ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳಕ್ಕೆ ಎಲ್ಲ ಸಹಾಯ ನಿಲ್ಲಿಸಿ: 'ಅಯೋಧ್ಯೆ' ಕುರಿತು ಪ್ರಧಾನಿ ಹೇಳಿಕೆಗೆ ಭಾರಿ ಖಂಡನೆ

|
Google Oneindia Kannada News

ದೆಹಲಿ, ಜುಲೈ 15: 'ನಿಜವಾದ ಅಯೋಧ್ಯೆ ಭಾರತದಲ್ಲಿಲ್ಲ, ನೇಪಾಳದಲ್ಲಿದೆ' ಎಂದು ನೇಪಾಳ ಪ್ರಧಾನಮಂತ್ರಿ ಕೆಪಿ ಶರ್ಮಾ ಓಲಿ ನೀಡಿದ್ದ ಹೇಳಿಕೆಗೆ ಭಾರತದಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಅಯೋಧ್ಯೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣ ನೇಪಾಳಕ್ಕೆ ಸಹಾಯ ಮಾಡುವುದನ್ನು ಭಾರತ ನಿಲ್ಲಿಸಬೇಕು, ಅದರ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಸಹ ಕಡಿತಗೊಳಿಸಬೇಕು ಎಂದು ಅಯೋಧ್ಯೆ ಅರ್ಚಕರು ಸೇರಿದಂತೆ ಹಲವು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜೊತೆಗೆ ಭಾರತದಿಂದ ನೇಪಾಳ ಮೂಲದ ಕಾರ್ಮಿಕರನ್ನು ಹೊರಹಾಕಬೇಕು ಎಂದು ಸಹ ಆಗ್ರಹಿಸಿದ್ದಾರೆ.

ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?

ನೇಪಾಳ ಪ್ರಧಾನಿಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ 'ಭಾವನೆಗಳಿಗೆ ಧಕ್ಕೆ ತಂದಿರುವ ಓಲಿಯವರು ರಾಮ ಭಕ್ತರಿಗೆ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದ್ದರು. ಮುಂದೆ ಓದಿ....

ನೇಪಾಳ ಜೊತೆಗಿನ ಸಂಬಂಧ ಕಡಿತಕ್ಕೆ ಆಗ್ರಹ

ನೇಪಾಳ ಜೊತೆಗಿನ ಸಂಬಂಧ ಕಡಿತಕ್ಕೆ ಆಗ್ರಹ

ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿ "ನೇಪಾಳದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ತಕ್ಷಣವೇ ಕಸಿದುಕೊಳ್ಳುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ" ಎಂದು ಹೇಳಿದರು. 'ಭಾರತವು ಎಲ್ಲಾ ನೇಪಾಳಿ ಕಾರ್ಮಿಕರನ್ನು ದೇಶದಿಂದ ಹೊರಗೆ ಹಾಕಬೇಕು ಮತ್ತು ಜನರು ನೇಪಾಳದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಬಹಿಷ್ಕರಿಸಬೇಕು' ಎಂದು ಒತ್ತಾಯಿಸಿದ್ದಾರೆ.

ನೇಪಾಳದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು

ನೇಪಾಳದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು

ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ ಸರಯು ಕುಂಜ್ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಯುಗಲ್ ಕಿಶೋರ್ ಶರಣ್ ಶಾಸ್ತ್ರಿ, "ಎಲ್ಲಾ ರಾಮ್ ಭಕ್ತರು ನೇಪಾಳದ ಕಡೆಗೆ ತೆರಳಿ ಸೇಡು ತೀರಿಸಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ" ಎಂದು ಕರೆ ನೀಡಿದ್ದಾರೆ. 'ನೇಪಾಳವು ಚೀನಾ ಕಲಿಸಿದ ಭಾಷೆಯಲ್ಲಿ ಮಾತನಾಡುತ್ತಿದೆ. ಹಿಂದೂಗಳ ನಂಬಿಕೆಗೆ ವಿರುದ್ಧವಾಗಿ ಭಗವಾನ್ ರಾಮನ ಬಗ್ಗೆ ಮಾತನಾಡುವ ಧೈರ್ಯಕ್ಕಾಗಿ ನೇಪಾಳಕ್ಕೆ ಭಾರತವು ತಕ್ಕ ಪಾಠ ಕಲಿಸಬೇಕು' ಎಂದು ಆಗ್ರಹಿಸಿದ್ದಾರೆ.

ಚೀನಾದ ಮಾತು ಕೇಳಿ ಅಧಿಕಾರ ಕಳೆದುಕೊಳ್ಳುವತ್ತ ನೇಪಾಳ ಪ್ರಧಾನಿಚೀನಾದ ಮಾತು ಕೇಳಿ ಅಧಿಕಾರ ಕಳೆದುಕೊಳ್ಳುವತ್ತ ನೇಪಾಳ ಪ್ರಧಾನಿ

ಹನುಮ ಕೋಪಗೊಂಡರೆ ನೇಪಾಳ ಅಷ್ಟೇ

ಹನುಮ ಕೋಪಗೊಂಡರೆ ನೇಪಾಳ ಅಷ್ಟೇ

ರಾಮ್ ಜನ್ಮಭೂಮಿ ಭೂ ವಿವಾದ ಪ್ರಕರಣದ ಮಾಜಿ ದಾವೆದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಪ್ರತಿಕ್ರಿಯಿಸಿ, 'ಅಯೋಧ್ಯೆಯಲ್ಲಿನ ಮುಸ್ಲಿಂ ಧರ್ಮಗುರುಗಳ ಭಾವನೆಗಳನ್ನು ಓಲಿ ತನ್ನ ಹಕ್ಕಿನಿಂದ ನೋಯಿಸಿದ್ದಾರೆ' ಎಂದು ವಿರೋಧಿಸಿದ್ದರು. 'ಭಗವಾನ್ ಹನುಮ ಈ ಹೇಳಿಕೆಯಿಂದ ಕೋಪಗೊಂಡರೆ, ಇಡೀ ನೇಪಾಳವನ್ನು ಅವನು ಕೆಡವಬಹುದು" ಎಂದು ಅನ್ಸಾರಿ ಹೇಳಿದ್ದಾರೆ.

ಇದರ ಹಿಂದೆ ರಾಜಕೀಯ ಉದ್ದೇಶವಿದೆ

ಇದರ ಹಿಂದೆ ರಾಜಕೀಯ ಉದ್ದೇಶವಿದೆ

"ಅವರು ಶಂಕರಾಚಾರ್ಯರು ಅಥವಾ ಮಹಾಮಂಡಲೇಶ್ವರರಲ್ಲ. ಭಗವಾನ್ ರಾಮ್ ಮತ್ತು ಸೀತಾ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ" ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆಕ್ರೋಶ ಹೊರಹಾಕಿದ್ದಾರೆ. 'ಇದು ಭಾರತೀಯ ಭೂಪ್ರದೇಶಗಳನ್ನು ಹೊಸ ನಕ್ಷೆಯನ್ನು ಸೇರಿಸಲು ಸಂಸತ್ತಿನಲ್ಲಿ ಅಂಗೀಕರಿಸುವ ಪ್ರಯತ್ನವಾಗಿದೆ' ಎಂದು ದೂರಿದ್ದಾರೆ.

English summary
Nepal prime minister KP Sharma Oli says real Ayodhya is in Nepal and Lord Ram is Nepali. so, Several Hindu seers said India must stop all financial aids to Nepal and snap all diplomatic ties with it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X