ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗ್ಯಾಸ್ ಚೇಂಬರ್ ಆದ ದೆಹಲಿ!' ಮಾಸ್ಕ್ ನೀಡಿದ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ನವೆಬರ್ 01: ಮಾಲಿನ್ಯದಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ರೀತಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ದೆಹಲಿಯೊಂದಿಗೆ ಹೊಂದಿಕೊಂಡಿರುವ ಇತರ ರಾಜ್ಯಗಳಿಂದ ಹೊರಬೀಳುವ ತ್ಯಾಜ್ಯವೂ ದೆಹಲಿಯ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಕಾರಣ, ಶಾಲಾ ಮಕ್ಕಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಸ್ಕ್ ಗಳನ್ನು ವಿತರಿಸಿದರು.

ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ: ಬೆಂಬಲಿಸಿದ ಕೇಜ್ರಿವಾಲ್ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ: ಬೆಂಬಲಿಸಿದ ಕೇಜ್ರಿವಾಲ್

ಜನರು ಉಸಿರಾಡುವುದಕ್ಕೂ ಕಷ್ಟಪಡುತ್ತಿದ್ದಾರೆ. ದೆಹಲಿ ಗ್ಯಾಸ್ ಚೇಂಬರ್ ರೀತಿಯಾಗಿದೆ. ನಾವು ಮಾಲಿನ್ಯ ನಿಯಂತ್ರಣಕ್ಕೆ ಎಷ್ಟೇ ಕ್ರಮ ಕೈಗೊಂಡರೂ ಉಪಯೋಗವಾಗುತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Pollution Level In Delhi reaches Critical Level, Kejriwal Distributes masks to Students

ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಶ್ನಲ್ ಸ್ಟೇಡಿಯಂ, ಇಂಡಿಯಾ ಗೇಟ್ ಬಳಿ ಮಾಲಿನ್ಯ ಸಾಕಷ್ಟು ಹೆಚ್ಚಿದೆ ಎಂದು ಈಗಾಗಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.

ಸುಪ್ರೀಂಕೋರ್ಟ್, ದೆಹಲಿ ಸಿಎಂ ಕೇಜ್ರಿವಾಲ್ ಕಿವಿಹಿಂಡಿದ್ದು ಈ ಕಾರಣಕ್ಕೆ! ಸುಪ್ರೀಂಕೋರ್ಟ್, ದೆಹಲಿ ಸಿಎಂ ಕೇಜ್ರಿವಾಲ್ ಕಿವಿಹಿಂಡಿದ್ದು ಈ ಕಾರಣಕ್ಕೆ!

ಕೇಜ್ರಿವಾಲ್ ಅವರು ಸುಮಾರು 50 ಲಕ್ಷ ಮಾಸ್ಕ್ ಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದಾಗಿ ತಿಳಿಸಿದ್ದು, ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಅವರು ಹೇಳಿದ್ದಾರೆ.

English summary
Pollution Level In Delhi reaches Critical Level. Arvind Kejriwal Distributes masks to Students. Pollution in Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X