ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯದ ಸಂಚಾರ ವ್ಯವಸ್ಥೆಗೆ ಏಳು 'C' ಸೂತ್ರ ಮುಂದಿಟ್ಟ ಮೋದಿ

By Manjunatha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಭಾರತದ ನಗರಗಳನ್ನು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಮುಕ್ತ ಮಾಡುವ ಉದ್ದೇಶದಿಂದ ನವದೆಹಲಿಯಲ್ಲಿ ಆಯೋಜಿತವಾಗಿರುವ ಜಾಗತಿಕ ಮೊಬಿಲಿಟಿ ಶೃಂಗಸಭೆಯನ್ನು (MOVE) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.

ಎರಡು ದಿನದ ಜಾಗತಿಕ ಮಟ್ಟದ ಶೃಂಗಸಭೆಯನ್ನು ನೀತಿ ಆಯೋಗವು ಆಯೋಜಿಸಿದ್ದು. ಜಾಗತಿಕ ಮಟ್ಟದ ಹಲವು ತಜ್ಞರು ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಹಲವು ತಜ್ಞರು ವಾಯು ಮಾಲಿನ್ಯ ನಿಯಂತ್ರಣಕ್ಕೆ ತಮ್ಮ ಯೋಜನೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ.

ಮೋದಿ ಜತೆ ವಿದೇಶಕ್ಕೆ ಪ್ರಯಾಣಿಸಿದವರ ಹೆಸರು ಬಹಿರಂಗಕ್ಕೆ ಸೂಚನೆಮೋದಿ ಜತೆ ವಿದೇಶಕ್ಕೆ ಪ್ರಯಾಣಿಸಿದವರ ಹೆಸರು ಬಹಿರಂಗಕ್ಕೆ ಸೂಚನೆ

ಉದ್ಘಾಟನೆ ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು, ಉತ್ತಮ ಸಂಚಾರ ವ್ಯವಸ್ಥೆಗೆ ಏಳು 'C' ಸೂತ್ರ ಮುಂದಿಟ್ಟರು. Common (ಸಾಮಾನ್ಯ ಸಂಚಾರ), Connected (ಸಂಪರ್ಕ), Convenient (ಸುಗಮ), Congestion-free (ದಟ್ಟಣೆ ರಹಿತ), Charged (ಮರುಬಳಕೆ ಮಾಡಬಹುದಾದ), Clean (ಸ್ವಚ್ಛ), Cutting-edge (ಕೊರತೆ ಇಲ್ಲದ) ಸಂಚಾರ ವ್ಯವಸ್ಥೆ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Prime Minister Narendra Modi inaugurated 1st Global Mobility Summit

ಸುಳ್ಳು ಕೇಸ್ ದಾಖಲು ಆರೋಪ: ಮೋದಿ ಟೀಕಾಕಾರ ಸಂಜೀವ್ ಭಟ್ಸುಳ್ಳು ಕೇಸ್ ದಾಖಲು ಆರೋಪ: ಮೋದಿ ಟೀಕಾಕಾರ ಸಂಜೀವ್ ಭಟ್

ಉತ್ತಮ ಸಂಚಾರ ವ್ಯವಸ್ಥೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಸಂಚಾರ ವ್ಯವಸ್ಥೆ ಉತ್ತಮವಾಗಿದ್ದರೆ ಜೀವನ ಶೈಲಿ ಸುಧಾರಣೆಗೆ ಅನುಕೂಲ ಎಂದು ಹೇಳಿದ ಅವರು ಎಲೆಕ್ಟ್ರಿಕ್ ವಾಹನಗಳು ಮುಂದಿನ ಪೀಳಿಗೆಯ ಸಂಚಾರ ಸಾಧನಗಳಾಗಬೇಕು ಎಂದು ಪ್ರತಿಪಾದಿಸಿದರು.

English summary
Prime minister Narendra Modi inaugurated 1st Global Mobily Summit in New Delhi today. He shares vision for the future of mobility in India is based on 7 C’s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X