• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊದಲ ದಿನ ಕೊರೊನಾ ಲಸಿಕೆ ಪಡೆದ ರಾಜಕಾರಣಿಗಳು ಯಾರು?

|

ನವದೆಹಲಿ, ಜನವರಿ 16: ಕೊರೊನಾ ಸೋಂಕಿನ ವಿರುದ್ಧ ಬೃಹತ್ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆತಿದ್ದು, ದೇಶಾದ್ಯಂತ ಸಾವಿರಾರು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ.

   ಮಂಡ್ಯ: 8 ಲಸಿಕ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ, ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ | Oneindia Kannada

   ಇಬ್ಬರು ರಾಜಕಾರಣಿಗಳು ಕೂಡ ಮೊದಲ ದಿನ ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಬಿಜೆಪಿ ಮುಖಂಡ, ಉತ್ತರ ಪ್ರದೇಶದ ಸಂಸದ ಡಾ. ಮಹೇಶ್ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಶಾಸಕ ರಬೀಂದ್ರನಾಥ ಚಟರ್ಜಿ ಲಸಿಕೆ ಸ್ವೀಕರಿಸಿದ್ದಾಗಿ ತಿಳಿದುಬಂದಿದೆ.

   ಭಾರತದಲ್ಲೇ ಮೊದಲು ಕೊವಿಡ್-19 ಲಸಿಕೆ ಪಡೆದಿದ್ದು ಯಾರು?

   ವೈದ್ಯರೂ ಆಗಿರುವ ಸಂಸದ ಡಾ. ಮಹೇಶ್ ಶರ್ಮಾ ಅವರು ಆರೋಗ್ಯ ಕಾರ್ಯಕರ್ತರಾಗಿ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ನಂತರ ಮೂವತ್ತು ನಿಮಿಷಗಳ ಕಾಲ ಆಸ್ಪತ್ರೆಯಲ್ಲಿ ಅವರನ್ನು ನಿಗಾದಲ್ಲಿರಿಸಲಾಗಿತ್ತು. "ಕೊರೊನಾ ಸೋಂಕಿನ ಅಂತ್ಯಕ್ಕೆ ಈ ಬೃಹತ್ ಲಸಿಕಾ ಕಾರ್ಯಕ್ರಮ ಆರಂಭವಾಗಲಿದೆ. ವೈದ್ಯನಾಗಿ ನಾನು ಕೊರೊನಾ ವೈರಸ್ ಲಸಿಕೆ ಪಡೆದುಕೊಂಡಿದ್ದೇನೆ, ಆರೋಗ್ಯವಾಗಿದ್ದೇನೆ. ಈ ಲಸಿಕೆಗಳು ಸುರಕ್ಷಿತವಾಗಿವೆ, ನೀವೆಲ್ಲರೂ ಲಸಿಕೆ ಪಡೆಯಬೇಕು" ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

   ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ರಬೀಂದ್ರನಾಥ ಚಟರ್ಜಿ ಅವರು ಕೂಡ ರೋಗಿಗಳ ಕಲ್ಯಾಣ ಸಮಿತಿ ಭಾಗವಾಗಿ ಲಸಿಕೆ ಪಡೆದುಕೊಂಡಿದ್ದಾರೆ.

   ಈ ಮುನ್ನ ರಾಜ್ಯದಲ್ಲಿ ತಾವೇ ಮೊದಲ ಕೊರೊನಾ ಲಸಿಕೆ ಪಡೆಯುವುದಾಗಿ ತೆಲಂಗಾಣ ಆರೋಗ್ಯ ಸಚಿವ ರಾಜೇಂದರ್ ಘೋಷಿಸಿದ್ದು, ನಂತರ ಘೋಷಣೆ ವಾಪಸ್ ಪಡೆದು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ತಿಳಿಸಿದರು.

   English summary
   Uttar pradesh's BJP MP Mahesh Sharma and West bengal Rabindranath Chatterjee, a Trinamool Congress MLA inoculated on firs day of coronavirus vaccination drive
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X