ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ಮೆಜೆಂಟಾ ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ

By Mahesh
|
Google Oneindia Kannada News

ನೋಯ್ಡಾ, ಡಿಸೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ದೆಹಲಿ ಮೆಟ್ರೋ ರೈಲಿನ ಮೆಜೆಂತಾ ಲೈನ್‌‌ ಲೋಕಾರ್ಪಣೆ ಮಾಡಿದರು.

ನೋಯ್ಡಾದ ಬಟಾನಿಕಲ್‌ ಗಾರ್ಡನ್‌‌ನಿಂದ ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ತನಕ ಇರುವ ಮೆಜೆಂಟಾ ಲೈನ್‌‌ ಸಂಪರ್ಕವನ್ನು ಲೋಕಾರ್ಪಣೆ ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ವಿವಿಐಪಿ ಆಹ್ವಾನಿತರಾಗಿದ್ದು, ಮೋದಿ ಅವರ ಜತೆ ಉಪಸ್ಥಿತರಿದ್ದರು. ಅದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿಲ್ಲ.

ಇತ್ತೀಚೆಗೆ ಕೇಂದ್ರ ಸರ್ಕಾರ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ಕೇಜ್ರಿವಾಲ್‌‌ ಮೆಟ್ರೋ ಪ್ರಯಾಣ ದರ ಏರಿಕೆ ಜನ ವಿರೋಧಿ ನಡೆ ಎಂದು ಆಕ್ರೋಶ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೊಸ ಮಾರ್ಗವನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೆಜೆಂಟಾ ಲೈನ್ ಮಾರ್ಗದಲ್ಲಿ ಸಂಚರಿಸಿದರು.

ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಪಿಎಂ ಮೋದಿ

ದೆಹಲಿಮೆಟ್ರೋ ಹೊಸ ಮಾರ್ಗದಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂಚರಿಸಿದರು.

ಹೊಸ ಮಾರ್ಗದ ರೂಟ್ ಮ್ಯಾಪ್

ದೆಹಲಿ ಮೆಟ್ರೋ ಮೆಜೆಂಟಾ ಲೈನ್ -ನೋಯ್ಡಾದ ಬಟಾನಿಕಲ್ ಗಾರ್ಡನ್ ನಿಂದ ದೆಹಲಿಯ ಕಲ್ಕಾಜಿ ತನಕದ ಸಂಪರ್ಕದ ರೂಟ್ ಮ್ಯಾಪ್.

ಪ್ರಧಾನಿ ಮೋದಿ ಭಾಷಣ

ಮೆಟ್ರೋ ಮೆಜೆಂಟಾ ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ, ರೈಲಿನಲ್ಲಿ ಸಂಚರಿಸಿದ್ದು, ಭಾಷಣ ಮಾಡಿದ್ದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಷಣದ ವಿಡಿಯೋ

ಕೇಜ್ರಿವಾಲ್ ಕಡೆಗಣನೆ

ಈ ಹಿಂದೆ ಫರಿದಾಬಾದ್- ಬರ್ದಾಪುರ್ ಲೈನ್ ಹಾಗೂ ಕಲ್ಕಾಜಿ ರೈಲ್ವೆ ಲೈನ್ ಉದ್ಘಾಟನೆ ಸಂದರ್ಭದಲ್ಲೂ ಕೇಂದ್ರ ಸರ್ಕಾರದಿಂದ ಕೇಜ್ರಿವಾಲ್ ಅವರನ್ನು ಆಹ್ವಾನಿಸದೆ ಕಡೆಗಣಿಸಲಾಗಿತ್ತು.

English summary
Prime Minister Narendra Modi lauched the Magenta line, a 12.64-km stretch linking south Delhi's Kalkaji and Noida's Botanical Garden, in the national capital today(December 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X