ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ 2020ರಲ್ಲಿ ಮೋದಿ ಭಾಷಣ

|
Google Oneindia Kannada News

ನವದೆಹಲಿ, ಡಿ. 21: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್ಎಫ್) 2020ರಲ್ಲಿ 2020ರ ಡಿಸೆಂಬರ್ 22ರಂದು ಸಂಜೆ 4.30ಕ್ಕೆ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಐಐಎಸ್ಎಫ್: ಸಮಾಜದಲ್ಲಿ ಸಾಮಾಜಿಕ ಸ್ಫೂರ್ತಿ ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂ ವಿಜ್ಞಾನಗಳ ಸಚಿವಾಲಯಗಳು ವಿಜ್ಞಾನ ಭಾರತಿಯ ಸಹಯೋಗದೊಂದಿಗೆ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ರೂಪಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ತೇಜನಕ್ಕಾಗಿ 2015ರಲ್ಲಿ ಐಐಎಸ್ಎಫ್ ಆರಂಭಿಸಲಾಯಿತು.

unfogettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!unfogettable 2020: ಸಾವಿರ ತಲೆಮಾರು ತಿಂದರೂ ಕರಗದಷ್ಟು ಸಂಪತ್ತು ಪತ್ತೆ!

ಸಾರ್ವಜನಿಕರನ್ನು ವಿಜ್ಞಾನದೊಂದಿಗೆ ತೊಡಗಿಸಿಕೊಳ್ಳುವುದು, ವಿಜ್ಞಾನದ ಆನಂದವನ್ನು ಆಚರಿಸುವುದು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌.ಟಿ.ಇ.ಎಂ) ಜೀವನವನ್ನು ಸುಧಾರಿಸಲು ಹೇಗೆ ಪರಿಹಾರಗಳನ್ನು ಒದಗಿಸುತ್ತದೆ ಎಂಬುದನ್ನು ತೋರಿಸುವುದು ಇದರ ಉದ್ದೇಶವಾಗಿದೆ.

PM to deliver inaugural address at IISF 2020

ಐ.ಐ.ಎಸ್.ಎಫ್. 2020ರ ಗುರಿ ವೈಜ್ಞಾನಿಕ ಜ್ಞಾನ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಮತ್ತು ತಂಡದ ಕೆಲಸಗಳನ್ನು ಕೇಂದ್ರೀಕರಿಸಿ, ಯುವಜನರಿಗೆ 21ನೇ ಶತಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುವುದಾಗಿದೆ. ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ದೀರ್ಘಕಾಲೀನ ಉದ್ದೇಶವಾಗಿದೆ.

English summary
Prime Minister Narendra Modi will deliver the inaugural address at the India International Science Festival (IISF) 2020 on 22 December via video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X