ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು

|
Google Oneindia Kannada News

ನವದೆಹಲಿ, ಆಗಸ್ಟ್‌ 01: ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಜಾರಿ ಮಾಡಿದ್ದ ಪೊಕ್ಸೋಗೆ ಇನ್ನಷ್ಟು ಬಲ ತುಂಬಲಾಗಿದ್ದು, ಇಂದು ಪೋಕ್ಸೊ ಕಾಯ್ದೆಯ ತಿದ್ದುಪಡಿ ಲೋಕಸಭೆಯಲ್ಲಿ ಅಂಗೀಕಾರಕೊಂಡಿದೆ. ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳುವುದು ಬಾಕಿ ಇದೆ.

ತಿದ್ದುಪಡಿಯಾದ ಪೋಕ್ಸೊ ಕಾಯ್ದೆಯ ಪ್ರಕಾರ ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆಯನ್ನು ಅಂತಿಮ ಶಿಕ್ಷೆಯನ್ನಾಗಿಸಲಾಗಿದೆ.

ವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರವಿರೋಧದ ನಡುವೆಯೂ ಎರಡು ಪ್ರಮುಖ ಮಸೂದೆ ಅಂಗೀಕಾರ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಇಂದು ಲೋಕಸಭೆಯಲ್ಲಿ ತಿದ್ದುಪಡಿಯನ್ನು ಮಂಡಿಸಿದರು. ಈ ಕಾಯ್ದೆಯು ಯಾವುದೇ ಲಿಂಗದ ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ಗುರಿಯನ್ನು ಹೊಂದಿರುವುದಾಗಿ ಹೇಳಿದರು.

Pocso ammendment approved in Lok Sabha today

ಈ ಕಾಯ್ದೆಯು ರಾಜಕೀಯ ಉದ್ದೇಶಕ್ಕೆ, ಮತ ಬ್ಯಾಂಕ್‌ಗಾಗಿ ಮಾಡಲಾಗಿಲ್ಲ ಎಂದು ಸ್ಮೃತಿ ಇರಾನಿ ಅವರು ಹೇಳಿದರು. ಕಾಯ್ದೆ ತಿದ್ದುಪಡಿಯನ್ನು ಪಕ್ಷಾತೀತವಾಗಿ ಸಂಸದರು ಸ್ವಾಗತಿಸಿದರು.

ಮಕ್ಕಳ ಮೇಲಿನ ಯಾವ ರೀತಿಯ ಲೈಂಗಿಕ ಅಪರಾಧಕ್ಕೆ ಎಷ್ಟು ಶಿಕ್ಷೆ, ಮರಣದಂಡನೆ ಯಾವ ಅಪರಾಧಕ್ಕೆ ಎಂಬ ಚರ್ಚೆಗಳೂ ಸಹ ಸಂಸತ್‌ನಲ್ಲಿ ನಡೆಯಿತು. ಮಕ್ಕಳ ಲೈಂಗಿಕ ಚಿತ್ರಗಳನ್ನು ತಡೆಯುವ ಬಗ್ಗೆ ಸಂಸದರು ಮಾತನಾಡಿದರು.

ಲೋಕಸಭೆಯ ನಾರಿಶಕ್ತಿಗೆ ಹೆದರಿ ಕೊನೆಗೂ ಕ್ಷಮೆ ಕೇಳಿದ ಅಜಂ ಖಾನ್ಲೋಕಸಭೆಯ ನಾರಿಶಕ್ತಿಗೆ ಹೆದರಿ ಕೊನೆಗೂ ಕ್ಷಮೆ ಕೇಳಿದ ಅಜಂ ಖಾನ್

ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆಯುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡುವ, ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಬಗ್ಗೆಯೂ ಸ್ಮೃತಿ ಇರಾನಿ ಅವರು ಸದನದಲ್ಲಿ ಪ್ರಸ್ತಾಪಿಸಿದರು.

English summary
Pocso ammendment approved in Lok Sabha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X