• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಕೊರೊನಾ ಪರೀಕ್ಷೆ?

|

ನವದೆಹಲಿ, ಮಾರ್ಚ್ 20: ಗಾಯಕಿ ಕನ್ನಿಕಾ ಕಪೂರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಮುಂದೆ ಹಾಕಿ, ಅವರೂ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಇದಕ್ಕೆ ಕಾರಣ, ಕನ್ನಿಕಾ ಕಪೂರ್ ಅವರನ್ನು ಸಚಿವ ದುಷ್ಯಂತ್ ಸಿಂಗ್ ಅವರು ಭೇಟಿ ಮಾಡಿದ್ದೇ ಇದಕ್ಕೆ ಕಾರಣ. ದುಷ್ಯಂತ ಸಿಂಗ್ ಅವರು ಶುಕ್ರವಾರ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾಗಿದ್ದರು.

ದೇಶದಲ್ಲಿ ಕೊರೊನಾ ಆತಂಕ; ರಾಷ್ಟ್ರಪತಿ ಕೋವಿಂದ್ ಏನಂದ್ರು?

ಹೀಗಾಗಿ ಕೋವಿಂದ್ ಅವರಿಗೆ ಕೊರೊನಾ ತಪಾಸಣೆ ಅನಿವಾರ್ಯ ಎಂದು ವೈದ್ಯರು ರಾಷ್ಟ್ರಪತಿಯವರಿಗೆ ಸಲಹೆ ನೀಡಿದ್ದಾರೆ.

ಕೋವಿಂದ್ ಕರೆ

ಕೋವಿಂದ್ ಕರೆ

ಕೊರೊನಾ ವೈರಸ್ (ಕೋವಿಡ್19) ದೇಶದಲ್ಲಿ ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ. ಈ ಬಗ್ಗೆ ದೇಶವಾಸಿಗಳಿಗೆ ದೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.

ನಮಗೆ ದೊಡ್ಡ ಆಘಾತ

ನಮಗೆ ದೊಡ್ಡ ಆಘಾತ

ಈ ಕುರಿತು ಶುಕ್ರವಾರ ದೇಶವಾಸಿಗಳಿಗೆ ಸಂದೇಶ ನೀಡಿರುವ ಅವರು, ಕೊರೊನಾ ವೈರಸ್‌ ನಮಗೆ ಪ್ರಕೃತಿ ಕಲಿಸಿದ ಪಾಠವಾಗಬೇಕಿದೆ. ವಿಪತ್ತಿನ ಸಾಂಕ್ರಾಮಿಕ ರೋಗಗಳು ಹೊಸದಲ್ಲ. ಆದರೆ, ಕೊರೊನಾ ಎಂಬುದು ನಮಗೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ಕೋವಿಂದ್ ಹೇಳಿದ್ದಾರೆ.

ಹೋರಾಡುತ್ತಿರುವವರೊಂದಿಗೆ ನಾವಿದ್ದೇವೆ

ಹೋರಾಡುತ್ತಿರುವವರೊಂದಿಗೆ ನಾವಿದ್ದೇವೆ

ಮಹಾಮಾರಿ ವೈರಸ್‌ನೊಂದಿಗೆ ಹೋರಾಡುವ ಎಲ್ಲರೊಂದಿಗೆ, ಪ್ರಪಂಚದಾದ್ಯಂತದ ಇದಕ್ಕೆ ಬಲಿಯಾದ ಜನರ ಕುಟುಂಬಗಳೊಂದಿಗೆ, ಮತ್ತು ವೈದ್ಯರು, ಅರೆವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ಮತ್ತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವವರೊಂದಿಗೆ ನಾವಿದ್ದೇವೆ ಎಂದು ಅವರು ದೈರ್ಯ ತುಂಬಿದ್ದಾರೆ.

ಮೋದಿಯವರನ್ನು ಶ್ಲಾಘಿಸುತ್ತೇನೆ

ಮೋದಿಯವರನ್ನು ಶ್ಲಾಘಿಸುತ್ತೇನೆ

ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯು ಅಸಾಧಾರಣ ಮತ್ತು ವಿಕಾಸಗೊಳ್ಳುತ್ತಿರುವ ಸವಾಲನ್ನು ಎದುರಿಸುವಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ತೋರಿಸಿದೆ. ನಮ್ಮ ನಾಯಕತ್ವ ಮತ್ತು ಆಡಳಿತವು ಈ ಪರೀಕ್ಷಾ ಕಾಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸಾಂಕ್ರಾಮಿಕ ರೋಗವನ್ನು ಮೊದಲಿನಿಂದಲೂ ತಡೆಗಟ್ಟಲು ಸರಿಯಾದ ಶ್ರದ್ಧೆಯಿಂದ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಮತ್ತು ನೆರೆಹೊರೆಯಲ್ಲಿ ಅದರ ಹರಡುವಿಕೆಯನ್ನು ಪರಿಶೀಲಿಸಲು ಜಂಟಿ ಪ್ರಯತ್ನಗಳನ್ನು ಪ್ರಾರಂಭಿಸಲು ಸಾರ್ಕ್‌ನಲ್ಲಿರುವ ದೇಶಗಳನ್ನು ತಲುಪಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದ್ದಾರೆ.

English summary
President Ramanath Kovind Will Be Testing For Coronavirus ahead of singer kannika kapoor coronavirus tested positive. He wrote letter to nation, don't get panic. we fight together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more