ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ರೂಪಾಯಿ ಮುಖಬೆಲೆ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಅಕ್ಚೋಬರ್,12: ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯಾ ರಾಜೆ ಸಿಂಧಿಯಾ ಸ್ಮರಣಾರ್ಥವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 100 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.

ಗ್ವಾಲಿಯರ್ ನ ರಾಜಮಾತೆ ಎಂದು ಕರೆಸಿಕೊಂಡಿದ್ದ ವಿಜಯಾ ರಾಜೆ ಸಿಂಧಿಯಾ ಅವರ ಜನ್ಮ ದಿನಾಚರಣೆ ಸ್ಮರಣಾರ್ಥ 100 ರೂಪಾಯಿ ನಾಣ್ಯವನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದೆ. ಸೋಮವಾರ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ ರಾಜಮಾತೆಯವರ ಸೇವೆಯನ್ನು ಸ್ಮರಿಸಿಕೊಂಡರು.

ಹಣ ಉಳಿಯದಿರಲು ಕಾರಣ ಏನು? ಪರಿಹಾರ ಕಾಣೋದು ಹೇಗೆ?ಹಣ ಉಳಿಯದಿರಲು ಕಾರಣ ಏನು? ಪರಿಹಾರ ಕಾಣೋದು ಹೇಗೆ?

ರಾಜಮಾತೆಯವರು ಬಡವರ ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರೆ. ಜನಸೇವೆಗಾಗಿ ತಮ್ಮ ಇಡೀ ಬದುಕನ್ನೇ ಮೀಸಲು ಇರಿಸಿದ್ದರು. ಕಳೆದ ಒಂದು ಶತಮಾನದಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ ವಿಜಯಾ ರಾಜೆ ಸಿಂಧಿಯಾ ಅವರ ಮಾರ್ಗದರ್ಶನವೂ ಸಾಕಷ್ಟಿದೆ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.

PM Narendra Modi Releases 100 Rupees Commemorative Coin In Honour Of Vijaya Raje Scindia

ರಾಷ್ಟ್ರದ ಹಿತಕ್ಕಾಗಿ ದುಡಿದ ರಾಜಮಾತೆ:

ರಾಜಮಾತಾ ವಿಜಯಾ ರಾಜೆ ಸಿಂಧಿಯಾ ಅವರು ದೇಶದ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಭವಿಷ್ಯದ ಪೀಳಿಗೆಗೆ ಅನುಕೂಲಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದ ಅವರು, ತಮ್ಮ ಸಂತೋಷವನ್ನು ತ್ಯಜಿಸಿದ್ದರು. ಅವರ ಬದುಕಿನ ಶೈಲಿಯು ರಾಷ್ಟ್ರದ ಮೇಲಿನ ಪ್ರೀತಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಮನೋಧರ್ಮವನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದಕ್ಕೆ ನಿದರ್ಶವಾಗಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

English summary
PM Narendra Modi Releases 100 Rupees Commemorative Coin In Honour Of Vijaya Raje Scindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X