• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

|
Google Oneindia Kannada News
   Man vs Wild : ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

   ನವದೆಹಲಿ, ಜುಲೈ 29: ದಟ್ಟ ಕಾಡು, ಬೃಹತ್ ಬೆಟ್ಟ, ಆಳದ ಸಮುದ್ರ, ಹಿಮಾವೃತ ಪ್ರದೇಶ ಹೀಗೆ ನರಮನುಷ್ಯರ ಅಸ್ತಿತ್ವವೇ ಇಲ್ಲದ ಪ್ರದೇಶಗಳಲ್ಲಿ ಕೈಗೆ ಸಿಕ್ಕಿದ್ದನ್ನೇ ತಿಂದು ಬದುಕಬಹುದು ಎಂಬುದನ್ನು ತೋರಿಸುವ ಬಿಯರ್ ಗ್ರಿಲ್ಸ್ ರೋಮಾಂಚನಕಾರಿ ಸಾಹಸಗಳಿಗೆ ಹೆಸರಾದವರು. ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗುವ ಅವರ 'ಮ್ಯಾನ್ Vs ವೈಲ್ಡ್' ಸಾಹಸಮಯ ಬದುಕಿನ ಕಾರ್ಯಕ್ರಮ ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳಲಿದ್ದಾರೆ.

   ಜನಪ್ರಿಯ ಬ್ರಿಟಿಷ್ ಷೋ 'ಮ್ಯಾನ್ Vs ವೈಲ್ಡ್' ಸರಣಿಯಲ್ಲಿ ಮೋದಿ ಅವರು ಕಾಣಿಸಿಕೊಳ್ಳುವುದನ್ನು ಸ್ವತಃ ಬಿಯರ್ ಗ್ರಿಲ್ಸ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ಈ ಕಾರ್ಯಕ್ರಮವು ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಆಗಸ್ಟ್ 12ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

   ಖ್ಯಾತ ಬ್ರಿಟಿಶ್ ಶೋ 'Man vs Wild' ನಲ್ಲಿ ಪ್ರಧಾನಿ ಮೋದಿಖ್ಯಾತ ಬ್ರಿಟಿಶ್ ಶೋ 'Man vs Wild' ನಲ್ಲಿ ಪ್ರಧಾನಿ ಮೋದಿ

   'ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಭಾರತದ ವನ್ಯಲೋಕದೊಳಗೆ ಪ್ರವೇಶಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಪರಿಚಿತ ಮುಖವನ್ನು 180 ದೇಶಗಳ ಜನರು ನೋಡಲಿದ್ದಾರೆ' ಎಂದು ಬಿಯರ್ ಗ್ರಿಲ್ಸ್ ತಿಳಿಸಿದ್ದಾರೆ.

   ಈ ಕಾರ್ಯಕ್ರಮದ ಕುರಿತು ಡಿಸ್ಕವರಿ ಚಾನೆಲ್‌ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, 'ಹಲವು ವರ್ಷಗಳವರೆಗೆ ನಾನು ಪರಿಸರ, ಬೆಟ್ಟಗುಡ್ಡಗಳಲ್ಲಿ ಮತ್ತು ಕಾಡಿನ ನಡುವೆಯೇ ಬದುಕಿದ್ದೆ. ಈ ವರ್ಷಗಳು ನನ್ನ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಹೀಗಾಗಿ ರಾಜಕೀಯದಾಚೆಗಿನ ಬದುಕಿನ ಬಗ್ಗೆ ಗಮನ ಹರಿಸುವ ಈ ವಿಶೇಷ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಮತ್ತು ಅದರಲ್ಲಿಯೂ ಪ್ರಕೃತಿಯ ನಡುವೆ ಎಂದಾಗ ನಾನು ಅದರಲ್ಲಿ ಪಾಲ್ಗೊಳ್ಳಲು ಆಸಕ್ತಿ ಮತ್ತು ಒಲವು ಎರಡನ್ನೂ ಹೊಂದಿದ್ದೆ' ಎಂದು ಹೇಳಿದ್ದಾರೆ.

   ಪರಿಸರ ಸಂರಕ್ಷಣೆ ಮಹತ್ವ ಸಾರುವ ಅವಕಾಶ

   ಪರಿಸರ ಸಂರಕ್ಷಣೆ ಮಹತ್ವ ಸಾರುವ ಅವಕಾಶ

   'ನನ್ನ ಪಾಲಿಗೆ ಈ ಕಾರ್ಯಕ್ರಮವು ಭಾರತ ಭವ್ಯ ಪರಿಸರ ಪರಂಪರೆಯನ್ನು ಜಗತ್ತಿಗೆ ತೋರಿಸುವ ಮಹಾ ಅವಕಾಶವಾಗಿದೆ. ಜತೆಗೆ ಪ್ರಕೃತಿಯೊಂದಿಗೆ ಸೌಹಾರ್ದದೊಂದಿಗೆ ಬದುಕಲು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಸಾರಲು ನೆರವಾಗಲಿದೆ. ಅರಣ್ಯದಲ್ಲಿ ಮತ್ತೊಮ್ಮೆ ಕಳೆದಿದ್ದು, ಅದರಲ್ಲಿಯೂ ಈ ಬಾರಿ ಅಸಾಮಾನ್ಯ ಚೈತನ್ಯದ ವರವುಳ್ಳ ಮತ್ತು ಪ್ರಕೃತಿಯ ಅನುಭವವನ್ನು ಪರಿಶುದ್ಧವಾಗಿ ಅನ್ವೇಷಿಸುವ ಬಿಯರ್ ಗ್ರಿಲ್ಸ್ ಅವರೊಂದಿಗೆ ಇದ್ದದ್ದು ಅದ್ಭುತ ಅನುಭವ ಕೊಟ್ಟಿದೆ' ಎಂದು ಮೋದಿ ವಿವರಿಸಿದ್ದಾರೆ.

   'ವಿಶೇಷವಾದುದ್ದನ್ನು ಚಿತ್ರೀಕರಿಸಲು ಭಾರತಕ್ಕೆ ಬರುತ್ತಿದ್ದೇನೆ' ಎಂದು ಬಿಯರ್ ಗ್ರಿಲ್ಸ್ ಅವರು ಜನವರಿಯಲ್ಲಿ ಪ್ರಕಟಿಸಿದ್ದರು.

   ಪುಲ್ವಾಮಾದಲ್ಲಿ ಉಗ್ರರ ದಾಳಿ

   ಪುಲ್ವಾಮಾದಲ್ಲಿ ಉಗ್ರರ ದಾಳಿ

   ಫೆಬ್ರವರಿ 14ರ ವೇಳೆ ಉತ್ತರಾಖಂಡದ ಧಿಕಲಾದಲ್ಲಿರುವ ಜಿಮ್ ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಬಿಯರ್ ಗ್ರಿಲ್ಸ್ ಅವರು ಕಾಣಿಸಿಕೊಂಡಿರುವುದಾಗಿ ಅವರ ಸಾಮಾಜಿಕ ಜಾಲತಾಣಗಳ ಮಾಧ್ಯಮ ಚಟುವಟಿಕೆಗಳು ತೋರಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅದೇ ದಿನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿ ನಡೆದಿತ್ತು. ಫೆ. 14ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದ ಅರಣ್ಯ ಇಲಾಖೆಯು ಧಿಕಲಾ ಅರಣ್ಯದ ಎಲ್ಲ ಪ್ರವಾಸಿ ಬುಕಿಂಗ್‌ಗಳನ್ನು ರದ್ದುಗೊಳಿಸಿತ್ತು.

   ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ

   ಪ್ರಚಾರದ ಸಾಕ್ಷ್ಯಚಿತ್ರ: ವಿಪಕ್ಷಗಳ ಆರೋಪ

   ಪ್ರಚಾರದ ಸಾಕ್ಷ್ಯಚಿತ್ರ: ವಿಪಕ್ಷಗಳ ಆರೋಪ

   ಪುಲ್ವಾಮಾದಲ್ಲಿ ಮಧ್ಯಾಹ್ನದ ವೇಳೆಗೆ ಸೈನಿಕರು ಹೋಗುತ್ತಿದ್ದ ವಾಹನದ ಮೇಲೆ ದಾಳಿ ನಡೆದು ಸುಮಾರು 40 ಮಂದಿ ಮೃತಪಟ್ಟಿದ್ದರು. ಆದರೆ, ಈ ಬಗ್ಗೆ ಸಂಜೆಯಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ದಾಳಿ ನಡೆದು ಯೋಧರು ಸತ್ತಿದ್ದರೂ ಮೋದಿ ಅವರು ತಮ್ಮ ಪ್ರಚಾರದ ಕುರಿತ ಡಾಕ್ಯುಮೆಂಟರಿಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

   ಮೋದಿ ಎಲ್ಲಿದ್ದಾರೆ ಎಂಬ ಚರ್ಚೆ

   ಮೋದಿ ಎಲ್ಲಿದ್ದಾರೆ ಎಂಬ ಚರ್ಚೆ

   ಮೋದಿ ಅವರು ಎಲ್ಲಿದ್ದಾರೆ ಎಂಬ ಕುರಿತು ಪ್ರಶ್ನೆಗಳು ಉದ್ಭವವಾಗಿದ್ದವು. ಅವರು ಸಾರ್ವಜನಿಕವಾಗಿ ಖಂಡನೆ ಕೂಡ ವ್ಯಕ್ತಮಾಡದೆ ಇರುವುದು ಕೂಡ ಚರ್ಚೆಗೀಡುಮಾಡಿತ್ತು. ಅವರು ಉತ್ತರಾಖಂಡದ ಜಿಮ್ ಕಾರ್ಬೆಟ್ ಉದ್ಯಾನದಲ್ಲಿ ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದರು ಎನ್ನುವುದು ಬಳಿಕ ಬಹಿರಂಗವಾಗಿತ್ತು.

   ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, 'ಮೋದಿ ಅವರ ಮೇಲಿನ ವಾಗ್ದಾಳಿಗಳು ನಾಚಿಕೆಗೇಡಿನದ್ದು. ಪುಲ್ವಾಮಾ ದಾಳಿಯ ದಿನದಂದು ಅವರು ಹುಲಿ ಸಂರಕ್ಷಣೆಯ ಕುರಿತಾದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರಾಖಂಡದಲ್ಲಿದ್ದರು' ಎಂದು ಹೇಳಿದ್ದರು.

   ಪುಲ್ವಾಮಾ ದಾಳಿ ನಡೆದಾಗ ಮೋದಿ ಶೂಟಿಂಗ್ : ಮತ್ತೆ ಕಾಲೆಳೆದ ರಾಹುಲ್ಪುಲ್ವಾಮಾ ದಾಳಿ ನಡೆದಾಗ ಮೋದಿ ಶೂಟಿಂಗ್ : ಮತ್ತೆ ಕಾಲೆಳೆದ ರಾಹುಲ್

   ಒಬಾಮಾ ಕೂಡ ಭಾಗವಹಿಸಿದ್ದರು

   ಒಬಾಮಾ ಕೂಡ ಭಾಗವಹಿಸಿದ್ದರು

   ಈ ಕಾರ್ಯಕ್ರಮದಲ್ಲಿ ಮೋದಿ ಅವರು ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಬಿಯರ್ ಗ್ರಿಲ್ಸ್ ಅವರ ಜನಪ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ರಾಜಕೀಯ ವ್ಯಕ್ತಿ ಅಲ್ಲ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಸೇರಿದಂತೆ ಅನೇಕ ರಾಜಕಾರಣಿಗಳು ಕೂಡ ಈ ಶೋದಲ್ಲಿ ಭಾಗವಹಿಸಿದ್ದರು.

   English summary
   Prime Minister Narendra Modi to feature in Discovery Channel's Man Vs Wild show of Bear Grylls on August 12.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X