ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಅಂಜನಾಕ್ಷಿ ವಾಕ್ಚಾತುರ್ಯಕ್ಕೆ ಬಾಗಿ ನಮಿಸಿದ ಮೋದಿ

|
Google Oneindia Kannada News

Recommended Video

ಬೆಂಗಳೂರಿನ ಹುಡುಗಿಯ ಮಾತು..! ಇದು ಕರ್ನಾಟಕಕ್ಕೆ ಹೆಮ್ಮೆ..! | Oneindia kananda

ನವದೆಹಲಿ, ಮಾರ್ಚ್ 14: ಆಕೆ ಭಾರತದ ಬಗ್ಗೆ ಹೃದಯ ತುಂಬಿದ ಅಭಿಮಾನದಲ್ಲಿ ಅಸ್ಖಲಿತವಾಗಿ ಮಾತನಾಡುತ್ತಿದ್ದರೆ ಕಣ್ಣೆವೆ ಮುಚ್ಚದೆ ಬೆರಗಾಗಿ ನೋಡುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ! ಭಾಷಣ ಮುಗಿಸಿ ಆಕೆ ಎರಡನೇ ಸ್ಥಾನ ಪಡೆದು ಪ್ರಧಾನಿ ಕೈಯಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಖುದ್ದು ಮೋದಿಯವರೇ ಆಕೆಗೆ ತಲೆಬಾಗಿ ನಮಸ್ಕರಿಸಿದರು! ಆ ಹುಡುಗಿ ನಮ್ಮವಳು... ನಮ್ಮ ಬೆಂಗನೂರಿನವಳು!

ಹೌದು, ಫೆಬ್ರವರಿ 27 ರಂದು ದೆಹಲಿಯಲ್ಲಿ ನಡೆದ ಯುವಜನ ಮೇಳದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಅಂಜನಾಕ್ಷಿ, ನಗರದ ಶ್ರೀ ಶ್ರೀ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಮೂರನೇ ವರ್ಷದ ವಿದ್ಯಾರ್ಥಿನಿ.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಆಕೆ ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಭಾರತವನ್ನು ಬೆಸೆಯುವುದು ಹೇಗೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಪ್ರತಿ ಸಾಲಲ್ಲೂ ದೇಶಭಕ್ತಿಯನ್ನು ಸ್ಫುರಿಸುತ್ತಿದ್ದ ಆಕೆಯ ಮಾತಿಗೆ ಅಲ್ಲಿ ನೆರೆದಿದ್ದ ನೂರಾರು ಜನ ಚಪ್ಪಾಳೆಯ ಮೆಚ್ಚುಗೆ ಸೂಚಿಸಿದರು.

ಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾ

ಆಕೆ ಸಾಂಸ್ಕೃತಿ, ಆರ್ಥಿಕ ಮತ್ತು ಭೌಗೋಳಿಕವಾಗಿ ಭಾರತವನ್ನು ಬೆಸೆಯುವುದು ಹೇಗೆ, ವಾಸ್ತವ ಜಗತ್ತಿನಲ್ಲಿ ಅದು ಸಾಧ್ಯವೇ, ಸಾಧ್ಯವಿದ್ದರೆ ಅದು ಹೇಗೆ? ವಿಶ್ವ ಏಕೆ ಭಾರತವನ್ನು ಉನ್ನತ ಸ್ಥಾನದಲ್ಲಿ ನೋಡುತ್ತಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಆಡಿದ ಮಾತುಗಳು, ಆಕೆಯ ಹಾವಭಾವ, ಮಾತಿಗೂ ಮುನ್ನ ಆಕೆಮಾಡಿದ್ದ ಅಧ್ಯಯನ ಸಾಮಾಜಿಕ ಜಾಲತಾಣಗಳಲ್ಲಿ ಮನ್ನಣೆಯ ಮಹಾಪೂರವನ್ನೇ ಹರಿಸಿದೆ.

ಅಂಜನಾಕ್ಷಿ ಹೇಳಿದ್ದೇನು?

ಅಂಜನಾಕ್ಷಿ ಹೇಳಿದ್ದೇನು?

ಭಾರತ ವಿಶ್ವದ ಹೃದಯ ಭಾಗದಲ್ಲಿದೆ. ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ವಿಶ್ವಕ್ಕೆ ಭಾರತವೂ ಅಷ್ಟೇ ಮುಖ್ಯ. ನವಭಾರತ ನಿರ್ಮಾಣಕ್ಕಾಗಿ ನಾವು ಸಾಂಸ್ಕೃತಿಕ, ಆರ್ಥಿಕ ಮತ್ತು ಭೌಗೋಳಿಕವಾಗಿ ಭಾರತವನ್ನು ಬೆಸೆಯಬೇಕಿದೆ. ಭಾರತದ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ರೀತಿಯ ಭೌಗೋಳಿಕತೆಯನ್ನು, ಸಂಸ್ಕೃತಿಯನ್ನು ಹೊಂದಿವೆ. ಆದರೆ ಆ ಎಲ್ಲವನ್ನೂ ಒಂದೆಡೆಯೇ ಸೇರಿಸುವುದಕ್ಕೆ ಸಾಧ್ಯ ಎಂಬುದಕ್ಕೆ ಈ ಯುವಜನಮೇಳವೇ ಸಾಕ್ಷಿ. ನಮ್ಮಲ್ಲಿ ಎಲ್ಲರೂ ಬೇರೆ ಬೇರೆ ರಾಜ್ಯದಿಂದ ಬಂದಿದ್ದೇವೆ. ಆದರೆ ಒಂದೇ ಕಡೆ ಕುಳಿತಿದ್ದೇವೆ. ಆದಿ ಶಂಕರಾಚಾರ್ಯರು ಭಾರತವನ್ನು ಉತ್ತರದಿಂದ ದಕ್ಷಿಣದವರೆಗೂ ಬೆಸೆಯಲು ಓಡಾಡಿದಂತೆಯೇ ಈಗಲೂ ಭಾರತವನ್ನು ಬೆಸೆವ ಕಾರ್ಯ ಆಗಬೇಕಿದೆ- ಅಂಜನಾಕ್ಷಿ

ಸಂಸ್ಕೃತಿಯನ್ನು ಬಿತ್ತುವ ಕೆಲಸವಾಗಲಿ

ಸಂಸ್ಕೃತಿಯನ್ನು ಬಿತ್ತುವ ಕೆಲಸವಾಗಲಿ

ಇದು ಹೊಸ ಭಾರತ. ಹೊಸ ಭಾರತಕ್ಕೆ ಪೋಷಿಸುವುದೂ ಗೊತ್ತು, ಅಗತ್ಯ ಬಂದಾಗ ಪಾಠಕಲಿಸುವುದೂ ಗೊತ್ತು. ನಮ್ಮ ಜನಸಂಖ್ಯೆಯೇ ನಮಗೆ ಬಹುದೊಡ್ಡ ಆಸ್ತಿ. ಜನಸಂಖ್ಯೆಯನ್ನು ಮಾನವ ಸಂಪನ್ಮೂಲಗಳನ್ನಾಗಿ ಬದಲಿಸುವುದು ನಮ್ಮ ಕೆಲಸ. ಅದು ಸಂಸ್ಕೃತಿಯಿಂದ ಸಾಧ್ಯ. ಜಾತಿ, ಮತ, ಬಣ್ಣಗಳ ಭೇದವಿಲ್ಲದೆ ಎಲ್ಲರಲ್ಲೂ ಸಂಸ್ಕೃತಿಯನ್ನು ಬಿತ್ತುವ ಕೆಲಸವಾಗಬೇಕಿದೆ. ಅದನ್ನು ನಾವೆಲ್ಲರೂ ಒಂದಾಗಿ ಮಾಡೋಣ.

Array

ಎಂಥ ಭಾಷಣ!

ಎಂಥ ಅತ್ಯುತ್ತಮ ಭಾಷಣ! ನಮ್ಮ ಗೌರವಾನ್ವಿತ ಪ್ರಧಾನಿಗಳೇ ಆಕೆಯ ಮಾತಿಗೆ ತಲೆಬಾಗಿದರು. ಆಕೆಯ ಮುಂದೆ ಬಾಬಿ ನಮಸ್ಕರಿಸಿದ್ದು ನಿಜಕ್ಕೂ ಆಕೆಯ ಪ್ರತಿಭೆಗೆ ಸಂದ ಅತಿದೊಡ್ಡ ಗೌರವ- ಯೋಗಿ ಉಮೇಶ್

ಕಿರಿವಯಸ್ಸಿನಲ್ಲೇ ನ್ಯಾಯಾಧೀಶೆಯರಾಗಿ ದಾಖಲೆ ಬರೆದ ಸವಿತಾ, ಚೈತ್ರಾ ಕಿರಿವಯಸ್ಸಿನಲ್ಲೇ ನ್ಯಾಯಾಧೀಶೆಯರಾಗಿ ದಾಖಲೆ ಬರೆದ ಸವಿತಾ, ಚೈತ್ರಾ

ನಿಮ್ಮಂಥವರು ರಾಜಕೀಯಕ್ಕೆ ಬರಬೇಕು!

ಅಂಜನಾಕ್ಷಿಯವರೇ ನಿಮಗಿಂತ ಉತ್ತಮವಾಗಿ ಮಾತಬಾಡುವವರನ್ನು ನಾನು ನೋಡಿಲ್ಲ. ನಿಮಗೆ ನಮ್ಮ ನಮನ. ನಿಮ್ಮಂಥ ಯುವಕರು ಇಷ್ಟು ಸ್ಪಷ್ಟವಾಗಿ, ಸಮರ್ಪಣಾ ಭಾವದಿಂದ ಮಾತಾಡುವುದನ್ನು ಕಂಡರೆ ಹೆಮ್ಮೆಯಾಗುತ್ತದೆ. ನಿಜಕ್ಕೂ ನಿಮ್ಮಂಥ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಹರೀಶ್ ಸಿಪಿ ಟ್ವೀಟ್ ಮಾಡಿದ್ದಾರೆ.

ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್

ಇಂಥವರು ನಮ್ಮ ಹೆಮ್ಮೆ

ಅಂಜನಾಕ್ಷಿ ಥರದವರು ನಮ್ಮ ದೇಶದ ಹೆಮ್ಮೆ ಎಂದು ರಾಜೇಶ್ವರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ನವಭಾರತ ನಿಮ್ಮಿಂದ

ನಿಮ್ಮಂಥವರಿಂದಲೇ ನಾವಿಂದು ಹೊಸ ಭಾರತದ ಹಾದಿಯಲ್ಲಿ ಮುನ್ನುಗ್ಗುತ್ತಿದ್ದೇವೆ- ವರ್ಮಾ

ಭಾರತದ ಪ್ರಗತಿಗೆ ಇಂಥವರು ಬೇಕು

ಈ ಹುಡುಗಿ ಎಷ್ಟು ಜವಾಬ್ದಾರಿಯುತವಾಗಿ ಮತ್ತು ಪ್ರಬುದ್ಧವಾಗಿ ಮಾತನಾಡುತ್ತಾರೆ ಎಂಬುದನ್ನು ಕೇಳಿ. ಭಾರತದ ಅಭಿವೃದ್ಧಿಗೆ ಇಂಥ ಯುವಕರು ಬೇಕು- ಕೆ ಎನ್ ರಮೇಶ್

English summary
Ms Anjanakshi from Bengaluru won second prize in National youth festival which took place in Delhi. PM Modi impressed by her speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X