ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ಷಿ ಸಂಗ್ರಹಕ್ಕಾಗಿ ಮುಹಮ್ಮದ್ ಜುಬೈರ್‌ನನ್ನು ಬೆಂಗಳೂರಿಗೆ ಕರೆತರಲಿರುವ ದೆಹಲಿ ಪೊಲೀಸರು

|
Google Oneindia Kannada News

ನವದೆಹಲಿ, ಜೂನ್‌ 30: ಆಕ್ಷೇಪಾರ್ಹ ಟ್ವೀಟ್‌ನಿಂದ ಪೊಲೀಸ್ ಕಸ್ಟಡಿಯಲ್ಲಿರುವ ಸತ್ಯಪರಿಶೋಧನೆ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಜುಬೇರ್ ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕೋರಿ ದೆಹಲಿ ಪೊಲೀಸರು ಬುಧವಾರ ಬಹು ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2018 ರಲ್ಲಿ ಹಿಂದೂ ದೇವರ ವಿರುದ್ಧ ಟ್ವೀಟ್ ಪೋಸ್ಟ್ ಮಾಡಿದ ನಂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮುಹಮ್ಮದ್ ಜುಬೇರ್ ಅವರನ್ನು ಸೋಮವಾರ ಬಂಧಿಸಲಾಯಿತು.

Breaking: ಪತ್ರಕರ್ತ ಜುಬೇರ್ ಬಂಧನದ ವಿರುದ್ಧ ಸಿದ್ದರಾಮಯ್ಯ ಟ್ವೀಟ್Breaking: ಪತ್ರಕರ್ತ ಜುಬೇರ್ ಬಂಧನದ ವಿರುದ್ಧ ಸಿದ್ದರಾಮಯ್ಯ ಟ್ವೀಟ್

"ನಾವು ಪ್ರಸ್ತುತ ಆಲ್ಟ್ ನ್ಯೂಸ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಿಗೆ ಮಾಡಿದ ದೇಣಿಗೆ ಮತ್ತು ಇತರ ಹಣಕಾಸಿನ ವಹಿವಾಟಿನ ಮೂಲವನ್ನು ಪರಿಶೀಲಿಸುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ, ಒಂದು ಖಾತೆಯಲ್ಲಿ 50 ಲಕ್ಷ ರುಪಾಯಿ ಮೊತ್ತದ ವಹಿವಾಟು ನಡೆದಿದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಬಹು ಬ್ಯಾಂಕ್ ಖಾತೆಗಳಿಂದ ಮಾಡಿದ ವಹಿವಾಟುಗಳ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಕಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಕ್ಷಿ ಸಂಗ್ರಹಕ್ಕಾಗಿ ಬೆಂಗಳೂರಿಗೆ ಜುಬೈರ್

ಸಾಕ್ಷಿ ಸಂಗ್ರಹಕ್ಕಾಗಿ ಬೆಂಗಳೂರಿಗೆ ಜುಬೈರ್

ತನಿಖೆಗೆ ಸಂಬಂಧಿಸಿದಂತೆ ಮುಹಮ್ಮದ್ ಜುಬೈರ್ ಅವರನ್ನು ಗುರುವಾರ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು. ಮುಹಮ್ಮದ್ ಜುಬೈರ್ ಮೂಲತಃ ಕರ್ನಾಟಕದವರಾಗಿದ್ದಾರೆ.

"ಪ್ರಶ್ನಾರ್ಹ ಟ್ವೀಟ್ ಪೋಸ್ಟ್ ಮಾಡಲು ಬಳಸಿರುವ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಸೇರಿದಂತೆ ಸಾಧನಗಳನ್ನು ವಶಪಡಿಸಿಕೊಳ್ಳಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲು ನಮ್ಮ ತಂಡವು ಗುರುವಾರ ಜುಬೈರ್‌ನನ್ನು ಬೆಂಗಳೂರಿಗೆ ಕರೆದೊಯ್ಯುತ್ತದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಮೊಬೈಲ್ ಕಳೆದುಕೊಂಡಿದ್ದೇನೆ ಎಂದ ಜುಬೈರ್

ಟ್ವೀಟ್ ಮಾಡಿರುವ ಮೊಬೈಲ್ ಕಳೆದುಕೊಂಡಿದ್ದೇನೆ ಎಂದ ಜುಬೈರ್

ಸದ್ಯ ಜುಬೈರ್ ಬಳಸುತ್ತಿರುವ ಮೊಬೈಲ್ ಫೋನ್ ಫಾರ್ಮ್ಯಾಟ್ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಜುಬೈರ್ ಆಆಕ್ಷೇಪಾರ್ಹ ಟ್ವೀಟ್ ಪೋಸ್ಟ್ ಮಾಡಿದಾಗ ಅವರು ಬಳಸಿದ ಫೋನ್ ಬಗ್ಗೆ ಕೇಳಿದಾಗ, ಅದನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಜುಬೈರ್ ಬಂಧನಕ್ಕೆ ಕಾರಣವಾದ ಅನಾಮಧೇಯ ಟ್ವಿಟರ್ ಅಕೌಂಟ್ ಅಮಾನತ್ತಾಗಿದೆ. ಅದು ಈಗ ಅಸ್ತಿತ್ವದಲ್ಲಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿದೆ.

ಮತ್ತೆ 4 ದಿನಗಳ ಕಾಲ ಕಸ್ಟಡಿ ವಿಸ್ತರಿಸಿದ ಕೋರ್ಟ್

ಮತ್ತೆ 4 ದಿನಗಳ ಕಾಲ ಕಸ್ಟಡಿ ವಿಸ್ತರಿಸಿದ ಕೋರ್ಟ್

ದೆಹಲಿ ನ್ಯಾಯಾಲಯವು ಮಂಗಳವಾರ ಜುಬೈರ್‌ನ ಕಸ್ಟಡಿ ವಿಚಾರಣೆಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ಜುಬೇರ್ ಪರ ವಕೀಲರು, ಜುಬೈರ್ ಟ್ವೀಟ್‌ನಲ್ಲಿ ಬಳಸಿರುವ ಫೋಟೋವು 1983 ರ ಹೃಷಿಕೇಶ್ ಮುಖರ್ಜಿಯವರ "ಕಿಸಿ ಸೆ ನಾ ಕೆಹನಾ" ಚಿತ್ರದ್ದಾಗಿದೆ ಮತ್ತು ಆದರೆ ಚಲನಚಿತ್ರವನ್ನು ನಿಷೇಧಿಸಿಲ್ಲ ಎಂದು ಹೇಳಿದರು.

ಆದರೆ ಈ ಹಂತದಲ್ಲಿ ಆರೋಪಿಗಳಿಗೆ ಯಾವುದೇ ನೆರವು ನೀಡಿಲ್ಲ ಎಂದು ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು. ಜುಬೇರ್ ಅವರು "ಖ್ಯಾತಿ ಪಡೆಯುವ ಪ್ರಯತ್ನದಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸಲು ವಿವಾದಾತ್ಮಕ ಟ್ವೀಟ್‌ಗಳನ್ನು ಬಳಸಿದ್ದಾನೆ" ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧನ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧನ

ಜುಬೇರ್ ವಿರುದ್ಧ ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹೇಳಿದರು.

2018 ರಲ್ಲಿ ಪೋಸ್ಟ್ ಮಾಡಿದ ಅವರ ಟ್ವೀಟ್‌ಗಳಲ್ಲಿ ಒಂದು ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಉದ್ದೇಶದಿಂದ ಪ್ರಶ್ನಾರ್ಹ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

English summary
Delhi Police will take fact-checking website Alt News co-founder Mohammed Zubair to Bengaluru on thursday to seize the devices, that might have been used to post the tweet in question, and also to collect other evidence linked to the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X