ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಗಾಗಿ ಬೇಹುಗಾರಿಕೆ: ಪೋಖ್ರಾನ್ ಕ್ಯಾಂಪ್‌ನ ತರಕಾರಿ ಸರಬರಾಜುದಾರ ಬಂಧನ

|
Google Oneindia Kannada News

ನವದೆಹಲಿ, ಜು.15: ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್‌ನಲ್ಲಿ ತರಕಾರಿಗಳನ್ನು ಸರಬರಾಜು ಮಾಡುತ್ತಿದ್ದ ತರಕಾರಿ ಸರಬರಾಜುದಾರನನ್ನು ಸೈನ್ಯದ ವ್ಯಕ್ತಿಯೊಬ್ಬರಿಂದ ಹಣ ನೀಡಿ ಸೂಕ್ಷ್ಮ ದಾಖಲೆಗಳನ್ನು ಪಡೆದುಕೊಂಡು ಪಾಕಿಸ್ತಾನದ ಐಎಸ್‌ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಗೆ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

''34 ವರ್ಷದ ತರಕಾರಿ ಸರಬರಾಜುದಾರ ಹಬೀಬ್ ಖಾನ್ ರಾಜಸ್ಥಾನದ ಬಿಕಾನೆರ್ ಜಿಲ್ಲೆಯವನಾಗಿದ್ದಾನೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೋಖ್ರಾನ್‌ನ ದೆಹಲಿ ಪೊಲೀಸ್ ಅಪರಾಧ ಶಾಖೆ ತಂಡವು ಮಂಗಳವಾರ ಬಂಧಿಸಲಾಗಿದೆ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೋ ಬೇಹುಗಾರಿಕೆ ಪ್ರಕರಣ: 18 ಮಂದಿ ವಿರುದ್ಧ ಚಾರ್ಜ್ ಶೀಟ್ಇಸ್ರೋ ಬೇಹುಗಾರಿಕೆ ಪ್ರಕರಣ: 18 ಮಂದಿ ವಿರುದ್ಧ ಚಾರ್ಜ್ ಶೀಟ್

''ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೋಖ್ರಾನ್ ಸೇನೆಯ ಮೂಲ ಶಿಬಿರಕ್ಕೆ ತರಕಾರಿಗಳನ್ನು ಪೂರೈಸುತ್ತಿದ್ದ,'' ಎಂದು ದೆಹಲಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Pokhran Army Base Camp Vegetable Supplier Arrested for Spying for Pakistan’s ISI

''ಗುಪ್ತಚರ ಘಟಕ ಹಂಚಿಕೊಂಡಿರುವ ಮಾಹಿತಿಯ ಆಧಾರದ ಮೇಲೆ, ದೆಹಲಿ ಪೊಲೀಸರ ಅಪರಾಧ ಶಾಖೆ ತಂಡ ಮಂಗಳವಾರ ಪೋಖ್ರಾನ್‌ನಿಂದ ಶಂಕಿತನನ್ನು ಬಂಧಿಸಿದೆ,'' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಬಂಧಿತ ಶಂಕಿತನು ಬೇಸ್ ಕ್ಯಾಂಪ್‌ನಲ್ಲಿದ್ದ ಸೇನಾ ಅಧಿಕಾರಿಯಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದಕೊಂಡಿದ್ದಾನೆ. ಬಳಿಕ ಆ ದಾಖಲೆಗಳನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ಒದಗಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪಾಕ್ ಸ್ಪೈಗಳ ಮಾಹಿತಿ ಕಲೆ ಹಾಕುವ ಸಂಚು ಬಹಿರಂಗಪಾಕ್ ಸ್ಪೈಗಳ ಮಾಹಿತಿ ಕಲೆ ಹಾಕುವ ಸಂಚು ಬಹಿರಂಗ

ಇನ್ನು ಓರ್ವ ಸೇನಾಧಿಕಾರಿ ಒದಗಿಸಿದ ಪ್ರತಿ ದಾಖಲೆಗೆ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂದು ಕೂಡಾ ಈ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯಾಂಶವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿರುವ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

(ಒನ್‌ಇಂಡಿಯಾ ಸುದ್ದಿ)

English summary
A vegetable supplier who used to supply vegetables at the Pokhran Army base camp, has been arrested for allegedly getting Spying for Pakistan’s ISI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X