭಾರತೀಯರೇ ವಲಸಿಗರು!

ವಿದೇಶಗಳಲ್ಲಿ ನಮ್ಮ ಭಾರತೀಯರೇ ವಲಸಿಗರು!

ವಿಶ್ವದಲ್ಲಿ ಅತಿಹೆಚ್ಚು ವಲಸಿಗರು ಎಂದರೆ ಭಾರತೀಯರೇ ಆಗಿದ್ದಾರೆ. ಹಲವು ರಾಷ್ಟ್ರಗಳಲ್ಲಿ ಭಾರತದ ಅದೆಷ್ಟೋ ಲಕ್ಷ ಲಕ್ಷ ಜನರು ಉದ್ಯೋಗಕ್ಕಾಗಿ ತೆರಳಿದ್ದಾರೆ. ಅಲ್ಲಿಯೇ ನೆಲೆಸಿದ್ದು, ಭಾರತಕ್ಕೆ ಕೋಟಿ ಕೋಟಿ ರೂಪಾಯಿ ಹಣವನ್ನು ದುಡಿದುಕೊಂಡು ಬಂದಿದ್ದಾರೆ. ಇನ್ನು ಅದೆಷ್ಟು ಜನರು ಇಲ್ಲಿ ವಾಸಿಸಿರುವ ತಮ್ಮವರಿಗಾಗಿ ನೀಡುತ್ತಿದ್ದಾರೆ. ಆ ಮೂಲಕ ನಮ್ಮ ದೇಶಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಆದರೆ, ಅಂಥ ವಲಸಿಗರ ಬಗ್ಗೆ ವಿದೇಶಗಳಲ್ಲಿ ಯಾವುದೇ ಕಾನೂನುಗಳನ್ನು ವಿದೇಶಗಳು ಜಾರಿಗೊಳಿಸಿಲ್ಲ. ಭಾರತದಲ್ಲಿ ಬದುಕಲು ಬಂದವರಿಗೆ ಮಾತ್ರ ಏಕೆ ಈ ನಾಗರಿಕ ಕಾಯ್ದೆ ಬೇಕು ಎಂದು ರಂಜನ್ ಪ್ರಶ್ನೆ ಮಾಡಿದ್ದಾರೆ.

ಭಾರತದ ನಾಗರಿಕ ಮಸೂದೆಯಲ್ಲಿ ಇರುವುದೇನು?

ಭಾರತದ ನಾಗರಿಕ ಮಸೂದೆಯಲ್ಲಿ ಇರುವುದೇನು?

ಕೇಂದ್ರ ಸರ್ಕಾರದ ನಾಗರಿಕ ಮಸೂದೆಯನ್ನು ಕಳೆದ 2019ರ ಜನವರಿ 8ರಂದು ಮಂಡಿಸಲಾಗಿತ್ತು. ಈ ಮಸೂದೆ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ್, ಅಫ್ಘಾನಿಸ್ತಾನ್ ದಿಂದ ಭಾರತಕ್ಕೆ ಆಗಮಿಸಿ ನೆಲೆ ಕಂಡುಕೊಂಡಿರುವ ಜನರಿಗೆ ದೇಶದ ನಾಗರಿಕ ಸೌಲಭ್ಯ ಒದಗಿಸುವುದು ಮಸೂದೆಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಡಿಸೆಂಬರ್.31, 2014ರೊಳಗೆ ದೇಶಕ್ಕೆ ವಲಸೆ ಬಂದಿರುವ ವಲಸಿಗರಿಗೆ ಇದು ಅನ್ವಯವಾಗಲಿದೆ. ಆದರೆ, ಮುಸ್ಲಿಮೇತರ ವಲಸಿಗರ ಬಗ್ಗೆ ಮಾತ್ರ ಮಸೂದೆಯಲ್ಲಿ ಉಲ್ಲೇಖಿಸಿದ್ದು, ಇದೊಂದು ಧರ್ಮಾಧಾರಿತ ವಿಂಗಡಣೆ ಎನ್ನುವುದು ವಿರೋಧ ಪಕ್ಷಗಳ ಆರೋಪವಾಗಿದೆ.

English summary
Prime Minister Narendra Modi And Amit Shah Are Migrants. Congress Leader Adhir Ranjan Chowdhury.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X