• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಯುಮಾಲಿನ್ಯ:ಕೆಲ ದಿನಗಳ ಕಾಲ ದೆಹಲಿ ತೊರೆಯಲು ಸೋನಿಯಾಗೆ ಸೂಚನೆ

|

ನವದೆಹಲಿ, ನವೆಂಬರ್ 20: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎದೆಯ ಸೋಂಕಿನಿಂದ ಬಳಲುತ್ತಿದ್ದು, ಕೆಲ ದಿನಗಳ ಕಾಲ ದೆಹಲಿಯನ್ನು ತೊರೆಯುವಂತೆ ವೈದ್ಯರು ಸೂಚಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದ ವಾಯುಮಾಲಿನ್ಯವಿರುವ ಕಾರಣ ಸೋನಿಯಾ ಅವರ ಆರೋಗ್ಯದ ಮೇಲೆ ಅದು ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂಬ ಹಿನ್ನೆಲೆ ಈ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.

ಮಾಸ್ಕ್ ಧರಿಸದಿದ್ದರೆ 2 ಸಾವಿರ ರೂ ದಂಡ: ದೆಹಲಿ ಸರ್ಕಾರ ಆದೇಶ

ಸೋನಿಯಾ ಗಾಂಧಿ ಕೆಲವು ದಿನಗಳವರೆಗೆ ಗೋವಾ ಅಥವಾ ಚೆನ್ನೈಗೆ ಸ್ಥಳಾಂತರಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಪಕ್ಷದ ಕೆಲ ಮುಖಂಡರು ಆತ್ಮಾವಲೋಕನಕ್ಕಾಗಿ ಬೇಡಿಕೆ ಇಡುತ್ತಿರುವ ಈ ಸಮಯದಲ್ಲಿ ಸೋನಿಯಾ ದೆಹಲಿಯಿಂದ ದೂರ ಹೋಗುತ್ತಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ 30 ಸಂಜೆ ಸೋನಿಯಾ ಗಾಂಧಿಯನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೆಪ್ಟೆಂಬರ್ 12 ರಂದು, ಅವರು ತಮ್ಮ ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಕೆಲವು ದಿನಗಳವರೆಗೆ ವಿದೇಶಕ್ಕೆ ಹೋಗಿದ್ದರು.

ಸೆಪ್ಟೆಂಬರ್ 14 ರಿಂದ 23 ರವರೆಗೆ ಕೊವಿಡ್ 19 ಸಾಂಕ್ರಾಮಿಕದ ವೇಳೆ ನಡೆದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಇಬ್ಬರೂ ನಾಯಕರು ಗೈರಾಗಿದ್ದರು.

ಕಳೆದ ವರ್ಷ ಜನವರಿಯಲ್ಲಿ ಗೋವಾಗೆ ಶಿಫ್ಟ್ ಆಗಿದ್ದ ಸೋನಿಯಾ

ಕಳೆದ ವರ್ಷ ಜನವರಿಯಲ್ಲಿ ಗೋವಾಗೆ ಶಿಫ್ಟ್ ಆಗಿದ್ದ ಸೋನಿಯಾ

ಇದಲ್ಲದೆ ಕಳೆದ ವರ್ಷ ಜನವರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಗೋವಾಗೆ ಸ್ಥಳಾಂತರಗೊಂಡಿದ್ದರು, ಅಲ್ಲಿ ಅವರ ಸೈಕ್ಲಿಂಗ್ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಸಕತ್ ವೈರಲ್ ಆಗಿದ್ದವು.

ಸೋನಿಯಾ ದೆಹಲಿಯಿಂದ ತೆರಳುವ ಸಾಧ್ಯತೆ

ಸೋನಿಯಾ ದೆಹಲಿಯಿಂದ ತೆರಳುವ ಸಾಧ್ಯತೆ

ಸೋನಿಯಾ ಶುಕ್ರವಾರ ಮಧ್ಯಾಹ್ನ ದೆಹಲಿಯಿಂದ ತೆರಳುವ ಸಾಧ್ಯತೆಯಿದೆ ಮತ್ತು ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಯಮಿತವಾಗಿ ಔಷಧ ತೆಗೆದುಕೊಳ್ಳುತ್ತಿದ್ದರು

ನಿಯಮಿತವಾಗಿ ಔಷಧ ತೆಗೆದುಕೊಳ್ಳುತ್ತಿದ್ದರು

ಕಳೆದ ಆಗಸ್ಟ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೋನಿಯಾ ಗಾಂಧಿ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಎದೆಯ ಸೋಂಕು ಹಾಗೆಯೇ ಇದ್ದು ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ, ಸೋಂಕು ಕಡಿಮೆಯಾಗಿಲ್ಲದೆ ಇರಲು ದೆಹಲಿಯಲ್ಲಿನ ವಾಯುಮಾಲಿನ್ಯ ಕಾರಣವೆಂದು ಮೂಲಗಳು ಉಲ್ಲೇಖಿಸಿದೆ.

  Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada
  ಹೃದಯದ ಆರೋಗ್ಯ ಸ್ಥಿತಿ ಮತ್ತಷ್ಟು ಉಲ್ಬಣ

  ಹೃದಯದ ಆರೋಗ್ಯ ಸ್ಥಿತಿ ಮತ್ತಷ್ಟು ಉಲ್ಬಣ

  ದೆಹಲಿಯಲ್ಲಿನ ವಾಯುಮಾಲಿನ್ಯವು ಸೋನಿಯಾ ಅವರ ಅಸ್ತಮಾ ಮತ್ತು ಹೃದಯದ ಆರೋಗ್ಯ ಸ್ಥಿತಿಯನ್ನು ಮತಷ್ಟು ಉಲ್ಬಣಗೊಳಿಸಿದೆ. ಹಾಗಾಗಿ ಇದೀಗ ಅವರು ದೆಹಲಿಯಿಂದ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ವೈದ್ಯರು ಸೂಚಿಸಿದ್ದಾರೆ.

  English summary
  Congress president Sonia Gandhi will fly out of Delhi on Friday after doctors advised her to shift out of the national capital in view of the heavy pollution and poor air quality that has aggravated her chest infection, people aware of the matter said.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X