ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರ ಕೆಲಸ ಹೆಮ್ಮೆ ತಂದಿದೆ- ಮೋದಿ

|
Google Oneindia Kannada News

ದೆಹಲಿ, ಜುಲೈ 4: ಕೊರೊನಾ ವೈರಸ್ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರ ಕೆಲಸ ಹೆಮ್ಮೆ ತಂದಿದೆ. ದೇಶದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

Recommended Video

Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

'ಸೇವಾ ಸಂಘಟನ್' ಹೆಸರಿನಲ್ಲಿ ಇಂದು ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ವಿವಿಧ ರಾಜ್ಯಗಳ ಬಿಜೆಪಿ ಕಾರ್ಯಕರ್ತರ ಜೊತೆ ಮೋದಿ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸರ್ಕಾರಕ್ಕೆ ಯಾವ ಚಾಟಿಯಿಂದ ಬೀಸಬೇಕು? ಎಚ್ ಕೆ ಪಾಟೀಲ್ ಆಕ್ರೋಶಸರ್ಕಾರಕ್ಕೆ ಯಾವ ಚಾಟಿಯಿಂದ ಬೀಸಬೇಕು? ಎಚ್ ಕೆ ಪಾಟೀಲ್ ಆಕ್ರೋಶ

ಈ ಸಮಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ ''ಪ್ರತಿಯೊಬ್ಬರೂ ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ನೀವು ನಿಮ್ಮ ಸ್ವಂತ ಸುರಕ್ಷತೆಯನ್ನು ಮರೆತಿದ್ದೀರಿ ಮತ್ತು ಜನರಿಗೆ ಸಹಾಯ ಮಾಡುವಲ್ಲಿ ಹೊರಗುಳಿದಿದ್ದೀರಿ. ನಿಸ್ವಾರ್ಥ ಕೆಲಸಕ್ಕೆ ಇದೊಂದು ಉತ್ತಮ ಉದಾಹರಣೆ'' ಎಂದು ಶ್ಲಾಘಿಸಿದರು.

Prime Minister Modi Praises BJP Karyakartas In Seva Hi Sangathan programme

''ನಿಸ್ವಾರ್ಥ ಕೆಲಸ ನಮ್ಮ ಧ್ಯೇಯವಾಕ್ಯವಾಗಿದೆ. ನಾವು ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇವೆ. ಜನರಿಗೆ ಸೇವೆ ಮಾಡುವುದು ನಮ್ಮ ಸಂತೋಷ'' ಪ್ರಧಾನಿ ಮೋದಿ ಹೇಳಿದ್ದಾರೆ.

''ಕೊವಿಡ್ ವಿರುದ್ಧದ ಈ ಹೋರಾಟದಲ್ಲಿ ಕೆಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ನನ್ನ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಗಳನ್ನು ನೋಡಿಕೊಳ್ಳಬೇಕೆಂದು ನಾನು ಪಕ್ಷವನ್ನು ಒತ್ತಾಯಿಸುತ್ತೇನೆ. ಎಲ್ಲರ ಸೌಕರ್ಯವನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ಅವರಿಗೆ ಸೇವೆ ಸಲ್ಲಿಸುವುದು ನಮ್ಮ ಪಕ್ಷದ ಧ್ಯೇಯವಾಕ್ಯವಾಗಿದೆ'' ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

''ನಾವು ಈ ರೀತಿ ಕೆಲಸ ಮಾಡುವಾಗ, ಅದು ತಂಡದ ಮನೋಭಾವವನ್ನು ಬೆಳೆಸುತ್ತದೆ. ನೀವು ಜನರ ನಡುವೆ ಹೋದಾಗ, ನಿಮ್ಮ ಅನುಭವವು ವಿಭಿನ್ನವಾಗಿರುತ್ತದೆ. ನಿಮಗೆ ಸಮಾಜದಿಂದ ಸಾಕಷ್ಟು ಸಿಗುತ್ತಿತ್ತು. ಸಮಾಜವು ನಿಮಗೆ ಅವರ ಸ್ನೇಹ ಮತ್ತು ಗೌರವವನ್ನು ನೀಡಿದೆ'' ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

''ಜನರ ಗೌರವವೇ ನಿಮಗೆ ಆಯಾಸಗೊಳ್ಳಲು ಬಿಡುತ್ತಿಲ್ಲ. ನೀವು ಕೆಲಸ ಮಾಡುವುದನ್ನು ಮುಂದುವರಿಸಿ. ಇದು ನಮ್ಮನ್ನು ಪ್ರೇರೇಪಿಸುತ್ತದೆ. ನಮಗೆ ಶಕ್ತಿಯನ್ನು ನೀಡುತ್ತದೆ ಎಂದು ನನಗೆ ನಂಬಿಕೆ ಇದೆ. ಜನರ ಆಶೀರ್ವಾದವೇ ದೊಡ್ಡ ಶಕ್ತಿ'' ಎಂದು ಪ್ರಧಾನಿ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಬಿಜೆಪಿ ಘಟಕವೂ, ತಮ್ಮ ತಮ್ಮ ರಾಜ್ಯಗಳಲ್ಲಿ ಬಿಜೆಪಿ ಪಕ್ಷವೂ ಹೇಗೆ ಕಾರ್ಯನಿರ್ವಹಿಸಿದೆ ಎಂದು ವಿವರ ನೀಡಿದವು. ಈ ರಾಜ್ಯಗಳ ವಿವರ ವೀಕ್ಷಿಸಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

English summary
We always believed power to be a medium for service in politics. We never made power a medium for our gain. Selfless service has always been our pledge, our values" says PM Modi at BJPs ‘Seva Hi Sangathan’ programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X