ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದ ಪರ್ವತ ಏರಿದ ಬಾಲಕಿಯನ್ನು ಹೊಗಳಿದ ಮೋದಿ

|
Google Oneindia Kannada News

ನವದೆಹಲಿ, ಫೆಬ್ರವರಿ.23: ಅತಿ ಕಿರಿಯ ವಯಸ್ಸಿನಲ್ಲಿ ಪರ್ವತಾರೋಹಿ ಎನಿಸಿರುವ ಭಾರತೀಯ ಮೂಲದ ಕಾಮ್ಯ ಕಾರ್ತಿಕೇಯನ್ ರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಭಾನುವಾರ 62ನೇ ಮನ್ ಕೀ ಬಾತ್ ಅನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

12ನೇ ವಯಸ್ಸಿನಲ್ಲಿ ದಕ್ಷಿಣ ಅಮೆರಿಕಾದ ಅರ್ಜೆಂಟೀನಾದಲ್ಲಿ ಇರುವ 6962 ಮೀಟರ್ ಎತ್ತರದ ಮೌಂಟ್ ಅಕಾಂಕಗು ಪರ್ವತ ಪರ್ವತವನ್ನು ಕಾಮ್ಯಾ ಕಾರ್ತಿರೇಯನ್ ಏರಿ ಭಾರತ ಧ್ವಜವನ್ನು ನೆಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿ ಸ್ಮರಿಸಿದರು. ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರದ ಪರ್ವತವನ್ನು ಏರಿವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಕೀರ್ತಿಯನ್ನು ಬೆಳಕಿದ್ದಾಳೆ ಎಂದು ಪ್ರಧಾನಿ ಹೇಳಿದರು.

ಮೋದಿ ದಾರ್ಶನಿಕ, ಬಹುಮುಖ ಪ್ರತಿಭೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ಲಾಘನೆಮೋದಿ ದಾರ್ಶನಿಕ, ಬಹುಮುಖ ಪ್ರತಿಭೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ಲಾಘನೆ

ಇಂಡಿಯಾ ಗೇಟ್ ಬಳಿ ನಡೆದ ಕರಕುಶಲ ಮೇಳದ ಬಗ್ಗೆಯೂ ಪ್ರಧಾನಮಂತ್ರಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದರು. ಹುನಾರ್ ಹಾತ್ ಭಾರತದ ಏಕತೆ ಮತ್ತು ವೈವಿಧ್ಯತೆಗೆ ಸಾಕ್ಷಿಯಾಗುತ್ತದೆ. ಪ್ರತಿಯೊಬ್ಬ ಭಾರತೀಯರು ಕೂಡಾ ಈ ಮೇಳಕ್ಕೆ ಒಮ್ಮೆ ಭೇಟಿ ಕೊಡಬೇಕು ಎಂದು ಮೋದಿ ಕರೆ ನೀಡಿದರು.

Prime Minister Narendra Modi Address 62th Mann Ki Baat At New Delhi

ಮಹಿಳಾ ಸಬಲೀಕರಣದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ನಾರಿಶಕ್ತಿ ದಿನೇ ದಿನೆ ಬೆಳೆಯುತ್ತಿದೆ. ನಮ್ಮ ದೇಶದ ಮಹಿಳೆಯರ ಉದ್ಯಮಶೀಲತೆ, ಅವರ ಧೈರ್ಯ, ಸಾಹಸವು ಎಲ್ಲರಲ್ಲೂ ಹೆಮ್ಮೆ ಮೂಡಿಸುತ್ತದೆ ಎಂದರು.

ಇದೇ ವೇಳೆ ಇಸ್ರೋ ವಿಜ್ಞಾನಿಗಳ ಬಗ್ಗೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಚಂದ್ರಯಾನ-2 ಉಡಾವಣೆಗೆ ತಾವು ಬೆಂಗಳೂರಿಗೆ ತೆರಳಿದ್ದ ಸಮಯವನ್ನು ಪ್ರಧಾನಿ ಸ್ಮರಿಸಿದರು. ಅಂದು ವಿದ್ಯಾರ್ಥಿಗಳ ಉತ್ಸಾಹಕ್ಕೆ ಸರಿಸಾಟಿಯೇ ಇರಲಿಲ್ಲ ಎಂದರು.

English summary
Prime Minister Narendra Modi Address 62th Mann Ki Baat At New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X