ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರ ಭೂಮಿ ಪೂಜೆ: ಅಯೋಧ್ಯೆಯಲ್ಲಿ ಮೋದಿಯ ವೇಳಾಪಟ್ಟಿ

|
Google Oneindia Kannada News

ಲಕ್ನೌ, ಆಗಸ್ಟ್ 04: ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದ್ದು, ಬುಧವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅಡಿಪಾಯ ಹಾಕಲಿದ್ದಾರೆ.

Recommended Video

ರಾಮಮಂದಿರ ಶಿಲಾ ನ್ಯಾಸಕ್ಕೆ ಕ್ಷಣಗಣನೇ | Oneindia Kannada

ಐತಿಹಾಸಿಕ ಸಂಭ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಅತಿಥಿಗಳಿಗೆ ಆಹ್ವಾನ ಸಹ ಕಳುಹಿಸಿದೆ. ಇನ್ನು ಆಗಸ್ಟ್ 5 ರಂದು ಪ್ರಧಾನಿ ಮೋದಿ ಸುಮಾರು ಮೂರು ಗಂಟೆಗಳ ಕಾಲ ಅಯೋಧ್ಯೆಯಲ್ಲಿರಲಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಬೆಳಗ್ಗೆ 9.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಕ್ನೌ ಕಡೆ ಪ್ರಯಾಣ ಆರಂಭಿಸಲಿದ್ದಾರೆ.

'ರಾಮ ಎಲ್ಲರಲ್ಲೂ ಇದ್ದಾನೆ': ಭೂಮಿ ಪೂಜೆ ಬಗ್ಗೆ ಪ್ರಿಯಾಂಕಾ ಗಾಂಧಿ ಮೊದಲ ಪ್ರತಿಕ್ರಿಯೆ'ರಾಮ ಎಲ್ಲರಲ್ಲೂ ಇದ್ದಾನೆ': ಭೂಮಿ ಪೂಜೆ ಬಗ್ಗೆ ಪ್ರಿಯಾಂಕಾ ಗಾಂಧಿ ಮೊದಲ ಪ್ರತಿಕ್ರಿಯೆ

ಅಯೋಧ್ಯೆಗೆ ಭೇಟಿ ನೀಡಿದ ತಕ್ಷಣ ಮೊದಲು ಭಗವಾನ್ ಹನುಮನ ದರ್ಶನಕ್ಕಾಗಿ ನೇರವಾಗಿ ಹನುಮಾನ್ ಗರ್ಹಿಗೆ ಮೋದಿ ತೆರಳಿದ್ದಾರೆ. ನಂತರ ಅಲ್ಲಿಂದ ರಾಮ ಮಂದಿರ ಭೂಮಿ ಪೂಜೆ ನೆರವೇರಿಸಲು ಆಗಮಿಸಲಿದ್ದಾರೆ.

PM Narendra Modi’s Detailed itinerary for Ram Mandir Bhumi Pujan

ಆಗಸ್ಟ್ 5 ರಂದು ಮೋದಿ ದಿನಚರಿ:

- ಬೆಳಗ್ಗೆ 9:30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಕ್ನೌಗೆ ಪ್ರಯಾಣ

- ಬೆಳಗ್ಗೆ 10:35ಕ್ಕೆ ಲಕ್ನೌ ಏರ್‌ಪೋರ್ಟ್‌ಗೆ ಮೋದಿ ಆಗಮನ

- ಬೆಳಗ್ಗೆ 10:40ಕ್ಕೆ ವಿಶೇಷ ಚಾಪರ್ ಮೂಲಕ ಅಯೋಧ್ಯೆಗೆ ಪ್ರಯಾಣ

- ಬೆಳಗ್ಗೆ 11:30ಕ್ಕೆ ಚಾಪರ್ ಸಾಕೇತ್ ಕಾಲೋನಿಗೆ ಆಗಮನ

- ಬೆಳಗ್ಗೆ 11:40ಕ್ಕೆ ಹನುಮಾನ್ ಗರ್ಹಿ ಹನುಮನ ದರ್ಶನ

- ಮಧ್ಯಾಹ್ನ 12:00ಕ್ಕೆ ರಾಮಜನ್ಮಭೂಮಿಗೆ ಆಗಮನ

- ಮಧ್ಯಾಹ್ನ 12:15ಕ್ಕೆ ರಾಮ್ ಲಲ್ಲಾ ಭೇಟಿ ಮತ್ತು ನಂತರ ದೇವಾಲಯ ಆವರಣದಲ್ಲಿ ಮರ ನೆಡುವ ಕಾರ್ಯಕ್ರಮದಲ್ಲಿ ಭಾಗಿ

- ಮಧ್ಯಾಹ್ನ 12:30ಕ್ಕೆ ಭೂಮಿ ಪೂಜೆ

- ಮಧ್ಯಾಹ್ನ 12:40ಕ್ಕೆ ಅಡಿಪಾಯ ಹಾಕುವುದು

- ಮಧ್ಯಾಹ್ನ 1:10ಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಜೊತೆ ಸಭೆ

- ಮಧ್ಯಾಹ್ನ 2.05ಕ್ಕೆ ಸಾಕೇತ್ ಕಾಲೋನಿಯಿಂದ ಮೋದಿ ನಿರ್ಗಮನ

- ಮಧ್ಯಾಹ್ನ 2:30ಕ್ಕೆ ಲಕ್ನೌನಿಂದ ಮೋದಿ ನಿರ್ಗಮನ

English summary
PM Modi to pray at Hanuman Garhi, attend bhoomi pujan at Ayodhya for nearly 2 hours: Detailed itinerary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X