ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನ್ಮದಿನಕ್ಕೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 27: ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಜನ್ಮದಿನ ಹಿನ್ನೆಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ನಾಯಕರು ಶುಭಾಶಯ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನ್ಮದಿನ ಹಿನ್ನೆಲೆ ಕನ್ನಡದಲ್ಲೇ ಪತ್ರ ಬರೆಯುವ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಂತ್ರಿಮಂಡಲದ ಪ್ರಮುಖ ಸದಸ್ಯರಾಗಿ ತಮ್ಮ ಕಠಿಣ ಪರಿಶ್ರಮ, ಅಸೀಮ ಶಕ್ತಿ ಹಾಗೂ ನಿರಂತರ ಕಾರ್ಯಪ್ರವೃತ್ತಿಯಿಂದ ತಾವು ನವ ಭಾರತ ನಿರ್ಮಾಣ ಕಾರ್ಯದಲ್ಲಿ ಪಾತ್ರ ವಹಿಸಿರುತ್ತೀರಿ.

ಪ್ರತಿಯೊಬ್ಬರ ಜೀವನದ ಮಹತ್ವವನ್ನು ತಿಳಿಯುವಂತಹ ಅಪೂರ್ವ ಸಂದರ್ಭವು ಅವರ ಜನ್ಮದಿನವಾಗಿರುತ್ತದೆ. ಅದೇ ಸಮಯದಲ್ಲಿ ಈ ಜನ್ಮದಿನವು ನಮ್ಮ ಕುಟುಂಬ, ಸಮಾಜ ಮತ್ತು ದೇಶಕ್ಕೆ ನಮ್ಮ ಕರ್ತವ್ಯಗಳನ್ನು ಪೂರೈಸಲು ಇದು ನಮಗೆ ಪ್ರೇರಣೆ ನೀಡುವ ದಿನವೂ ಹೌದು.

Prime Minister Narendra Modi Wishes Union Minister Pralhad Joshi Birthday in Kannada Language

ನಾನು ಈ ಸಂದರ್ಭದಲ್ಲಿ ನಿಮ್ಮ ಜೀವನವು ಅರೋಗ್ಯ ಮತ್ತು ಸಂತೋಷಗಳಿಂದ ಸಮೃದ್ಧವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಚಿವ ಪ್ರಹ್ಲಾದ್ ಜೋಶಿಗೆ ಶುಭಾಶಯ ಕೋರಿದ್ದಾರೆ.

ಗೃಹ ಸಚಿವ ಸಚಿವ ಅಮಿತ್ ಶಾ ಶುಭಾಶಯ
ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಟ್ಟುಹಬ್ಬ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಶುಭಾಶಯ ತಿಳಿಸಿದ್ದಾರೆ. ಜೋಶಿ ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ದೇವರು ಜೋಶಿಯವರಿಗೆ ಆಯಸ್ಸು, ಆರೋಗ್ಯ ನೀಡಲಿ ಎಂದು ಅಮಿತ್ ಶಾ ಶುಭ ಹಾರೈಸಿದ್ದಾರೆ.

Prime Minister Narendra Modi Wishes Union Minister Pralhad Joshi Birthday in Kannada Language

ಪ್ರಧಾನಿಗೆ ಧನ್ಯವಾದ ತಿಳಿಸಿದ ಜೋಶಿ
ನನ್ನ ಜನ್ಮದಿನದಂದು ಪತ್ರದ ಮುಖಾಂತರ ಕನ್ನಡದಲ್ಲಿ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೋದಿಯವರ ಶುಭಾಶಯ ಅವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣಕ್ಕೆ ನನಗೆ ಇನ್ನಷ್ಟು ಪ್ರೇರಣೆ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾರವರಿಗೆ ಧನ್ಯವಾದಗಳು, ನಿಮ್ಮ ನಿರಂತರ ಬೆಂಬಲದ ನಿರೀಕ್ಷೆಯಲ್ಲಿದ್ದೇನೆ ಎಂದು ಗೃಹ ಸಚಿವ ಸಚಿವ ಅಮಿತ್ ಶಾ ಶುಭಾಶಯಕ್ಕೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

English summary
Prime Minister Modi, Minister Amit Shah and other leaders wishes to Union Minister Prahlad Joshi Birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X