ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪ್ರಧಾನಿ ಮೋದಿ ಪರಿಶೀಲನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭಾನುವಾರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಕ್ಷತಾ ಹೆಲ್ಮೆಟ್ ಜೊತೆ ಬಿಳಿ ಕುರ್ತಾ-ಚುರಿದಾರ್ ಧರಿಸಿ, ಅವರು ಪ್ರಗತಿಯಲ್ಲಿರುವ ಕೆಲಸವನ್ನು ಪರಿಶೀಲಿಸುತ್ತಿರುವುದು ಕಂಡುಬಂದಿತು.

ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಅಂದಾಜು 971 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ನಿರ್ಮಾಣ ಸ್ಥಿತಿಯ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಸಾಕ್ಷ್ಯಗಳು ಸಿಕ್ಕಿವೆ. 2022ರ ವೇಳೆಗೆ ಹೊಸ ಸಂಸತ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಧಾನಿಗೆ ಹೊಸ ನಿವಾಸ ನಿರ್ಮಾಣ ಬೇಕೇ?ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಧಾನಿಗೆ ಹೊಸ ನಿವಾಸ ನಿರ್ಮಾಣ ಬೇಕೇ?

ಮೂರು ದಿನಗಳ ಯುಎಸ್ ಪ್ರವಾಸ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದರು ಮತ್ತು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಅಲ್ಲಿಂದ ವಾಪಸ್ಸಾದ ಅವರು, ಹಿಂದಿನ ದಿನ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾರನ್ನು ಭೇಟಿ ಮಾಡಿದರು. ನಂತರ ರಾತ್ರಿ 8.45ರ ಸುಮಾರಿಗೆ ಹೊಸ ಸಂಸತ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು ಎಂದು ತಿಳಿದು ಬಂದಿದೆ.

ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ

ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರತಿನಿತ್ಯ ನೂರಾರು ಮಂದಿ ಪ್ರಾಣ ಬಿಡುತ್ತಿರುವ ಸಂದಿಗ್ಘ ಸ್ಥಿತಿಯಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಗಡುವು ವಿಧಿಸಲಾಗುತ್ತು. 2022ರ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ವಿರೋಧ ಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರ ನಡುವೆ ಸಂಸತ್ ಭವನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸ ಸಂಸತ್ ವಿನ್ಯಾಸ ಹೇಗಿರಲಿದೆ?

ಹೊಸ ಸಂಸತ್ ವಿನ್ಯಾಸ ಹೇಗಿರಲಿದೆ?

ಹೊಸ ಸಂಸತ್ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ. ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಸಭಾಂಗಣವನ್ನು ಹೊಂದಿರಲಿದೆ. ಸಂಸತ್ತಿನ ಒಬ್ಬ ಸದಸ್ಯರಿಗೆ ಒಂದು ಕೋಣೆ, ಒಂದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಕ್ಯಾಂಟೀನ್ ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರಲಿದೆ. ಹೊಸ ಕಟ್ಟಡದಲ್ಲಿರುವ ಲೋಕಸಭಾ ಚೇಂಬರ್ 888 ಸದಸ್ಯರಿಗೆ ಆಸನ ಸಾಮರ್ಥ್ಯವನ್ನು ಹೊಂದಿದ್ದು, ರಾಜ್ಯಸಭೆಯು ಸದಸ್ಯರಿಗೆ 384 ಸ್ಥಾನಗಳನ್ನು ಹೊಂದಿರುತ್ತದೆ.

ಹೊಸ ಮತ್ತು ಹಳೆಯ ಪರಂಪರೆಯ ಸಮ್ಮಿಲನ

ಹೊಸ ಮತ್ತು ಹಳೆಯ ಪರಂಪರೆಯ ಸಮ್ಮಿಲನ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಕಟ್ಟಡವು 21ನೇ ಶತಮಾನದಲ್ಲಿ ದೇಶದ ಆಕಾಂಕ್ಷೆಗಳನ್ನು ಪೂರೈಸುತ್ತದೆ ಹಾಗೂ "ಹೊಸ ಮತ್ತು ಹಳೆಯ ಪರಂಪರೆಯ ಸಹಬಾಳ್ವೆ"ಯ ಸಂಕೇತಿವಾಗಿರುತ್ತದೆ ಎಂದು ಹೇಳಿದ್ದರು. "ಈಗಿರುವ ಕಟ್ಟಡವು ಪ್ರಸ್ತುತ ಹಳೆಯದಂತೆ ಗೋಚರಿಸುತ್ತದೆ. 21ನೇ ಶತಮಾನದ ಭಾರತಕ್ಕೆ ಹೊಸ ಸಂಸತ್ ಕಟ್ಟಡವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ಮೋದಿ ಹೇಳಿದ್ದರು.

ವಿಸ್ತಾ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ

ವಿಸ್ತಾ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ

ಮುಖ್ಯ ಕೇಂದ್ರ ವಿಸ್ಟಾ ಯೋಜನೆಯು ಹೊಸ ಸಂಸತ್ ಭವನ, ಹೊಸ ವಸತಿ ಸಮುಚ್ಚಯವನ್ನು ಕಛೇರಿಗಳು ಮತ್ತು ಪ್ರಧಾನ ಮಂತ್ರಿ ಮತ್ತು ಉಪರಾಷ್ಟ್ರಪತಿಗಳನ್ನು ನಿರ್ಮಿಸಲು ಯೋಜಿಸಿದೆ. ಇದು ಹೊಸ ಕಚೇರಿ ಕಟ್ಟಡಗಳು ಮತ್ತು ಕೇಂದ್ರ ಸಚಿವಾಲಯವನ್ನು ವಿವಿಧ ಸಚಿವಾಲಯಗಳ ಕಚೇರಿಗಳಿಗೆ ಸ್ಥಳಾವಕಾಶ ನೀಡುತ್ತದೆ.

ಮೊದಲ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್ ಗಡುವು

ಮೊದಲ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್ ಗಡುವು

ನೂತನ ಸಂಸತ್ ಕಚೇರಿ ನಿರ್ಮಾಣದ ಯೋಜನೆ ಅಡಿಯಲ್ಲಿ ಮೊದಲ ಹಂತವಾಗಿ 2020ರ ಡಿಸೆಂಬರ್ ವೇಳೆಗೆ ಪ್ರಧಾನಮಂತ್ರಿ ನಿವಾಸ, ಪ್ರಧಾನಿ ರಕ್ಷಣೆ ಮತ್ತು ಆಡಳಿತಾತ್ಮಕ ಅಧಿಕಾರಿಗಳ ಮುಖ್ಯ ಕಚೇರಿ ನಿರ್ಮಾಣ ಮಾಡುವುದಕ್ಕೆ ಗಡುವು ವಿಧಿಸಲಾಗಿದೆ. ಪ್ರಸ್ತುತ ಮೊದಲಿನ ರೇಸ್ ಕೋರ್ಸ್ ರಸ್ತೆಯ ಲೋಕಕಲ್ಯಾಣ ಮಾರ್ಗ್ 7ರಲ್ಲಿ ಪ್ರಧಾನಮಂತ್ರಿ ನಿವಾಸವಿದೆ. ಮುಂದಿನ ವರ್ಷ ಮೇ ತಿಂಗಳ ವೇಳೆಗೆ ಉಪ ರಾಷ್ಟ್ರಪತಿ ನಿವಾಸದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಹೊಸ ಸಂಸತ್ ಭವನ ನಿರ್ಮಾಣಕ್ಕಾಗಿ ಸರ್ಕಾರವು ಇಲ್ಲಿಯವರೆಗೆ ಕೇಂದ್ರ ಸರ್ಕಾರ 238 ಕೋಟಿ ರೂಪಾಯಿ ಮತ್ತು ಸೆಂಟರ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿಗೆ 63 ಕೋಟಿ ಖರ್ಚು ಮಾಡಿದೆ. ಸರ್ಕಾರದ ಪ್ರಕಾರ, 2021-22ರ ಆರ್ಥಿಕ ವರ್ಷಕ್ಕೆ ಈ ಎರಡು ಯೋಜನೆಗಳಿಗೆ ಮಾಡಬೇಕಾದ ಅಂದಾಜು ವೆಚ್ಚ 1,289 ಕೋಟಿ ರೂಪಾಯಿ ಆಗಿದೆ.

English summary
PM Narendra Modi visit and Inspect Work at Parliament Building Construction Site At Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X