• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಪ್ರಿಯಾಂಕಾ ಗಾಂಧಿ ಕರೆ ತನ್ನಿ ಕಾಂಗ್ರೆಸ್ ಉಳಿಸಿ'

By Mahesh
|
Google Oneindia Kannada News

ನವದೆಹಲಿ, ಫೆ.10: ದೆಹಲಿಯಲ್ಲಿ ಮತ್ತೊಮ್ಮೆ ದೇಶದ ಪುರಾತನ ಪಕ್ಷ ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ. ಆಮ್ ಆದ್ಮಿ ಪಕ್ಷದ ಆರ್ಭಟಕ್ಕೆ ತತ್ತರಿಸಿರುವ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದರೂ ಅದು ಇತಿಹಾಸ ಪುಟದಲ್ಲಿ ದಾಖಲೆಯಾಗಲಿದೆ. ಮುಂಜಾನೆಯೇ ಕಾಂಗ್ರೆಸ್ ಸೋಲಿನ ಟ್ರೆಂಡ್ ಕಂಡ ಕಾರ್ಯಕರ್ತರು ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಎಲ್ಲರ ಬಾಯಿಂದ 'ಪ್ರಿಯಾಂಕಾ ಲಾವೊ ಕಾಂಗ್ರೆಸ್ ಬಚಾವೋ' ಎಂಬ ವಾಕ್ಯ ಒಕ್ಕೊರಲಲ್ಲಿ ಕೇಳಿ ಬರುತ್ತಿತ್ತು.

ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಒಂದು ಕಾಲದಲ್ಲಿ ಸ್ಪೀಕರ್ ಆಗಿದ್ದ ಅಜಯ್ ಮಾಕೇನ್ ಅವರು ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಅಭೂತಪೂರ್ವ ಸಾಧನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಭ ಕೋರಿದ್ದಾರೆ. [ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]

ಕಾಂಗ್ರೆಸ್ ಗೆ ಬಂದಿರುವ ಅಧೋಗತಿಯನ್ನು ಕಂಡು ಕೋಪಗೊಂಡ ಕಾರ್ಯಕರ್ತರು ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹಿರಿಯ ನಾಯಕರನ್ನು ಮನೆಗೆ ಕಳಿಸುವಂತೆ ಆಗ್ರಹಿಸಿದರು.


ಪ್ರಿಯಾಂಕಾ ಗಾಂಧಿ ವಾಧ್ರರನ್ನು ಸಕ್ರಿಯ ರಾಜಕೀಯಕ್ಕೆ ಕರೆತಂದು ಕಾಂಗ್ರೆಸ್ ಉಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಜಗದೀಶ್ ಶರ್ಮ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಪ್ರಿಯಾಂಕಾ ಗಾಂಧಿ ಪರ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗಲೂ ಇದೇ ರೀತಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಹರ್ಯಾಣ, ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಅಹಂಕಾರವೇ ಬಿಜೆಪಿ-ಕಾಂಗ್ರೆಸ್‌ ಸೋಲಿಗೆ ಕಾರಣ]

ಲೋಕಸಭೆ ಚುನಾವಣೆ ವೇಳೆಯಲ್ಲಿ ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಭರ್ಜರಿ ಭಾಷಣ ಮಾಡುವ ಕೊನೆಗಳಿಗೆಯಲ್ಲಿ ಎಲ್ಲರ ಗಮನ ತನ್ನತ್ತ ಸೆಳೆಯುವಲ್ಲಿ ಪ್ರಿಯಾಂಕಾ ಗಾಂಧಿ ವಾಧ್ರಾ ಯಶಸ್ವಿಯಾಗಿದ್ದರು. ಅದರೆ, ಕಾಂಗ್ರೆಸ್ ಸೋಲು ಕಂಡಿತ್ತು. ಪಕ್ಷದ ಸಾರಥ್ಯವನ್ನು ಪ್ರಿಯಾಂಕಾ ಗಾಂಧಿ ಕೈಗೆ ಕೊಟ್ಟುಬಿಡಿ, ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಬರಲು ಇದುವೇ ಸಕಾಲ ಎಂದು ಮನವಿ ಮಾಡಿದ್ದರು. (ಐಎಎನ್ಎಸ್)

English summary
As the Congress headed for a rout in Delhi assembly polls, 'Bring Priyanka' slogans were once again raised outside the the party headquarters here Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X