• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯ ಪ್ರವೇಶಿಸಲು ತಮಗಿದ್ದ ಕಾರಣಗಳನ್ನು ಬಿಚ್ಚಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್

|

ನವದೆಹಲಿ, ಏ.24: ಹೇಮಂತ್ ಕರ್ಕರೆ ಹಾಗೂ ಬಾಬ್ರಿ ಮಸೀದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಈಗ ಮಾಲೆಗಾವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾಲೆಗಾವ್ ತನಿಖೆಗೆ ಸಂಬಂಧಿಸಿದಂತೆ ತಮಗಾದ ಕಿರುಕುಳವನ್ನು ಮಹಿಳಾ ಸಮುದಾಯಕ್ಕೆ ಹೋಲಿಸಿ ಮಾತನಾಡಿದ್ದಾರೆ. ಭೋಪಾಲ್‌ನಲ್ಲಿ ನಡೆದ ರೋಡ್‌ ಶೋ ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಅತ್ಯಾಚಾರದ ವಿರುದ್ಧ ಹೋರಾಡಲು ನಾನು ಚುನಾವಣೆಗೆ ನಿಂತಿದ್ದೇನೆ, ಅದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಸಾಧ್ವಿ ಹೇಳಿಕೆ ನೀಡಿದ್ದಾರೆ.

ಭೋಪಾಲ್‌ನಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್

ಯಾವುದೇ ಮಹಿಳೆಯರು ಕ್ರಿಮಿನಲ್‌ಗಳಿಂದ ಹಿಂಸಾಚಾರಕ್ಕೆ ಒಳಗಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಸಾಧ್ವಿ, ನಾನು ಯಾವುದೇ ಹುತಾತ್ಮರ ವಿರುದ್ಧ ಹೇಳಿಕೆ ನೀಡಿಲ್ಲ.

ಗೋಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ಗುಣವಾಯ್ತು: ಸಾಧ್ವಿ ಪ್ರಗ್ಯಾ

ಆದರೆ ನನಗೆ ನೀಡಿರುವ ಕಿರುಕುಳ, ಹಿಂಸೆ ವಿರುದ್ಧ ಮಾತನಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಜ್ಞಾ ಸಿಂಗ್ ಜೊತೆಗೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader Pragya Thakur, who raised controversies with her comments on the Babri Masjid demolition and the death of 26/11 hero Hemant Karkare, explained why she joined politics as she filed her election papers in Madhya Pradesh's Bhopal seat on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more