ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣೆ ಬಗ್ಗೆ ಚರ್ಚೆ?: ರಾಹುಲ್‌ ಗಾಂಧಿಯನ್ನು ಭೇಟಿಯಾದ ಚುನಾವಣಾ ಚಾಣಕ್ಯ

|
Google Oneindia Kannada News

ನವದೆಹಲಿ, ಜು.13: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಂಗಳವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿಯಾದರು. ಈ ಭೇಟಿಯು ಪಂಜಾಬ್‌ನಲ್ಲಿ ಪಕ್ಷದ ಗಲಾಟೆ ಕುರಿತು ಚರ್ಚಿಸುವ ಉದ್ದೇಶ ಹೊಂದಿದೆ ಎಂದು ವರದಿಯಾಗಿದೆ.

ಕಳೆದ ಕೆಲವು ವಾರಗಳಲ್ಲಿ ಸರಣಿ ರಾಜಕೀಯ ಸಭೆಗಳನ್ನು ನಡೆಸಿದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹಾಗೂ ಸಿ.ವೇಣುಗೋಪಾಲ್‌ ಸಭೆಗಾಗಿ ರಾಹುಲ್ ಗಾಂಧಿಯ ಮನೆಗೆ ಆಗಮಿಸಿದ್ದಾರೆ. ಇನ್ನು ಈ ಸಭೆ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆದಿದೆ ಎಂದು ಕೂಡಾ ಊಹಿಸಲಾಗಿದೆ.

ತೀವ್ರ ಕುತೂಹಲಕ್ಕೆ ಕಾರಣವಾಯ್ತು ಶರದ್ ಪವಾರ್, ಪ್ರಶಾಂತ್ ಕಿಶೋರ್ ಭೇಟಿತೀವ್ರ ಕುತೂಹಲಕ್ಕೆ ಕಾರಣವಾಯ್ತು ಶರದ್ ಪವಾರ್, ಪ್ರಶಾಂತ್ ಕಿಶೋರ್ ಭೇಟಿ

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುನ್ನ ಹಲವಾರು ರಾಜಕೀಯ ಪಕ್ಷಗಳು ಸಭೆಯನ್ನು ನಡೆಸಲು ಆರಂಭಿಸಿದೆ. ಈ ನಡುವೆ ಈ ಭೇಟಿಯೂ ಕೂಡಾ ಚುನಾವಣೆ ಸಂಬಂಧಿತ ಎಂದು ಹೇಳಲಾಗಿದೆ.

Poll Strategist Prashant Kishor Meets With Rahul Gandhi In Delhi

ಭಾನುವಾರ, ನವಜೋತ್ ಸಿಂಗ್ ಸಿಧು ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕುಟುಂಬದ ಜೊತೆ ಸಭೆ ನಡೆಸಿದ್ದರು.

2017 ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ವಿಫಲ ಅಭಿಯಾನದಲ್ಲಿ ರಾಹುಲ್ ಗಾಂಧಿ ಕೊನೆಯದಾಗಿ ಪ್ರಶಾಂತ್ ಕಿಶೋರ್‌ ಜೊತೆ ಸಹಕರಿಸಿದ್ದರು.

ಟ್ರೆಂಡ್‌ನಲ್ಲಿರುವಾಗಲೇ ನಿವೃತ್ತಿ ಘೋಷಣೆ ಮಾಡಿದ ಚಾಣಕ್ಯಟ್ರೆಂಡ್‌ನಲ್ಲಿರುವಾಗಲೇ ನಿವೃತ್ತಿ ಘೋಷಣೆ ಮಾಡಿದ ಚಾಣಕ್ಯ

ಈ ನಡುವೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌, ಪ್ರಶಾಂತ್‌ ಕಿಶೋರ್‌ರನ್ನು ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ಇದಕ್ಕಾಗಿ ಕೇವಲ ಒಂದು ರೂಪಾಯಿ ಸಂಬಳವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರಶಾಂತ್‌ ಕಿಶೋರ್‌ ಕ್ಯಾಪ್ಟನ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರ ಸ್ಥಾನಮಾನವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Poll strategist Prashant Kishor met with Congress leader Rahul Gandhi in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X