• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಸಂಸದರ ವಿರುದ್ದ ಅಸಮಾಧಾನಗೊಂಡ ಪ್ರಧಾನಿ ಮೋದಿ

|

ನವದೆಹಲಿ, ಡಿಸೆಂಬರ್ 03: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ತಮ್ಮ ಪಕ್ಷದ ಸಂಸದರ ವಿರುದ್ದ ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಕಾರಣ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಗೈರು ಹಾಜರಿ ಹಾಕುತ್ತಿರುವ ಬಿಜೆಪಿ ಸಂಸದರು.

ಸಂಸತ್ತಿನ ಲೋಕಸಭೆ ಮತ್ತಿ ರಾಜ್ಯಸಭೆಯಲ್ಲಿ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ತಮ್ಮ ಪಕ್ಷದ ಸಂಸದರೇ ಅದರಲ್ಲಿ ಭಾಗವಹಿಸುತ್ತಿಲ್ಲ, ಹಾಗಾಗಿ ಪದೇ ಪದೇ ಗೈರು ಹಾಜರಿ ಹಾಕುವವರ ವಿರುದ್ದ ಕೆಂಡಾಮಂಡಲವಾಗಿದ್ದಾರೆ.

SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!

ಅಷ್ಟೇ ಅಲ್ಲದೇ ಈ ವಿಷಯವನ್ನು ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ, ಈ ಹಿಂದೆ ಸಂಸತ್ ಸದಸ್ಯರಿಗಾಗಿಯೇ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಯುವ ಸಂಸದರಿಗೆ ಮತ್ತು ಅನುಭವಿ ಸಂಸದರಿಗೆ ಸಂಸತ್ ನಲ್ಲಿ ಭಾಗವಹಿಸುವುದು ಮತ್ತು ಚರ್ಚೆ ಮಾಡುವುದರ ಕುರಿತು ತರಬೇತಿ ನೀಡಲಾಗಿತ್ತು.

ಬಿಜೆಪಿ ಸಂಸದೀಯ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ರಾಜನಾಥ್ ಸಿಂಗ್, ಪ್ರಧಾನಿಗಳು ಅಸಮಾಧಾನಗೊಂಡಿರುವ ವಿಷಯವನ್ನು ತಿಳಿಸಿದರು. ಸಂಸದರು ಗೈರು ಹಾಜರಾಗದೇ, ಕಡ್ಡಾಯವಾಗಿ ಅಧಿವೇಶನದಲ್ಲಿ ಬಾಗವಿಹಿಸಬೇಕೆಂದು ಹೇಳಿದ್ದರು. ಆದರೆ ಪ್ರಧಾನಿಗಳ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಎಚ್ಚರಿಸಿದರು.

ಗಾಂಧಿ ಕುಟುಂಬಕ್ಕೆ ಏಕಿಲ್ಲ SPG ಸೌಲಭ್ಯ: ರಾಜ್ಯಸಭೆಯಲ್ಲೂ ಇದೇ ಚರ್ಚೆ

ಗೃಹ ಸಚಿವ ಅಮಿತ್ ಶಾ ಅವರು ಮುಂದೆ ಏಕರೂಪ ನಾಗರೀಕ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ, ಇದು ಕೂಡಾ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದುಪಡಿಸಿದಷ್ಟೇ ಗಂಭೀರವಾದ ವಿಷಯವಾಗಿದೆ, ಇನ್ಮುಂದೆ ಕಲಾಪದಲ್ಲಿ ಮಹತ್ವದ ವಿಷಯಗಳು ಮಂಡನೆಯಾಗಲಿವೆ, ಆದ್ದರಿಂದ ಎಲ್ಲರ ಹಾಜರಿ ಅವಶ್ಯವೆಂದು ಹೇಳಿದರು.

English summary
Prime Minister Narendra Modi Has Upset Himself Against His Party MPs. The Reason For This Is The BJP MPs Who Are Obsent The Parliamentary Session This Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X