ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಡೋದರಾ ಸಂಸದ ಸ್ಥಾನಕ್ಕೆ ಮೋದಿ ರಾಜೀನಾಮೆ

By Srinath
|
Google Oneindia Kannada News

ನವದೆಹಲಿ, ಮೇ 29: ಪ್ರಧಾನ ಮಂತ್ರಿಯಾಗುವ ಹಿನ್ನೆಲೆಯಲ್ಲಿ 12 ವರ್ಷಗಳ ತರುವಾಯ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದ ನರೇಂದ್ರ ಮೋದಿ ಅವರು ಇದೀಗ ಪ್ರಧಾನಿಯಾದ ಬಳಿಕ ವಡೋದರಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮತ್ತೂ ಒಂದು ಕ್ಷೇತ್ರದಿಂದ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ವಾರಣಾಸಿ ಸಂಸದೀಯ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಆದರೆ ತಾವು ಶಾಸಕರಾಗಿ ಆಯ್ಕೆಯಾಗಿರುವ ಮಣಿನಗರ ಕ್ಷೇತ್ರಕ್ಕೆ ಮೋದಿ ಇನ್ನೂ ರಾಜೀನಾಮೆ ನೀಡಿಲ್ಲ. ಸದ್ಯದಲ್ಲೇ ಅವರು ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ.

ತತ್ಫಲವಾಗಿ ಇದೀಗ ಗುಜರಾತಿನ ವಡೋದರಾ ಲೋಕಸಭಾ ಕ್ಷೇತ್ರಕ್ಕೂ ಮತ್ತು ಮಣಿನಗರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಬೇಕಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ಸ್ಪಷ್ಟಪಡಿಸಿದ್ದಂತೆ ಮೋದಿ ಇದೀಗ ವಾರಣಾಸಿ ಕ್ಷೇತ್ರವನ್ನು ತಮ್ಮ ಅಧೀನದಲ್ಲೇ ಉಳಿಸಿಕೊಂಡಿದ್ದಾರೆ.

Prime Minister Narendra Modi resigns from Vadodara lok sabha constituency
English summary
Narendra Modi who won from Vadodara and Varanasi lok sabha constituencies has resigned from Vadodara and retained prestigious Varanasi constituency, In the meanwhile he has to resign from Maninagar Assembly constituency also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X