ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಮುಖಭಂಗ ಉಂಟುಮಾಡಿದ ಪ್ರಣಬ್ ಮುಖರ್ಜಿ ನಡೆ

|
Google Oneindia Kannada News

Recommended Video

Exit Poll 2019: ಕಾಂಗ್ರೆಸ್ಸಿಗರಿಗೆ ಮುಜಗರಕ್ಕೀಡುಮಾಡಿದ ಪ್ರಣಬ್ ಮುಖರ್ಜಿ | Oneindia Kannada

ನವದೆಹಲಿ, ಮೇ 21: ಒಂದು ಕಡೆ ಕಾಂಗ್ರೆಸ್ ಇವಿಎಂ ದೋಷ, ತಾರತಮ್ಯದ ನಿರ್ಧಾರ ಎಂದು ಚುನಾವಣಾ ಆಯೋಗವನ್ನು ತೆಗಳುತ್ತಿದ್ದರೆ, ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚುನಾವಣಾ ಆಯೋಗವನ್ನು ಹೊಗಳುವ ಮೂಲಕ ಕಾಂಗ್ರೆಸ್ಸಿಗೆ ಮುಜುಗರವನ್ನುಂಟು ಮಾಡಿದ್ದಾರೆ.

"ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಯನ್ನು ಪರಿಪೂರ್ಣವಾಗಿ ನಡೆಸಿದೆ" ಎಂದು ಮುಖರ್ಜಿ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಪ್ರತಿಪಕ್ಷ ನಾಯಕರ ಜೊತೆ ಚಂದ್ರಬಾಬು ನಾಯ್ಡು ಸಭೆ ದೆಹಲಿಯಲ್ಲಿ ಇಂದು ಪ್ರತಿಪಕ್ಷ ನಾಯಕರ ಜೊತೆ ಚಂದ್ರಬಾಬು ನಾಯ್ಡು ಸಭೆ

"ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಡ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಇಂದು ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದರೆ ಅದಕ್ಕೆ ಕಾರಣ ಚುನಾವಣಾ ಆಯುಕ್ತರು. ಸುಕುಮಾರ್ ಸೇನ್ ಅವರಿಂದ ಹಿಡಿದು ಪ್ರಸ್ತುತ ಚುನಾವಣಾ ಆಯುಕ್ತರವರೆಗೂ ಎಲ್ಲರೂ ತಮ್ಮ ಕೆಲಸನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ. ಈ ಚುನಾವಣೆಯೂ ಪರಿಪೂರ್ಣವಾಗಿದೆ" ಎಂದು ಅವರು ಹೇಳಿದರು.

Pranab Mukherjee praises election commission

ಚುನಾವಣಾ ಆಯೋಗದ ಭೇಟಿ: ದೆಹಲಿಗೆ ಹೊರಟ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಆಯೋಗದ ಭೇಟಿ: ದೆಹಲಿಗೆ ಹೊರಟ ಮುಖ್ಯಮಂತ್ರಿ ಕುಮಾರಸ್ವಾಮಿ

ಇತ್ತ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಮುಖಂಡರು ಮಂಗಳವಾರ ದೆಹಲಿಯಲ್ಲಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಇವಿಎಂ ದೋಷ ಮತ್ತು ವಿವಿಪ್ಯಾಟ್ ಎಣಿಕೆ ಕುರಿತು ದೂರು ನೀಡುವ ಸಾಧ್ಯತೆ ಇದೆ.

English summary
Congress leader and former president Pranab Mukherjee praised election commission and quoted, perfectly conducted lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X