ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಪತ್ನಿಯಿಂದ ಮಾಸ್ಕ್ ತಯಾರಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 23: ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಪತ್ನಿ ಸವಿತಾ ಕೋವಿಂದ್ ತಾವೇ ಮಾಸ್ಕ್ ತಯಾರಿಕೆ ಮಾಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಸವಿತಾ ಅವರ ಕೆಲಸಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Recommended Video

convicts Bodies brought to Deendayal Upadhyay Hospital for post-mortem | Oneindia Kannada

ಕೊರೊನಾ ಸೋಂಕು ತಡೆಯಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಅನೇಕ ಬಡವರಿಗೆ ಮನೆ ಮಂದಿಗೆ ಮಾಸ್ಕ್ ಖರೀದಿ ಮಾಡುವಷ್ಟು ಸಹ ಹಣ ಇರುವುದಿಲ್ಲ. ಅಂತಹವರ ನೆರವಿಗೆ ಈಗ ಸವಿತಾ ಬಂದಿದ್ದಾರೆ. ತಾವೇ ಮಾಸ್ಕ್ ತಯಾರು ಮಾಡಿ, ಅದನ್ನು ಬಡ ಜನರಿಗೆ ನೀಡುತ್ತಿದ್ದಾರೆ.

ಕೊರೊನಾ ವಿರುದ್ಧ ಹೋರಾಟ; 1 ಕೋಟಿ ಮಾಸ್ಕ್ ಗಳು ಉಚಿತ ಉಚಿತ!ಕೊರೊನಾ ವಿರುದ್ಧ ಹೋರಾಟ; 1 ಕೋಟಿ ಮಾಸ್ಕ್ ಗಳು ಉಚಿತ ಉಚಿತ!

ತಾವು ಮಾಸ್ಕ್‌ ಧರಿಸಿಯೇ ಹೊಲಿಗೆ ಯಂತ್ರದ ಮೇಲೆ ಕೂತು, ಮಾಸ್ಕ್ ಗಳ ತಯಾರಿಕೆಯಲ್ಲಿ ಸವಿತಾ ನಿರತರಾಗಿದ್ದಾರೆ. ದೆಹಲಿಯ ಶಕ್ತಿ ಹಾತ್ ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟ್‌ನ ತಮ್ಮ ಮನೆಯಲ್ಲಿ ಅವರು ಮಾಸ್ಕ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

 President Ram Nath Kovinds Wife Stitches Masks For Poor People

ಲಾಕ್‌ಡೌನ್ ನಡುವೆ ಮನೆಯಿಂದ ಹೊರ ಹೋಗುವ ಆಗಿಲ್ಲ. ಬೇರೆ ಕೆಲಸಗಳಲ್ಲಿ ಮಾಡುವಂತಿಲ್ಲ. ಇಂತಹ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿರುವ ಅವರು ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21393ಕ್ಕೆ ಏರಿಕೆಯಾಗಿದೆ. 681 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.

English summary
President Ram Nath Kovind's wife Savitha Kovind stitches masks for poor people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X