ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನ ಕೊಲ್ಲಿಸಿದ ಹೆಂಡತಿ, ತನಿಖೆ ದಾರಿ ತಪ್ಪಿಸಲು ಯತ್ನ!

|
Google Oneindia Kannada News

ನವದೆಹಲಿ, ಮೇ 26: ಪತಿಯನ್ನು ಕೊಂದ ಆರೋಪದ ಮೇಲೆ 28 ವರ್ಷದ ಮಹಿಳೆ ಮತ್ತು ಕೊಲೆಗೆ ಸಹಕಾರ ನೀಡಿದ ಪುರುಷನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಗಂಡನನ್ನು ಕೊಲ್ಲಲು ಸುಪಾರಿ ಕಿಲ್ಲರ್ ನೇಮಿಸಿದ್ದ ಮಹಿಳೆಯು ಈ ಕೊಲೆಯು ದರೋಡೆ ಮಾಡುವವರ ಕೃತ್ಯ ಎಂದು ಬಿಂಬಿಸಿ ತನಿಖಾಧಿಕಾರಿಗಳ ದಾರಿ ತಪ್ಪಿಸಲು ಪ್ರಯತ್ನಿಸಿದ್ದಳು. ಚಂದರ್ ಕಲಾ ಎಂಬಾಕೆ ದೆಹಲಿಯ ರಂಹೋಲಾ ಪ್ರದೇಶದ ಜುಮ್ಮನ್ (27)ನೊಂದಿಗೆ ಸೇರಿ ಪತಿ ವೀರ್‌ ಬಹದ್ದೂರ್‌ ಶರ್ಮಾ ಕೊಲೆಗೆ ಸಂಚು ರೂಪಿಸಿದ್ದಳು.

ಹತ್ಯೆ ಮಾಡಲು ಸುತ್ತಿಗೆ ಮತ್ತು 1.5 ಲಕ್ಷ ರೂಪಾಯಿಗಳನ್ನು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸುತ್ತಿಗೆ ಮತ್ತು 50,000 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳೆ ಪತಿಯ ಜೊತೆ ನಡುವೆ ಆಗಾಗ್ಗೆ ಜಗಳವಾಡುತ್ತಿದ್ದರು. ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು, ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತನ್ನ ಪತಿ ವಿವಾಹವಾಗಿಯೂ ಇತರ ಸಂಬಂಧಗಳನ್ನು ಹೊಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಮಲಗಿದ್ದಾಗ ಸುತ್ತಿಗೆಯಿಂದ ಹೊಡೆದು ಹತ್ಯೆ

ಪತಿ ಮಲಗಿದ್ದಾಗ ಸುತ್ತಿಗೆಯಿಂದ ಹೊಡೆದು ಹತ್ಯೆ

ಚಂದರ್‌ ಕಲಾ ಮತ್ತು ಜುಮ್ಮನ್‌ ಯೋಜನೆ ರೂಪಿಸಿದಂತೆ ಮೇ 18ರಂದು ವೀರ್‌ ಬಹದ್ದೂರ್‌ ಶರ್ಮಾ ಕೊಲೆ ಮಾಡಿದ್ದಾರೆ. ತನ್ನ ಮನೆಯ ಮುಖ್ಯ ಗೇಟ್ ಅನ್ನು ತೆರೆದು ಆಕೆ ಜುಮ್ಮನ್ ಸುಲಭವಾಗಿ ಒಳಗೆ ಬರುವಂತೆ ವ್ಯವಸ್ಥೆ ಮಾಡಿದ್ದಳು. ಜುಮ್ಮನ್ ರಾತ್ರಿ ಸುತ್ತಿಗೆಯೊಂದಿಗೆ ಮನೆಗೆ ಬಂದು ತಲೆಗೆ ಎರಡು ಬಾರಿ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವೀರ್‌ ಬಹದ್ದೂರ್‌ ಶರ್ಮಾ ಸಾವು

ಆಸ್ಪತ್ರೆಯಲ್ಲಿ ವೀರ್‌ ಬಹದ್ದೂರ್‌ ಶರ್ಮಾ ಸಾವು

ಇದೊಂದು ದರೋಡೆ ಎಂಬಂತೆ ಬಿಂಬಿಸಲು ಹಾಗೂ ಪೊಲೀಸರ ದಿಕ್ಕು ತಪ್ಪಿಸುವಂತೆ ಚಂದರ್ ಕಲಾ ಜುಮ್ಮನ್‌ಗೆ ಹಣ, ಚಿನ್ನಾಭರಣ ನೀಡಿದ್ದಳು. ಅಪರಿಚಿತ ವ್ಯಕ್ತಿಯಿಂದ ತಮಗೆ ಕರೆ ಬಂದಿದ್ದು, ಅವರ ನಿವಾಸದ ಬಳಿ ರಸ್ತೆಯಲ್ಲಿ ಶವ ಬಿದ್ದಿದೆ. ಅದರ ಸುತ್ತಲೂ ಜನಸಂದಣಿ ಸೇರಿದೆ ಎಂದು ಮಾಹಿತಿ ನೀಡಿದರು. "ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರನ್ನು ವೀರ್ ಬಹದ್ದೂರ್ ವರ್ಮಾ ಎಂದು ಗುರುತಿಸಲಾಗಿದೆ, ದೆಹಲಿಯ ವಿಕಾಸ್ ನಗರದ ನಿವಾಸಿ, 50 ವರ್ಷದ ಆ ವ್ಯಕ್ತಿಯನ್ನು ಡಿಡಿಯು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ಘೋಷಿಸಲಾಯಿತು" ಎಂದು ಪೊಲೀಸ್ ಉಪ ಆಯುಕ್ತ ಸಮೀರ್ ಶರ್ಮಾ ಹೇಳಿದರು.

ಅಮಾನುಷವಾಗಿ ವ್ಯಕ್ತಿಗೆ ಹಲ್ಲೆ ಮಾಡಿ ಹತ್ಯೆ

ಅಮಾನುಷವಾಗಿ ವ್ಯಕ್ತಿಗೆ ಹಲ್ಲೆ ಮಾಡಿ ಹತ್ಯೆ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 120 ಬಿ (ಅಪರಾಧದ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್‌ ಉಪ ಆಯುಕ್ತ ಸಮೀರ್‌ ಶರ್ಮಾ ಹೇಳಿದರು. ಕೃತ್ಯದಲ್ಲಿ ಭಾಗಿಯಾದ ಚಂದರ್‌ ಕಲಾನನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯ ಉತ್ತರ ಸಂಶಯಕ್ಕೆ ಕಾರಣವಾಗಿತ್ತು. ಕೆಲವು ದರೋಡೆಕೋರರು ಆಕೆಯ ಮನೆಗೆ ಪ್ರವೇಶಿಸಿ ಆಭರಣಗಳ ಜೊತೆಗೆ ಹಣವನ್ನು ದೋಚಿದ್ದಾರೆ ಎಂದು ಹೇಳಿದ್ದಳು. ಅಂದು ರಾತ್ರಿ ವೀರ್‌ ಬಹದ್ದೂರ್‌ ವರ್ಮಾಗೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಲಾ ಮೇಲೆ ಪೊಲೀಸರ ಸಂದೇಹ

ಆರೋಪಿ ಕಲಾ ಮೇಲೆ ಪೊಲೀಸರ ಸಂದೇಹ

ದರೋಡೆಗೆ ಸಂಬಂಧಿಸಿದಂತೆ ಆಕೆಯ ಹೇಳಿಕೆಗಳು ಅಸಮಂಜಸವೆಂದು ಕಂಡುಬಂದಿದ್ದರಿಂದ ಪೊಲೀಸರು ಚಂದರ್ ಕಲಾ ಮೇಲೆ ಅನುಮಾನಿಸಲು ಪ್ರಾರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಮತ್ತು ಕರೆಯ ವಿವರಗಳ ಆಧಾರದ ಮೇಲೆ ಜುಮ್ಮನ್‌ನನ್ನು ಬಂಧಿಸಲಾಯಿತು. ಕಲಾಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು.

ಕೆಲಸದ ವೇಳೆ ಕಿರುಕುಳ ಆರೋಪ

ಕೆಲಸದ ವೇಳೆ ಕಿರುಕುಳ ಆರೋಪ

ಚಂದರ್‌ ಕಲಾ ಜುಮ್ಮನ್ ಜೊತೆ ಸಂಪರ್ಕದಲ್ಲಿದ್ದಳು. ಕೃತ್ಯದ ಕೆಲವು ವಾರಗಳಲ್ಲಿ ಅವನಿಗೆ ಹಲವಾರು ಕರೆಗಳನ್ನು ಮಾಡಿರುವುದು ಕಂಡುಬಂದಿದೆ. ಕೊನೆಗೆ ಕಲಾ ತನ್ನ ಪತಿಯನ್ನು ಕೊಲ್ಲಲು ತಾನೇ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮದುವೆಗೆ ಮೊದಲು ವರ್ಮಾ ಅವರ ಗಾರ್ಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಅವನು ತನಗೆ ಕಿರುಕುಳ ನೀಡುತ್ತಿದ್ದನು. ಶರ್ಮಾಗೆ ಈಗಾಗಲೇ ಮದುವೆಯಾಗಿದ್ದಾನೆ ಎಂದು ತಿಳಿದಿದ್ದರೂ ಕಲಾ ಅವನನ್ನು ವಿರೋಧಿಸಲು ಸಾಧ್ಯವಾಗದೆ ಮದುವೆಯಾಗಿದ್ದಾಳೆ. ಅವರಿಗೆ ಮಕ್ಕಳೂ ಇದ್ದಾರೆ ಎಂದು ಪೊಲೀಸರು ಹೇಳಿದರು.

ಅವನ ಅಭ್ಯಾಸಗಳಿಂದ ಬೇಸತ್ತ ಕಲಾ

ಅವನ ಅಭ್ಯಾಸಗಳಿಂದ ಬೇಸತ್ತ ಕಲಾ

ಚಂದ್ರಕಲಾ ಪತಿ ವೀರ್‌ ಬಹದ್ದೂರ್‌ ಶರ್ಮಾ ತನ್ನ ಮೊದಲ ಹೆಂಡತಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದನು. ಕೆಲವು ವಾರಗಳ ಹಿಂದೆ ಕಲಾ ಅವರ ಸಹೋದರಿಯೊಂದಿಗೆ ಬಂದಾಗ ಅವನು ಅವಳನ್ನು ನೋಡಿದನು. ಅವನ ಅಭ್ಯಾಸಗಳಿಂದ ಬೇಸತ್ತ ಅವಳು ಕೊಲೆಗಾರನನ್ನು ನೇಮಿಸಿಕೊಳ್ಳಲು ಮತ್ತು ತನ್ನ ಪತಿಯನ್ನು ಕೊಲ್ಲಲು ನಿರ್ಧರಿಸಿದಳು ಎಂದು ಪೊಲೀಸರು ಹೇಳಿದರು.

English summary
A 28-year-old woman arrested by police in Delhi on charges of murder of husband with the help of the man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X