ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆ

|
Google Oneindia Kannada News

ನವದೆಹಲಿ, ಜುಲೈ 30: ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಆತನ ಚಲನವಲನಗಳ ಮೇಲೆ ನಿಯಂತ್ರಣ ಇರಿಸುವಂತೆ ಭಾರತವು ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರವನ್ನು ಕೋರಿದೆ.

ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆದೊಯ್ಯುವ ಸಂಬಂಧ ಭಾರತದ ಹೈಕಮಿಷನರ್ ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರವನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.

ಪಿಎನ್‌ಬಿ ವಂಚನೆ ಆರೋಪಿ ಚೋಕ್ಸಿ ಆಂಟಿಗುವಾದಲ್ಲಿ ಸೆಟ್ಲ್!ಪಿಎನ್‌ಬಿ ವಂಚನೆ ಆರೋಪಿ ಚೋಕ್ಸಿ ಆಂಟಿಗುವಾದಲ್ಲಿ ಸೆಟ್ಲ್!

ಚೋಕ್ಸಿ ಆಂಟಿಗುವಾದಲ್ಲಿ ಇರುವ ಮಾಹಿತಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ದೊರೆತ ತಕ್ಷಣವೇ ಜಾರ್ಜ್‌ಟೌನ್‌ನಲ್ಲಿರುವ ಭಾರತದ ಹೈಕಮಿಷನ್ ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರಕ್ಕೆ ಮೌಖಿಕ ಮತ್ತು ಲಿಖಿತ ಸಂದೇಶ ರವಾನಿಸಿತ್ತು.

pnb scam india asked antigua to detain choksi

ದೇಶದೊಳಗೆ ಚೋಕ್ಸಿ ಇರುವುದನ್ನು ಖಚಿತಪಡಿಸುವಂತೆ, ಆತನನ್ನು ವಶಕ್ಕೆ ಪಡೆದುಕೊಂಡು ಭೂ, ವೈಮಾನಿಕ ಅಥವಾ ಸಾಗರ ಮಾರ್ಗಗಳಲ್ಲಿ ಆತ ಪ್ರಯಾಣಿಸದಂತೆ ತಡೆಯೊಡ್ಡಲು ಸಹಕರಿಸುವಂತೆ ಕೋರಿತ್ತು.

ಈ ವಿಚಾರದ ಕುರಿತು ಗಮನ ಹರಿಸುವಂತೆ ಹೈ ಕಮಿಷನ್, ಭಾರತದ ಸಂಬಂಧಿತ ಸಂಸ್ಥೆಗಳು ಹಾಗೂ ಆಂಟಿಗುವಾ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಮೆಹುಲ್ ಚೊಕ್ಸಿಗೆ ಸೇರಿದ 41 ಆಸ್ತಿ ಜಪ್ತಿ ಮಾಡಿದ 'ಇಡಿ'ಮೆಹುಲ್ ಚೊಕ್ಸಿಗೆ ಸೇರಿದ 41 ಆಸ್ತಿ ಜಪ್ತಿ ಮಾಡಿದ 'ಇಡಿ'

ಆಂಟಿಗುವಾ ಸರ್ಕಾರಕ್ಕೆ ಜುಲೈ 25ರಂದು ಪತ್ರ ಬರೆದಿದ್ದ ಸಿಬಿಐ, ಚೋಕ್ಸಿಯ ಇರುವಿಕೆಯ ಕುರಿತು ವಿವರ ಒದಗಿಸುವಂತೆ ಕೋರಿತ್ತು.

English summary
India has asked Antigua and Barbuda Government to detain PNB scam accused Mehul Choksi and prevent his movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X