ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಚಳಿ: ಸುಧಾರಿಸಿದ ವಾಯು ಮಾಲಿನ್ಯ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ದೆಹಲಿಯಲ್ಲಿ ಗಾಳೀಯ ಗುಣಮಟ್ಟ ಸುಧಾರಣೆಗೆ ಬರುವಂತೆ ಕಾಣಿಸುತ್ತಿಲ್ಲ. ಗುರುವಾರವೂ ದೆಹಲಿಯ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಇಂದಿಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ AQI 387 ಇದೆ. ಇದು ಅತ್ಯಂತ ಕಳಪೆ ವಿಭಾಗದಲ್ಲಿ ಬರುತ್ತದೆ. ದೆಹಲಿಯಲ್ಲಿ ಮಂಜು ಮತ್ತು ಶೀತ ಅಲೆ ಮುಂದುವರೆದಿದ್ದು, ಸತತ ಎರಡನೇ ದಿನವಾದ ಬುಧವಾರ ಕನಿಷ್ಠ 4 ಡಿಗ್ರಿ ತಾಪಮಾನ ದಾಖಲಾಗಿದೆ. ಇಂದು ಕೂಡ ದೆಹಲಿಯಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊರೆಯುವ ಚಳಿ ಮಧ್ಯೆ ಮಳೆ

ಕೊರೆಯುವ ಚಳಿ ಮಧ್ಯೆ ಮಳೆ

ದೆಹಲಿಯಲ್ಲಿ ಅಧಿಕ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. ವಾಯುಮಾಲಿನ್ಯದಿಂದಾಗಿ ಹಲವಾರು ಕಾಯಿಲೆಗಳ ಭೀತಿ ಎದುರಾಗಿದೆ. ಇದೆಲ್ಲದರ ಮಧ್ಯೆ ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 26-29ರ ನಡುವೆ ದೆಹಲಿಯಲ್ಲಿ ಮಳೆಯಾಗಬಹುದು, ಇದರಿಂದ ಮಾಲಿನ್ಯ ಕಡಿಮೆಯಾಗಬಹುದು ಎಂದಿದೆ. ಆದರೆ ಇದರಿಂದ ರಾಜಧಾನಿಯಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಪರ್ವತಗಳ ಮೇಲಿನ ಹಿಮಪಾತ ಮತ್ತು ಸಕ್ರಿಯ ಪಾಶ್ಚಿಮಾತ್ಯ ಅಡಚಣೆಗಳಿಂದ ದೆಹಲಿಯಲ್ಲಿ ಚಳಿಗಾಲವು ಹೆಚ್ಚಿದ್ದರೂ, ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಪ್ರಕಾರ, ಮುಂದಿನ ಎರಡು ಮೂರು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ.

ದೆಹಲಿಯಲ್ಲಿಂದು ವಾಯುಮಾಲಿನ್ಯ

ದೆಹಲಿಯಲ್ಲಿಂದು ವಾಯುಮಾಲಿನ್ಯ

ಪೂಸಾ, ದೆಹಲಿ - 460 AQI ತುಂಬಾ ಕೆಟ್ಟದು

ಪಂಜಾಬಿ ಬಾಗ್-428 AQI ತುಂಬಾ ಕೆಟ್ಟದು

ಶಾದಿಪುರ್, ದೆಹಲಿ - 421 AQI ತೀರಾ ಕೆಟ್ಟದು

ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ 389 AQI⁠ ತುಂಬಾ ಕೆಟ್ಟದು

ಅಶೋಕ್ ವಿಹಾರ್ ದೆಹಲಿ 398 AQI ತುಂಬಾ ಕೆಟ್ಟದು

NSIT ದ್ವಾರಕಾ, 378 AQI ತುಂಬಾ ಕೆಟ್ಟ ಕೆಟ್ಟ

ಲೋಧಿ ರಸ್ತೆ, 332 AQI ತುಂಬಾ ಕೆಟ್ಟದು

ಪ್ರಮುಖ ನಗರಗಳ ಗಾಳಿಯ ಗುಣಮಟ್ಟ

ಪ್ರಮುಖ ನಗರಗಳ ಗಾಳಿಯ ಗುಣಮಟ್ಟ

ಗುರುಗ್ರಾಮ್‌ನಲ್ಲಿ AQI 405 AQI

ಫರಿದಾಬಾದ್‌ನಲ್ಲಿ 389 AQI

ಗಾಜಿಯಾಬಾದ್‌ನಲ್ಲಿ 332 AQI

ಗ್ರೇಟರ್ ನೋಯ್ಡಾದಲ್ಲಿ 341 AQI

ಮೊರಾದಾಬಾದ್‌ನಲ್ಲಿ 328 AQI

ಆಗ್ರಾದಲ್ಲಿ 339 AQI

ಜೈಪುರದಲ್ಲಿ 321 AQI

ಲಕ್ನೋದಲ್ಲಿ 382 AQI

ಅಂಬಾಲಾದಲ್ಲಿ 319 AQI

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ರಾಜ್ಯಗಳಿಗೆ ಮಾಲಿನ್ಯ ನಿಯಂತ್ರಣಕ್ಕೆ ಸೂಚನೆ

ರಾಜ್ಯಗಳಿಗೆ ಮಾಲಿನ್ಯ ನಿಯಂತ್ರಣಕ್ಕೆ ಸೂಚನೆ

ಪ್ರಪಂಚದ ಅತ್ಯಂತ ಕಲುಷಿತ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಕೊಳೆತ ಬೆಳೆಗಳು ಹಾಗೂ ಬೆಳೆಯ ನಂತರದ ಹುಲ್ಲು ಸುಡುವಿಕೆ, ಸಾರಿಗೆಯಿಂದ ಹೊರಸೂಸುವಿಕೆ, ನಗರ ಮತ್ತು ಇತರ ಕೈಗಾರಿಕೆಗಳ ಹೊರಗಿನ ಕಲ್ಲಿದ್ದಲು ಸ್ಥಾವರಗಳು, ಹಾಗೆಯೇ ತೆರೆದ ಕಸವನ್ನು ಸುಡುವುದು ಮತ್ತು ಧೂಳಿನ ಕಾರಣದಿಂದ ಕುಸಿದಿದೆ. ಹೀಗಾಗಿ ವಿಷಕಾರಿ ಹೊಗೆಯನ್ನು ಕಡಿಮೆ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Recommended Video

Deepak Chahar ಟೆಸ್ಟ್ ಪಂದ್ಯ ಆಗದಿದ್ದರೂ ಅಭ್ಯಾಸದಲ್ಲಿ ತೊಡಗಿದ್ದು ಹೀಗೆ | Oneindia Kannada

English summary
Delhi's air quality remained very poor even on Thursday. Even today the AQI of Rajdhani is 387, which comes in the very poor category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X