ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾದಲ್' ಪಾದ ಮುಟ್ಟಿ ನಮಸ್ಕರಿಸಿದ ಮೋದಿಗೆ ಮೆಚ್ಚುಗೆಯ ಸುರಿ'ಮಳೆ'

|
Google Oneindia Kannada News

Recommended Video

Lok Sabha Elections 2019:ಸೋಶಿಯಲ್ ಮೀಡಿಯಾದಲ್ಲಿ ಮೋದಿ ಸಂಸ್ಕೃತಿ ಬಗ್ಗೇನೆ ಮಾತು

ನವದೆಹಲಿ, ಏಪ್ರಿಲ್ 26: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಅಕಾಲಿದಳದ ಮುಖಂಡ 93 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲುಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಶುಕ್ರವಾರ ಬೆಳಿಗ್ಗೆ ಸುಮಾರು 11:40 ಕ್ಕೆ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಡಿಎ ಮೈತ್ರಿಕೂಟದ ಹಲವರು ಉಪಸ್ಥಿತರಿದ್ದರು.

ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿರೋಮಣಿ ಅಕಾಲಿದಳದ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲುಮುಟ್ಟಿ ಮೋದಿ ನಮಸ್ಕರಿಸಿದರು. ಅಷ್ಟೇ ಅಲ್ಲ, ಉಪಸ್ಥಿತರಿದ್ದ 92 ವರ್ಷ ವಯಸ್ಸಿನ ಅನುಪಮಾ ಶುಕ್ಲಾ ಅವರ ಕಾಲಿಗೂ ಮೋದಿ ನಮಸ್ಕರಿಸಿದರು.

Array

ಇದು ಸನಾತನ ಧರ್ಮದ ಸಂಸ್ಕೃತಿ

ಭಾರತೀಯ ಸನಾತನ ಸಂಸ್ಕೃತಿಯ ಗುರುತು ಎಂದರೆ ಇದೇ. ಪ್ರಧಾನಿ ನರೇಂದ್ರ ಮೋದಿ ಅವರು 93 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲಿಗೆ ನಮಸ್ಕರಿಸಿದರು. ನಂತರ 92 ವರ್ಷ ವಯಸ್ಸಿನ ಅನುಪಮಾ ಶುಕ್ಲಾ ಅವರ ಕಾಲಿಗೂ ಮೋದಿ ನಮಸ್ಕರಿಸಿದರು. ನಿಮಗೆ ಸಲಾಂ ಸರ್ - ಮೇ.ಸುರೇಂದರ್ ಪೂನಿಯಾ

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಎಂಥ ವಿಧೇಯ ವ್ಯಕ್ತಿ!

ನರೇಂದ್ರ ಮೊದಿಯವರು ಎಂಥ ವಿಧೇಯ ವ್ಯಕ್ತಿ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಹಿರಿಯ ರಾಜಕಾರಣಿ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ ಅವರು ಅಭಿನಂದನೆಗೆ ಅರ್ಹರು- ದೀಪೇಂದ್ರ ಸಿನ್ಹಾ

ಇದು ನಮ್ಮ ಹಿಂದು ಸಂಸ್ಕೃತಿ

ಇದು ನಮ್ಮ ಹಿಂದು ಸಂಸ್ಕೃತಿ: ಪ್ರಧಾನಿ ಮೋದಿ ಅವರು 91 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲುಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಆದರೆ ಕಾಂಗ್ರೆಸ್ ನಾಯಕರು ಹಿರಿಯರಿಂದ ತಾವೇ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುತ್ತಾರೆ- ಆರ್ಯನ್ ಸಿಂಗ್

ಇದ್ದಕ್ಕಿದ್ದಂತೇ ಗೌರವ ಬಂತೆ?!

ಕಾಲು ಮುಟ್ಟಿ ನಮಸ್ಕರಿಸುವುದು ಎಂದರೆ ಏನೆಂದು ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ಎನ್ ಡಿಎ ಮೈತ್ರಿಕೂಟದ ಸಾವಿರ ಸಭೆಗಳಾದರೂ ಎಂದಿಗೂ ಮೋದಿ ಬಾದಲ್ ಅವರಿಗೆ ಹೀಗೆ ನಮಸ್ಕರಿಸಿರಲಿಲ್ಲ. ಆಗ ಅವರು ಹಿರಿಯರು ಎಂಬುದು ತಿಳಿದಿರಲಿಲ್ಲವೇ? ಆದರೆ ಇಂದೇಕೆ ಅವರು ಇದ್ದಕ್ಕಿದ್ದಂತೇ ಹಿರಿಯರು ಎನ್ನಿಸಿಬಿಟ್ಟರು- ಸಮರ್

English summary
PM Narendra Modi's gesture of touching SAD leader Prakash Singh Badal's feet before filing nomination in Varanasi UP, got praise in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X