ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ 125ನೇ ಜನ್ಮದಿನ; ಪರಾಕ್ರಮ ಸ್ಮರಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜನವರಿ 23: 'ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಭೂತಪೂರ್ವ ಕೊಡುಗೆ ಕೊಟ್ಟ ನೇತಾಜಿ ನಮ್ಮ ಅತಿ ನೆಚ್ಚಿನ ರಾಷ್ಟ್ರೀಯ ನಾಯಕ. ಭಾರತ ಮಾತೆಯ ಪುತ್ರ ನೇತಾಜಿ ಅವರಿಗೆ ದೇಶ ಎಂದಿಗೂ ಕೃತಜ್ಞವಾಗಿರುತ್ತದೆ" ಎಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಿಗೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿ ಟ್ವೀಟ್ ಮಾಡಿದ್ದಾರೆ.

"ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ. ಅವರ ಜಯಂತಿಯನ್ನು ಸರ್ಕಾರ ಪರಾಕ್ರಮ ದಿವಸ್ ಎಂದು ಆಚರಿಸಲು ನಿರ್ಧರಿಸಿದೆ. ನೇತಾಜಿ ಅವರ ತ್ಯಾಗ ಹಾಗೂ ಪರಾಕ್ರಮವನ್ನು ದೇಶ ಎಂದಿಗೂ ನೆನಪಿಸಿಕೊಳ್ಳುತ್ತದೆ" ಎಂದು ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ: ಜನವರಿ 23ರಂದು ಪರಾಕ್ರಮ ದಿವಸವಾಗಿ ಆಚರಣೆನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ: ಜನವರಿ 23ರಂದು ಪರಾಕ್ರಮ ದಿವಸವಾಗಿ ಆಚರಣೆ

ಇಂದು ಹಿಂದುತ್ವವಾದಿ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಜನ್ಮ ಜಯಂತಿಯೂ ಆಗಿದ್ದು, ಠಾಕ್ರೆ ಅವರ ಆದರ್ಶಗಳ ಕುರಿತು ಸ್ಮರಿಸಿದರು. ಜನ ಕಲ್ಯಾಣಕ್ಕೆ ಅವರ ಶ್ರಮ ಎಂದಿಗೂ ಮರೆಯಲಾರದ್ದು ಎಂದು ಟ್ವೀಟ್ ಮಾಡಿದ್ದಾರೆ.

PM Narendra Modi Pay Tributes To Netaji Subhash Chandra Bose On His 125th Birth Anniversary

ಪ್ರಥಮ ಪರಾಕ್ರಮ ದಿವಸ್ ಕಾರ್ಯಕ್ರಮವನ್ನು ಕೋಲ್ಕತ್ತದ ನೇತಾಜಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಲಿದ್ದಾರೆ.

English summary
President Ramnath Kovind and prime minister Narendra modi on saturday pays tribute to netaji subhash chandra bose on his 125th birth anniversary,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X