ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಚಾಂಪಿಯನ್ ಕನಸು ಕಾಣುತ್ತಿರುವ ಬಾಲಕನಿಗೆ ರಾಷ್ಟ್ರಪತಿ ನೆರವು

|
Google Oneindia Kannada News

ದೆಹಲಿ, ಜುಲೈ 31: ಜಗತ್ತಿನ ಖ್ಯಾತ ಸೈಕಲಿಸ್ಟ್ ಆಗಬೇಕೆಂಬ ಕನಸು ಕಾಣುತ್ತಿರುವ ರಿಯಾಜ್‌ಗೆ ಈದ್ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.

ಮೂಲತಃ ಬಿಹಾರದ ಮಧುಬನಿ ಜಿಲ್ಲೆಗೆ ಸೇರಿದ ರಿಯಾಜ್ ಪ್ರಸ್ತುತ ದೆಹಲಿಯ ಆನಂದ್ ವಿಹಾರದಲ್ಲಿ ಸರ್ವೋದಯ ಬಾಲ ವಿದ್ಯಾಲಯದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸೈಕಲಿಸ್ಟ್ ಆಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಭಾರತದ ಸಾಧಕರ ಪರಿಚಯಿಸಲು ಮುಂದಾದ ರೊಪೊಸೊಭಾರತದ ಸಾಧಕರ ಪರಿಚಯಿಸಲು ಮುಂದಾದ ರೊಪೊಸೊ

ರಿಯಾಜ್ ಪೋಷಕರು, ಇಬ್ಬರು ಸಹೋದರಿಯರು ಮತ್ತು ಸಹೋದರರನ್ನು ಒಳಗೊಂಡ ಕುಟುಂಬ ಮಧುಬಾನಿಯಲ್ಲಿ ವಾಸವಾಗಿದ್ದರೆ, ರಿಯಾಜ್ ಘಜಿಯಾಬಾದ್ ಮಹಾರಾಜಪುರದಲ್ಲಿ ಬಾಡಿಗೆ ವಸತಿಗೃಹದಲ್ಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

President Kovind Gifted A Racing Bicycle To A School Boy

2017ರಲ್ಲಿ ದೆಹಲಿ ರಾಜ್ಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಿಯಾಜ್ ಕಂಚಿನ ಪದಕ ಗೆದಿದ್ದರು. ಗುವಾಹಟಿಯಲ್ಲಿ ನಡೆದ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಹಾಗೂ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಎಂದು ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ದುರದೃಷ್ಟವಶಾತ್ ಅಂದ್ರೆ ರಿಯಾಜ್ ತನ್ನ ಅಭ್ಯಾಸಕ್ಕಾಗಿ ಬಾಡಿಗೆ ಸೈಕಲ್ ಮೇಲೆ ಅವಲಂಬಿತವಾಗಿದ್ದರು. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ರಾಷ್ಟ್ರಪತಿ, ರಿಯಾಜ್ ಕಸನು ನನಸು ಮಾಡಿಕೊಳ್ಳಲು ಸಹಾಯವಾಗಲಿ ಎಂಬ ಕಾರಣಕ್ಕೆ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.

President Kovind Gifted A Racing Bicycle To A School Boy

ಈ ವಿಚಾರನ್ನು ರಾಷ್ಟ್ರಪತಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರಿಗೆ ಪ್ರೇರೇಪಿಸುವ ಉದ್ದೇಶ. ಸೈಕ್ಲಿಸ್ಟ್ ಆಗಿ ಉತ್ತಮ ಸಾಧನೆ ಮಾಡುವ ಕನಸು ಕಾಣುತ್ತಿರುವ ಶಾಲಾ ಬಾಲಕ ರಿಯಾಜ್‌ಗೆ ರೇಸಿಂಗ್ ಬೈಸಿಕಲ್ ಉಡುಗೊರೆಯಾಗಿ ನೀಡಿದರು. ಆತನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ ಆಗಲಿ ಎಂದು ಶುಭಹಾರೈಸಿದರು' ಎಂದು ತಿಳಿಸಿದೆ.

English summary
President Kovind gifted a racing bicycle to a school boy Riyaz who dreams of excelling as a top cyclist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X