ಸ್ಪೆಷಲ್ ಕ್ಲಾಸ್ ಎಂದು ಕರೆಸಿ ಶಿಕ್ಷಕಿ ಮೇಲೆ ಪ್ರಾಂಶುಪಾಲರಿಂದ ಅತ್ಯಾಚಾರ
ನವದೆಹಲಿ, ಜುಲೈ 5: ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕರೆಸಿಕೊಂಡು ಕಳೆದ ಕೆಲವು ವರ್ಷಗಳಿಂದ ಶಿಕ್ಷಕಿ ಮೇಲೆ ಅತ್ಯಾಚಾರವೆಸಗುತ್ತಿದ್ದ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಜಸೋಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ರಾಕೇಶ್ ಸಿಂಗ್ ಎಂಬುವರನ್ನು ಸರಿತಾ ವಿಹಾರ್ ಪೊಲೀಸರು ಬಂಧಿಸಿದ್ದಾರೆ.
ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ
27 ವರ್ಷದ ಶಿಕ್ಷಕಿಯ ಮೇಲೆ ಕಳೆದ ಕೆಲವು ವರ್ಷಗಳಿಂದ ಆತ ದೌರ್ಜನ್ಯವೆಸಗುತ್ತಿದ್ದ. ಒಂದೊಮ್ಮೆ ಈ ವಿಷಯವನ್ನು ಯಾರೊಂದಿಗಾದರೂ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದ.
ಬಳಿಕ ಶಿಕ್ಷಕಿ ಧೈರ್ಯ ಮಾಡಿ ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. 2017ರಲ್ಲೇ ಮೊದಲ ಬಾರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಬೇಕು ಶಾಲೆಗೆ ಬನ್ನಿ ಎಂದು ಕರೆಸಿಕೊಂಡು ಅವರ ಕಚೇರಿಗೆ ಕರೆದೊಯ್ದು ಜ್ಯೂಸಿನಲ್ಲಿ ಮತ್ತು ಬರುವ ಔಷಧ ಬೆರೆಸಿ ಆಕೆ ಎಚ್ಚರ ತಪ್ಪಿಸಿ ಅತ್ಯಾಚಾರವೆಸಗಿದ್ದ. ಬಳಿಕ ಆ ವಿಡಿಯೋವನ್ನು ಇಟ್ಟುಕೊಂಡು ಬೆದರಿಕೆಯೊಡ್ಡುತ್ತಿದ್ದ.