ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ಅಗಲಿಕೆಗೆ ನರೇಂದ್ರ ಮೋದಿ ಭಾವುಕ ಟ್ವೀಟ್

|
Google Oneindia Kannada News

Recommended Video

Sushma Swaraj : ಸುಷ್ಮಾ ಸ್ವರಾಜ್ ನಿಧಾನಕ್ಕೆ ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆಗಸ್ಟ್ 07: "ಭಾರತದ ರಾಜಕೀಯದ ವೈಭವಯುತ ಅಧ್ಯಾಯವೊಂದು ಅಂತ್ಯವಾಗಿದೆ" ಎಂದು ತಮ್ಮ ಆತ್ಮೀಯ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕ ಟ್ವೀಟ್ ಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

67 ವರ್ಷ ವಯಸ್ಸಿನ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಡೆಯನ್ನು ಶ್ಲಾಘಿಸಿ, ಅತೀವ ಸಂತಸದಿಂದ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್, ಈ ದಿನಕ್ಕಾಗಿ ನಾನು ಜೀವಮಾನವಿಡೀ ಕಾದಿದ್ದೇ ಎಂದಿದ್ದರು. ಬಹುಶಃ ಆ ದಿನ ಬರುತ್ತಿದ್ದಂತೆಯೇ ಅವರು ಇಹಲೋಕದ ಪ್ರಯಾಣ ಮುಗಿಸಿದ್ದರು!

ಎರಡು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಒಟ್ಟಾಗಿ ಕೆಲಸ ಮಾಡಿದ, ಒಂದೇ ಪಕ್ಷಕ್ಕಾಗಿ ದುಡಿದ ಸಹೋದ್ಯೋಗಿಯನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಮಾಡಿದ ಟ್ವೀಟ್ ಗಳು ಇಲ್ಲಿವೆ...

ವೈಭವದ ಅಧ್ಯಾಯ ಮುಗಿಸಿದೆ!

ವೈಭವದ ಅಧ್ಯಾಯ ಮುಗಿಸಿದೆ!

"ಭಾರತೀಯ ರಾಜಕೀಯದ ವೈಭವಯುತ ಅಧ್ಯಾಯವೊಂದು ಇಂದು ಅಂತ್ಯವಾಗಿದೆ. ತಮ್ಮಬದುಕನ್ನು ಸಾರ್ವಜನಿಕ ಬದುಕಿಗಾಗಿ ಮುಡಿಪಾಗಿಟ್ಟ, ಬಡವರ ಸೇವೆಗಾಗಿ ಸವೆಸಿದ ನಿಷ್ಟಾವಂತ ನಾಯಕಿ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಇಡಿ ದೇಶವೂ ಕಣ್ಣೀರಾಗಿದೆ. ಕೋಟಿ ಜನರಿಗೆ ಸ್ಫೂರ್ತಿಯಾಗುವಂಥ ವ್ಯಕ್ತಿತ್ವ ಅವರದು"- ನರೇಂದ್ರ ಮೋದಿ, ಪ್ರಧಾನಿ

ಅಪ್ರತಿಮ ಸಂಸದೀಯ ಪಟು

ಅಪ್ರತಿಮ ಸಂಸದೀಯ ಪಟು

ಸುಷ್ಮಾ ಸ್ವರಾಜ್ ಒಬ್ಬ ಪ್ರಖರ ವಾಗ್ಮಿ, ಅವರೊಬ್ಬ ಅಪ್ರತಿಮ ಸಂಸದೀಯ ಪಟು, ಪಕ್ಷಾತೀತವಾಗಿ ಅವರು ಎಲ್ಲರಿಗೂ ಹತ್ತಿರವಾಗಿದ್ದರು. ಸೈದ್ಧಾಂತಿಕತೆ ಮತ್ತು ಬಿಜೆಪಿಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದ ಅವರ ವ್ಯಕ್ತಿತ್ವವೇ ಅವರನ್ನು ಈ ಎತ್ತರಕ್ಕೆ ತಂದಿತ್ತು"- ನರೇಂದ್ರ ಮೋದಿ, ಪ್ರಧಾನಿ

LIVE: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ನಿಧನ: ಕ್ಷಣ-ಕ್ಷಣದ ಮಾಹಿತಿLIVE: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ನಿಧನ: ಕ್ಷಣ-ಕ್ಷಣದ ಮಾಹಿತಿ

ಯಾವ ಹುದ್ದೆ ಕೊಟ್ಟರೂ ಸೈ

ಯಾವ ಹುದ್ದೆ ಕೊಟ್ಟರೂ ಸೈ

"ಒಬ್ಬ ಅಸಾಮಾನ್ಯ ಆಡಳಿತಗಾರರಾಗಿದ್ದ ಸುಷ್ಮಾಜೀ, ಯಾವ ಹುದ್ದೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವವರಾಗಿದ್ದರು. ವಿದೇಶಾಂಗ ಸಚಿವೆಯಾಗಿ ಬೇರೆ ಬೇರೆ ದೇಶಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಲು ಅವರ ಕೊಡುಗೆ ಅಪಾರ. ಜಗತ್ತಿನ ಯಾವ ಭಾಗದಲ್ಲೇ ಭಾರತೀಯರು ಕಷ್ಟದಲ್ಲಿದ್ದರೂ ಅವರನ್ನು ಕಾಪಾಡಲು ಮುಂದಾಗುತ್ತಿದ್ದ ಅವರ ನೆರವಿನ ಮನೋಭಾವವನ್ನು ಇಡೀ ದೇಶವೂ ನೋಡಿದೆ"- ನರೇಂದ್ರ ಮೋದಿ, ಪ್ರಧಾನಿ

ದಣಿವರಿಯದ ಕೆಲಸ

ದಣಿವರಿಯದ ಕೆಲಸ

ವಿದೇಶಾಂಗ ಸಚಿವೆಯಾಗಿದ್ದಾಗ ಸುಷ್ಮಾ ಸ್ವರಾಜ್ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದುದನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಆರೋಗ್ಯ ಹದಗೆಟ್ಟಿದ್ದರೂ ಅವರು ತಮ್ಮ ಕೆಲಸಕ್ಕೆ ನ್ಯಾಯ ನೀಡುವಲ್ಲಿ ಹಿಂದೆ ಬೀಳಲಿಲ್ಲ. ಕೆಲಸದ ಬಗ್ಗೆ ಆಕೆಗಿದ್ದ ಹುಮ್ಮಸ್ಸು ಮತ್ತು ನಿಷ್ಠೆಗೆ ಹೋಲಿಕೆ ಇಲ್ಲ"- ನರೇಂದ್ರ ಮೋದಿ ಪ್ರಧಾನಿ

ಎಲ್ಲವನ್ನೂ ಭಾರತಕ್ಕಾಗಿಯೇ ಮಾಡಿದವರು

ಎಲ್ಲವನ್ನೂ ಭಾರತಕ್ಕಾಗಿಯೇ ಮಾಡಿದವರು

ಸುಷ್ಮಾ ಜೀ ಅವರ ಅಗಲಿಕೆ ನನಗೆ ವೈಯಕ್ತಿಕವಾಗಿಯೂ ಬಹುದೊಡ್ಡ ನಷ್ಟ. ಅವರು ಯಾವ ಕೆಲಸವನ್ನೇ ಮಾಡಿದರೂ ಅದನ್ನು ದೇಶಕ್ಕಾಗಿ ಮಾಡುತ್ತಿದ್ದರು. ನನ್ನ ಪ್ರಾರ್ಥನೆ ಅವರ ಕುಟುಂಬ, ಬಂಧಿ, ಅಭಿಮಾನಿಗಳೊಂದಿಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.

English summary
PM Narendra Modi pays Emotional tribute to Sushma Swaraj
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X