ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಪ್ರತಿವರ್ಷ ರಾಖಿ ಕಟ್ಟುವ ಈ ಪಾಕ್ ಮಹಿಳೆ ಯಾರು?

|
Google Oneindia Kannada News

ನವದೆಹಲಿ, ಆಗಸ್ಟ್ 14: ಸಹೋದರತೆಯ ದ್ಯೋತಕವಾದ ರಕ್ಷಾಬಂಧನವನ್ನು ಇಂದು(ಆ.15) ಭಾರತದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲೆಂದು ಬಂದ ಪಾಕಿಸ್ತಾನಿ ಮಹಿಳೆ ಖಾಮರ್ ಮೋಹ್ಸಿನ್ ಶೇಖ್. ಕಳೆದ 21-23 ವರ್ಷಗಳಿಂದಲು ಅವರು ಮೋದಿ ಅವರಿಗೆ ಒಂದು ವರ್ಷವೂ ಬಿಡದೆ ರಾಖಿ ಕಟ್ಟುತ್ತ ಬಂದಿದ್ದಾರೆ!

ಖಾಮರ್ ಅವರನ್ನು ಮೋದಿ ಮೊದಲ ಬಾರಿಗೆ ಭೇಟಿಯಾಗಿದ್ದು, ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದಾಗ. ಖಾಮರ್ ಅವರ ಪತಿ ಚಿತ್ರಕಾರರಾಗಿದ್ದು, ಪತಿ ಮತ್ತು ಪತ್ನಿ ಇಬ್ಬರೂ ಮೋದಿ ಅವರಿಗೆ ಕ್ರಮೇಣ ಆಪ್ತರಾಗಿದ್ದರು.

ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ

ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದಿಂದ ದೆಹಲಿಗೆ ಬಂದು ವಾಸಿಸುತ್ತಿರುವ ಖಾಮರ್ ಕುಟುಂಬ, ಎಲ್ಲಿಯೇ ಇದ್ದಿರಲಿ, ರಕ್ಷಾಬಂಧನದ ದಿನ ಮೋದಿ ಅವರನ್ನು ಭೇಟಿಯಾಗದೆ ಇರುವುದಿಲ್ಲ. ಮೋದಿಯವರು ಪ್ರಧಾನಿಯಾದ ಮೇಲೂ ಈ ಸಂಪ್ರದಾಯ ಮುಂದುವರಿದಿದೆ.

 PM Narendra Modis Rakhi Sister Prom Pakistan Ties Rakhi to him

ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ

ಈ ಬಾರಿ ಸ್ವಾತಂತ್ರ್ಯ ದಿನದಂದೇ ರಕ್ಷಾಬಂಧನವನ್ನೂ ಆಚರಿಸಲಾಗುತ್ತಿದ್ದು, ಕೆಂಪುಕೋಟೆಯಲ್ಲಿ ತಮ್ಮ ಐತಿಹಾಸಿಕ ಭಾಷಣ ಮುಗಿಸಿದ ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿ, ಮೋದಿ ಅವರು ರಕ್ಷಾಬಂಧನ ಆಚರಿಸಿದ್ದಾರೆ.

English summary
On this special day of Raksha Bandhan, Qamar Mohsin Shaikh, originally from Pakistan, has been faithfully tying a 'rakhi' to Prime Minister Narendra Modi for over 21-23 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X