• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ್ಯಾಯಾಂಗ ನಿಂದನೆ ಅರ್ಜಿಗೆ ವಿಡಂಬನಾತ್ಮಕವಾಗಿ ಕ್ಷಮೆ ಕೋರಿದ ಪ್ರಶಾಂತ್ ಭೂಷಣ್

|

ನವದೆಹಲಿ, ಆಗಸ್ಟ್ 03: ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿಡಂಬನಾತ್ಮಕವಾಗಿ ಕ್ಷಮೆ ಕೋರಿದ್ದಾರೆ.

   SpaceX and NASA completes space mission successfully | Oneindia Kannada

   ಮುಖ್ಯನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಕುಳಿತಿದ್ದ ಐಷಾರಾಮಿ ಬೈಕ್‌ಗೆ ಸ್ಟ್ಯಾಂಡ್ ಹಾಕಲಾಗಿತ್ತು, ಇಂತಹ ಬೈಕ್ ಮೇಲೆ ಕುಳಿತಾಗ ಹೆಲ್ಮೆಟ್ ಹಾಕುವ ಅಗತ್ಯವಿಲ್ಲ ಎಂಬುದು ನನಗೆ ತಿಳಿದಿರಲಿಲ್ಲ.

   ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೋರುತ್ತೇನೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ 134 ಪುಟಗಳ ಸುದೀರ್ಘ ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ. ಸುಪ್ರೀಂಕೋರ್ಟ್‌ಹಾಗೂ ನ್ಯಾಯಮೂರ್ತಿಗಳ ಬಗ್ಗೆ ನೀಡಿರುವ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಆದರೆ ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೋರುತ್ತೇನೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

   ಆದರೆ ಪ್ರಮಾಣಪತ್ರದ ಉಳಿದ 133ಪುಟದಲ್ಲಿ ಇದನ್ನು ಹೊರತುಪಡಿಸಿ ಒಮ್ಮೆಯೂ ಕ್ಷಮೆಯನ್ನು ಕೇಳಿಲ್ಲ. ಸುಪ್ರೀಂಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಹಾಗೂ ಹಿಂದಿನ ನಾಲ್ಕು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಪ್ರಶಾಂತ್ ಭೂಷಣ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು.

   ಈ ಟ್ವೀಟ್ ಆಧರಿಸಿ ಸುಪ್ರೀಂಕೋರ್ಟ್‌ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿತ್ತು.ಈಗಾಗಲೇ ಈ ಎರಡು ವಿವಾದಾತ್ಮಕ ಟ್ವೀಟ್‌ನ್ನು ಡಿಲೀಟ್ ಮಾಡಿದ್ದರೂ, ಟ್ವಿಟ್ಟರ್ ಇಂಡಿಯಾಗೆ ನೋಟಿಸ್ ಜಾರಿಮಾಡಲಾಗಿದ್ದು, ವಿಚಾರಣೆ ಆಗಸ್ಟ್ 5 ರಂದು ನಡೆಯಲಿದೆ.

   English summary
   In his 134-page affidavit on criminal contempt, advocate Prashant Bhushan has regretted only one thing -- that he did not notice the motor cycle was on a stand when he tweeted on CJI SA Bobde riding a Rs 50-lakh bike "without a helmet".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X