ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಗಣ್ಯರ ಕಂಬನಿ

|
Google Oneindia Kannada News

ನವದೆಹಲಿ, ಅಕ್ಟೋಬರ್.08: ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರನ್ನು ಸಪ್ಟೆಂಬರ್.11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವದೆಹಲಿ ಖಾಸಗಿ ಆಸ್ಪತ್ರೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು ಎಂದು ಪುತ್ರ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.

ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್

ಗುರುವಾರ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪುತ್ರ ಚಿರಾಗ್ ಪಾಸ್ವಾನ್ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಸರಳ, ಸಜ್ಜನ ವ್ಯಕ್ತಿತ್ವದ ರಾಜಕಾರಣಿ ಎನಿಸಿಕೊಂಡಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

"ದೇಶ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ"

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಲ್ಲಿ ರಾಷ್ಟ್ರವು ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದೆ. ಅವರು ಸಂಸತ್ತಿನ ಅತ್ಯಂತ ಸಕ್ರಿಯ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು ಮತ್ತು ಅಂಚಿನಲ್ಲಿರುವವರಿಗೆ ಕಾರಣರಾದರು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

ನನಗಾದ ನೋವನ್ನು ಪದಗಳಲ್ಲಿ ಹೇಳಲಾಗದು ಎಂದ ಮೋದಿ

ನನಗಾದ ನೋವನ್ನು ಪದಗಳಲ್ಲಿ ಹೇಳಲಾಗದು ಎಂದ ಮೋದಿ

"ನಾನು ಪದಗಳನ್ನು ಮೀರಿ ದುಃಖಿತನಾಗಿದ್ದೇನೆ. ನಮ್ಮ ರಾಷ್ಟ್ರದಲ್ಲಿ ಒಂದು ಅನೂರ್ಜಿತತೆಯಿದೆ, ಅದು ಎಂದಿಗೂ ತುಂಬುವುದಿಲ್ಲ. ಶ್ರೀ ರಾಮ್ ವಿಲಾಸ್ ಪಾಸ್ವಾನ್ ಜಿ ಅವರ ನಿಧನವು ವೈಯಕ್ತಿಕ ನಷ್ಟವಾಗಿದೆ. ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಬಡತನದ ನಡುವೆಯೂ ಘನತೆಯಕ್ತ ಹಾಗೂ ಮೌಲ್ಯಯುವ ಜೀವನವನ್ನು ಸಾಗಿಸುತ್ತಿದ್ದ ಸ್ನೇಹಿತನಿಂದ ನಾನೂ ಸಹ ಉತ್ಸಾಹಭರಿತನಾಗಿದ್ದೆ. ರಾಮ ವಿಲಾಸ್ ಪಾಸ್ವಾನ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದು ಅತೀವ ಅನುಭವವನ್ನು ನೀಡಿದೆ. ಕ್ಯಾಬಿನೆಟ್ ಸಭೆಗಳಲ್ಲಿ ಅವರ ಮಧ್ಯಸ್ಥಿಕೆ ಒಳನೋಟ ಮತ್ತು ದೂರದೃಷ್ಟಿವುಳ್ಳದ್ದಾಗಿತ್ತು. ರಾಜಕೀಯ ಬುದ್ಧಿವಂತಿಕೆ, ರಾಜಕಾರಣದಿಂದ ಹಿಡಿದು ಆಡಳಿತದ ವಿಷಯಗಳವರೆಗೆ ಅವರು ಅದ್ಭುತ ರಾಜಕಾರಣಿಯಾಗಿದ್ದರು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ

ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. "ಅವರು ಭಾರತೀಯ ರಾಜಕಾರಣದ ಎತ್ತರದ ವ್ಯಕ್ತಿತ್ವ - ತೀಕ್ಷ್ಣವಾದ ವಾಗ್ಮಿ, ಜನಪ್ರಿಯ ನಾಯಕ, ಸಮರ್ಥ ಆಡಳಿತಗಾರ, ಸೌಹಾರ್ದಯುತ ವ್ಯಕ್ತಿತ್ವವನ್ನು ಹೊಂದಿರುವ ಪ್ರಬಲ ಸಂಘಟಕರಾಗಿದ್ದರು. ಅಂಥವರ ಅಗಲಿಕೆಯು ತಮಗೂ ಕೂಡಾ ವ್ಯಯಕ್ತಿಕವಾಗಿ ಸಾಕಷ್ಟು ನಷ್ಟವನ್ನು ಉಂಟು ಮಾಡಿದೆ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಕಂಬನಿ

ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಕಂಬನಿ

ಇಂದಿನ ದಿನಗಳಲ್ಲಿ ಚಿರಾಗ್ ಪಾಸ್ವಾನ್ ಅವರಿಗೆ ರಾಮ್ ವಿಲಾಸ್ ಪಾಸ್ವಾನ್ ಅವರ ಅಗತ್ಯತೆ ಹೆಚ್ಚಾಗಿತ್ತು. ಇಂದು ಪಾಸ್ವಾನ್ ಜೀ ಅವರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬದ ಜೊತೆಗೆ ನಾವು ಸದಾ ಇರುತ್ತೇವೆ. ನಾನು ಪಾಸ್ವಾನ್ ಜಿ ಅವರೊಂದಿಗೆ ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದೆ. ಕಳೆದ 2010ರಲ್ಲಿ ಆರ್ ಜೆಡಿ ಮತ್ತು ಎಲ್ ಜೆಪಿ ಮೈತ್ರಿ ಮಾಡಿಕೊಂಡಿದ್ದರಿಂದ ಅನೇಕ ಚುನಾವಣಾ ಪ್ರಚಾರಗಳನ್ನು ಒಟ್ಟಿಗೆ ಮಾಡಿದ್ದೇವೆ ಎಂದು ತೇಜಸ್ವಿ ಯಾದವ್ ಸ್ಮರಿಸಿಕೊಂಡರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ

"ಭಾರತೀಯ ರಾಜಕೀಯ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅವರ ಅನುಪಸ್ಥಿತಿ ಯಾವಾಗಲೂ ಉಳಿಯುತ್ತದೆ. ಬಡವರ ಕಲ್ಯಾಣ ಮತ್ತು ಬಿಹಾರದ ಅಭಿವೃದ್ಧಿಯ ಕನಸನ್ನು ಈಡೇರಿಸಲು ಮೋದಿ ಸರ್ಕಾರ ಬದ್ಧವಾಗಿರುತ್ತದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಮತ್ತು ಅಗಲಿದ ಆತ್ಮದ ಶಾಂತಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

English summary
Political Leaders Mourns Death Of Union Minister Ram Vilas Paswan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X