election narendra modi new delhi West Bengal Assembly Election 2021 tamil nadu assembly election 2021 kerala assembly election 2021 assam assembly election 2021 ಚುನಾವಣೆ ನರೇಂದ್ರ ಮೋದಿ ನವದೆಹಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ತಮಿಳುನಾಡು ವಿಧಾನಸಭೆ ಚುನಾವಣೆ 2021 ಕೇರಳ ವಿಧಾನಸಭೆ ಚುನಾವಣೆ 2021 ಅಸ್ಸಾಂ ವಿಧಾನಸಭೆ ಚುನಾವಣೆ 2021 ಪುದುಚೇರಿ
475 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ: ನಾಲ್ಕು ಭಾಷೆಗಳಲ್ಲಿ ಮತದಾರರಿಗೆ ಮೋದಿ ಸಂದೇಶ
ನವದೆಹಲಿ, ಏಪ್ರಿಲ್ 6: ಮಂಗಳವಾರ ನಾಲ್ಕು ರಾಜ್ಯಗಳಲ್ಲಿ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ನಾಲ್ಕು ಭಾಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಮನವಿ ಮಾಡಿದ್ದಾರೆ. ದಾಖಲೆ ಮಟ್ಟದಲ್ಲಿ ಮತ ಚಲಾಯಿಸಬೇಕೆಂದು ಬಂಗಾಳಿ, ಮಲಯಾಳಂ, ತಮಿಳುನಾಡು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.
ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿಯ 475 ಮತಕ್ಷೇತ್ರಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದೆ.
Assembly Elections 2021 Live: 4 ರಾಜ್ಯ ಮತ್ತು ಪುದುಚೇರಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ. ಈ ಸ್ಥಳಗಳಲ್ಲಿನ ಜನರು ದಯವಿಟ್ಟು ಮತದಾನ ಮಾಡಿ. ದಾಖಲೆ ಮಟ್ಟದಲ್ಲಿ ಮತ ಚಲಾಯಿಸಿ. ಅದರಲ್ಲೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಟ್ವೀಟ್ ಮಾಡಿ ಮೋದಿ ಕರೆ ನೀಡಿದ್ದಾರೆ. ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಿ ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆಗೆ ಈ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕೊರೊನಾ ಮಾರ್ಗಸೂಚಿ ಅನ್ವಯ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದೆ.
Elections are taking place in Assam, Kerala, Puducherry, Tamil Nadu and West Bengal. I request the people in these places to vote in record numbers, particularly the young voters.
— Narendra Modi (@narendramodi) April 6, 2021
ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ ಮೂರು ಕಡೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.