ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಹಿರಿಯ ನಾಯಕರಿಗೆ ಉಚ್ಚಾಟನೆ ಭೀತಿ

By Mahesh
|
Google Oneindia Kannada News

ನವದೆಹಲಿ, ಮಾ.27: ಆಮ್ ಆದ್ಮಿ ಪಕ್ಷದಲ್ಲಿನ ಆಂತರಿಕ ಕಲಹ ಉಲ್ಬಣಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಎಎಪಿ ಕೋಟೆ ಸ್ಫೋಟಗೊಳ್ಳುವ ಸಾಧ್ಯತೆಗಳು ಕಂಡು ಬಂದಿವೆ. ಬಂಡಾಯ ನಾಯಕರಾಗಿ ಗುರುತಿಸಿಕೊಂಡಿರುವ ಎಎಪಿ ಸಂಸ್ಥಾಪಕ ಸದಸ್ಯರಾದ ಯೋಗೀಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಪಕ್ಷದಿಂದ ಉಚ್ಚಾಟನೆಗೊಳ್ಳುವ ಭೀತಿಯಲ್ಲಿದ್ದಾರೆ.

ಪಕ್ಷದ ಹಿರಿಯ ನಾಯಕ ಕುಮಾರ್ ವಿಶ್ವಾಸ್ ಅವರು ಎಎಪಿ ಬಂಡಾಯದ ಬಗ್ಗೆ ಮಾತನಾಡಿ, ಈ ಇಬ್ಬರು ನಾಯಕರು ತಮ್ಮ ಪಟ್ಟು ಸಡಿಲಿಸದಿದ್ದರೆ ಗೌರವಪೂರ್ವಕವಾಗಿ ಪಕ್ಷದಿಂದ ಉಚ್ಛಾಟಿಸಿ ಹೊರಹಾಕಲಾಗುವುದು ಎಂದು ಸುಳಿವು ನೀಡಿದ್ದಾರೆ.

Prashant Bhushan, Yogendra Yadav may be expelled from AAP

ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದ ಸಂಭ್ರಮ ಹಾಳುಗುವಂತೆ ಮಾಡಿ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚಾಗಲು ಹಿರಿಯ ನಾಯಕರು ಕಾರಣರಾಗಿದ್ದಾರೆ. ಭಿನ್ನಮತ ಮಾಡುವ ನಾಯಕರು ಸ್ವ ಇಚ್ಛೆಯಿಂದ ಪಕ್ಷವನ್ನು ತೊರೆಯಬಹುದು ಎಂದು ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೇಳಿರುವುದು ಯಾದವ್ ಅಂಡ್ ಗ್ಯಾಂಗಿಗೆ ಇನ್ನಷ್ಟು ಉರಿ ತರಿಸಿದೆ.

ರಾಜೀನಾಮೆಗೆ ಸಿದ್ಧ: ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿರುವ ಯಾದವ್ ಮತ್ತು ಭೂಷಣ್ ಅವರುಗಳು ಪ್ರತಿಕ್ರಿಯೆ ನೀಡಿ, ಆಪ್‌ನ 21 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ತಮ್ಮನ್ನು ಪದಚ್ಯುತಗೊಳಿಸಲು ಯಾವುದೇ ಸಕಾರಣಗಳಿಲ್ಲ. ಅದರೂ ಪಕ್ಷದ ಒಳಿತಿಗಾಗಿ ತಾವು ಪ್ರಸ್ತಾಪಿಸಿರುವ ವಿಷಯಗಳನ್ನು ಜಾರಿಗೆ ತರುವುದಾದರೆ ತಮ್ಮ ಸ್ಥಾನಗಳಿಗೆ ತಾವು ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಒಟ್ಟಾರೆ, ಪಕ್ಷದ ಉಭಯ ಬಣಗಳ ನಡುವೆ ರಾಜಿ ಮಾಡಿಸುವ ನಿವೃತ್ತ ಅಡ್ಮಿರಲ್ ರಾಮದಾಸ್‌ಅವರ ಕೊನೆಯ ಕ್ಷಣದ ಪ್ರಯತ್ನಗಳು ವಿಫಲವಾಗಿದೆ. ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಬಹುತೇಕ ಸದಸ್ಯರು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಶ್ರೀರಾಮನವಮಿ ದಿನದಂದು ಆಮ್ ಆದ್ಮಿ ಪಕ್ಷದಲ್ಲಿ ಏನಾದರೂ ದೊಡ್ಡ ಮಟ್ಟದ ಬದಲಾವಣೆ ಸಂಭವಿಸುವ ಸೂಚನೆ ಶುಕ್ರವಾರ ಸಂಜೆ ವೇಳೆಗೆ ಸಿಕ್ಕಿದೆ.

English summary
The dissent in Aam Aadmi Party (AAP) has deepened with sources close to party say that the founder members Prashant Bhushan and Yogendra Yadav may be shown the door from the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X