ಭದ್ರತಾ ಸಮಿತಿಯಲ್ಲಿ ಸಾದ್ವಿ ಪ್ರಗ್ಯಾ, ವಿಪರ್ಯಾಸ ಎಂದ ಕಾಂಗ್ರೆಸ್
ನವದೆಹಲಿ, ನವೆಂಬರ್ 21: ಬಿಜೆಪಿ ಸಂಸದೆ, ಮಾಲೇಗಾಂವ್ ಸ್ಫೋಟದ ಆರೋಪಿಯಾಗಿದ್ದ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭದ್ರತಾ ಸಮಿತಿಗೆ ನಾಮನಿರ್ದೇಶನ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ 21 ಸದಸ್ಯರ ರಕ್ಷಣಾ ಇಲಾಖೆಯ ಸಂಸದೀಯ ಸಲಹಾ ಸಮಿತಿಯಲ್ಲಿ ಮಧ್ಯಪ್ರದೇಶದ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೆಸರನ್ನೂ ಸೇರಿಸಲಾಗಿದೆ.
ಬಿಜೆಪಿ ಹಿರಿಯ ನಾಯಕರ ಸಾವಿಗೆ ಕಾರಣ ಬಹಿರಂಗ ಪಡಿಸಿದ ಸಾಧ್ವಿ ಪ್ರಜ್ಞಾ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, "ಇದು ನಮ್ಮ ರಾಷ್ಟ್ರದ ರಕ್ಷಣಾ ಪಡೆಗಳಿಗೇ, ನಮ್ಮ ರಾಷ್ಟ್ರದ ಘನವೆತ್ತ ಸಂಸದರಿಗೆ ಮತ್ತು ಈ ರಾಷ್ಟ್ರದ ಪ್ರತಿ ಪ್ರಜೆಗೂ ಮಾಡುವ ಅವಮಾನ" ಎಂದಿದೆ.
"ಪ್ರಗ್ಯಾಸಿಂಗ್ ಅವರು ಭಯೋತ್ಪಾದಕ ಕೃತ್ಯದಲ್ಲಿ ಆರೋಪಿಯಾಗಿದ್ದವರು. ಗೋಡ್ಸೆ ಪರ ಮಾತಾಡಿದವರು. ಅಂಥವರನ್ನು ಭದ್ರತಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿರುವುದು ದೇಶಕ್ಕೇ ಮಾಡುವ ಅವಮಾನ" ಎಂದು ಅದು ಹೇಳಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾ ಸಿಂಗ್ ಗೆ ಬಿಜೆಪಿ ತಪರಾಕಿ
"ನಾನು ಸಂಸದಳಾಗಿ ಆಯ್ಕೆಯಾಗಿರುವುದು ಟಾಯ್ಲೆಟ್ ಕ್ಲೀನ್ ಮಾಡುವುದಕ್ಕಲ್ಲ" ಎಂಬ ಹೇಳಿಕೆಯ ಮೂಲಕ ಇತ್ತೀಚೆಗೆ ವಿವಾದ ಸೃಷ್ಟಿಸಿದ್ದ ಪ್ರಗ್ಯಾ, "ನನಗೆ ಜೈಲಿನಲ್ಲಿ ಹಿಂಸೆ ನೀಡಿದ್ದಕ್ಕೆ ನಾನು ಹೇಮಂತ್ ಕರ್ಕರೆ ಅವರಿಗೆ ಶಾಪ ನೀಡಿದ್ದೇ ಅವರು ಮುಂಬೈ ಸ್ಫೋಟದ ಸಮಯದಲ್ಲಿ ಸಾವಿಗೀಡಾಗಲು ಕಾರಣ" ಎಂಬ ವಿವಾದಾತ್ಮಕ ಹೇಳಿಕೆಯನ್ನೂ ಅವರು ನೀಡಿದ್ದರು.