ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಪ್ರಕಾರ; ಭಾರತೀಯರನ್ನು ಕಾಡುತ್ತಿದೆಯಾ ಆ 'ಅಗೋಚರ ಶತ್ರು'?

|
Google Oneindia Kannada News

ನವದೆಹಲಿ, ಜೂನ್.01: ವಿಶ್ವವನ್ನೇ ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ಮಹಾಮಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ. ಕೊವಿಡ್-19 ಎಂಬುದು ಅಗೋಚರ ಶತ್ರು ಎಂದು ಮೋದಿ ಹೇಳಿದ್ದಾರೆ.

Recommended Video

ಎಲ್ಲಾ ಕ್ರಿಕೆಟ್ ಪಂದ್ಯಗಳು ಮೊದಲೇ ಫಿಕ್ಸ್ ಆಗಿರುತ್ತವೆಯೇ ? | Oneindia Kannada

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಜತ ಮಹೋತ್ಸವ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ವೈದ್ಯಕೀಯ ತರಬೇತಿ ಕ್ಷೇತ್ರದಲ್ಲಿ ಅದ್ಭುತ ಕೆಲಸವನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು. ನಂತರದಲ್ಲಿ ಕಣ್ಣಿಗೆ ಕಾಣದ ಅಗೋಚರ ಶತ್ರುವಾಗಿರುವ ಕೊರೊನಾ ವೈರಸ್ ವಿರುದ್ಧ ನಮ್ಮ ವಾರಿಯರ್ಸ್ ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ಹೇಳಿದರು.

ದೇಶದ ಜನತೆಗೆ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಕೊಟ್ಟ ಮೋದಿದೇಶದ ಜನತೆಗೆ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಕೊಟ್ಟ ಮೋದಿ

ವಿಶ್ವ ಕಂಡ ಎರಡು ಜಾಗತಿಕ ಯುದ್ಧಗಳು ಸೃಷ್ಟಿಸಿದಕ್ಕಿಂತ ಹೆಚ್ಚಿನ ಬಿಕ್ಕಟ್ಟನ್ನು ಕೊರೊನಾ ವೈರಸ್ ಸೃಷ್ಟಿ ಮಾಡುತ್ತಿದೆ. ಈ ಹಿಂದೆ ಎರಡು ಜಾಗತಿಕ ಯುದ್ಧಗಳು ನಡೆದ ನಂತರ ವಿಶ್ವದ ಸ್ಥಿತಿಗತಿಗಳೇ ಬದಲಾಗಿ ಬಿಟ್ಟಿದ್ದವು. ಕೊವಿಡ್-19 ಬಿಕ್ಕಟ್ಟು ನಿವಾರಣೆ ನಂತರವೂ ಜಗತ್ತು ಮತ್ತೊಂದು ಹಂತಕ್ಕೆ ಬಂದು ನಿಂತಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಕೊರೊನಾ ವಾರಿಯರ್ಸ್ ಗೆ ಪ್ರಧಾನಿ ಕೃತಜ್ಞತೆ

ಕೊರೊನಾ ವಾರಿಯರ್ಸ್ ಗೆ ಪ್ರಧಾನಿ ಕೃತಜ್ಞತೆ

ನೊವೆಲ್ ಕೊರೊನಾ ವೈರಸ್ ರೀತಿಯ ಬಿಕ್ಕಟ್ಟನ್ನು ಎದುರಿಸಲು ಹೆಗಲು ಕೊಟ್ಟು ನಿಂತಿರುವ ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ, ವೈಜ್ಞಾನಿಕ ಸಮುದಾಯಕ್ಕೆ ಇಡೀ ಜಗತ್ತು ಕೃತಜ್ಞತೆ ಸಲ್ಲಿಸುವ ಸಂದರ್ಭ ಇದಾಗಿದೆ. ಕೊರೊನಾ ವಾರಿಯರ್ಸ್ ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಕೃತಜ್ಞತೆ ಸಲ್ಲಿಸಿದರು.

ಬುದ್ಧಿವಂತಿಕೆಯ ಹೋರಾಟದ ಬಗ್ಗೆ ಪ್ರಧಾನಿ ಉಲ್ಲೇಖ

ಬುದ್ಧಿವಂತಿಕೆಯ ಹೋರಾಟದ ಬಗ್ಗೆ ಪ್ರಧಾನಿ ಉಲ್ಲೇಖ

ಕೊರೊನಾ ವೈರಸ್ ಸೋಂಕು ಹರಡುವಿಕೆಯು ಜಗತ್ತನ್ನು ಬಾಧಿಸುತ್ತಿದೆ. ಇಂಥ ಸಂದಿಗ್ಘ ಪರಿಸ್ಥಿತಿಯಲ್ಲಿಯೂ ಕೂಡಾ ಭಾರತವು ವೈಜ್ಞಾನಿಕ ಸಮುದಾಯ, ವೈದ್ಯರು ಸೇರಿದಂತೆ ಕೊರೊನಾ ವಾರಿಯರ್ಸ್ ನ್ನು ಮುಂದಿಟ್ಟುಕೊಂಡು ಕೊರೊನಾ ವೈರಸ್ ವಿರುದ್ಧ ಬುದ್ಧಿವಂತಿಕೆಯಿಂದ ಹೋರಾಟ ನಡೆಸುತ್ತಿದೆ ಎಂದು ಮೋದಿ ತಿಳಿಸಿದರು.

ಯೋಧರಿಗೆ ವೈದ್ಯಕೀಯ ಸಿಬ್ಬಂದಿಯ ಹೋಲಿಕೆ

ಯೋಧರಿಗೆ ವೈದ್ಯಕೀಯ ಸಿಬ್ಬಂದಿಯ ಹೋಲಿಕೆ

ದೇಶದೊಳಗೆ ಲಗ್ಗೆ ಇಟ್ಟಿರುವ ಕೊರೊನಾ ವೈರಸ್ ಎಂಬ ಅಗೋಚರ ಶಕ್ತಿಯ ವಿರುದ್ಧ ಭಾರತೀಯರನ್ನು ರಕ್ಷಿಸುವುದಕ್ಕೆ ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಗಡಿಯಲ್ಲಿ ದೇಶ ರಕ್ಷಣೆಗೆ ಯೋಧರು ಪಣ ತೊಟ್ಟಿದ್ದರೆ, ದೇಶದೊಳಗೆ ಪ್ರಜೆಗಳನ್ನು ರಕ್ಷಿಸಲು ಯೋಧರ ಸಮವಸ್ತ್ರವಿಲ್ಲದೇ ವೈದ್ಯರು ಯೋಧರಂತೆ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಗೋಚರ ಶತ್ರುವಿನ ವಿರುದ್ಧ ಅಜೇಯ ಹೋರಾಟ

ಅಗೋಚರ ಶತ್ರುವಿನ ವಿರುದ್ಧ ಅಜೇಯ ಹೋರಾಟ

ಕೊರೊನಾ ವೈರಸ್ ಕಣ್ಣಿಗೆ ಕಾಣದ ಅಗೋಚರ ಶತ್ರುವಿನಂತೆ ಭಾರತೀಯರನ್ನು ಕಾಡುತ್ತಿದೆ. ಆದರೆ ಅಗೋಚರ ಶತ್ರುವಿನ ವಿರುದ್ಧ ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅಜೇಯವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಯುದ್ಧದಲ್ಲಿ ನಮ್ಮ ಕೊರೊನಾ ವಾರಿಯರ್ಸ್ ಖಂಡಿತವಾಗಿಯೂ ಗೆಲವು ಸಾಧಿಸುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Prime Minister Narendra Modi called coronavirus an invisible enemy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X