ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಿಷಸ್‌ನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದ ಮೋದಿ

|
Google Oneindia Kannada News

ನವದೆಹಲಿ, ಜುಲೈ 30: ಮಾರಿಷಸ್‌ನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್‌ನ ಪ್ರಧಾನಿ ಪ್ರವೀಂದ್ ಜುಗ್ನಾಥ್ ಜಂಟಿಯಾಗಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ಉದ್ಘಾಟಿಸಿದರು.

ಮೊದಲನೆಯದಾಗಿ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದ ಪರಿಣಾಮಕಾರಿ ನಿರ್ವಹಣೆಗಾಗಿ ಸರ್ಕಾರ ಮತ್ತು ಮಾರಿಷಸ್‌ನ ಜನರನ್ನು ನಾನು ಅಭಿನಂದಿಸುತ್ತೇನೆ. ಸಮಯಕ್ಕೆ ಸರಿಯಾಗಿ ಔಷಧಿಗಳ ಪೂರೈಕೆ ಮತ್ತು ಅನುಭವಗಳ ಹಂಚಿಕೆಯ ಮೂಲಕ ಭಾರತ ಈ ಪ್ರಯತ್ನವನ್ನು ಬೆಂಬಲಿಸಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ ಎಂದು ಕಟ್ಟಡ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಲವು ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಸಭೆ: ಎಲ್ಲಾ ರೀತಿಯ ನೆರವು ನೀಡುವ ಭರವಸೆಹಲವು ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಸಭೆ: ಎಲ್ಲಾ ರೀತಿಯ ನೆರವು ನೀಡುವ ಭರವಸೆ

ಭಾರತ ಮತ್ತು ಮಾರಿಷಸ್ ಎರಡೂ ಕೂ ತಮ್ಮದೇ ಆದ ಸ್ವತಂತ್ರ ನ್ಯಾಯಾಂಗಗಳನ್ನು ಹೊಂದಿದ್ದು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗಳ ಪ್ರಮುಖ ಆಧಾರ ಸ್ತಂಭಗಳಾಗಿ ಗೌರವಿಸುತ್ತವೆ. ಆಧುನಿಕ ವಿನ್ಯಾಸ ಮತ್ತು ನಿರ್ಮಾಣದೊಂದಿಗೆ ಈ ಪ್ರಭಾವಶಾಲಿ ಹೊಸ ಕಟ್ಟಡವು ಈ ಗೌರವದ ಸಂಕೇತವಾಗಿದೆ ಎಂದಿದ್ದಾರೆ.

PM Narendra Modi And Mauritius PM Jointly Inagurate The New Supreme Court Building In Mauritius

ಮಾರಿಷಸ್‌ನಲ್ಲಿಯೇ ನಾನು ಮೊದಲು ಮಾತನಾಡಿದ್ದು 'ಸಾಗರ - ಭದ್ರತೆ ಮತ್ತು ಪ್ರದೇಶದ ಎಲ್ಲರಿಗೂ ಬೆಳವಣಿಗೆ' ಎಂಬ ಭಾರತದ ದೂರದೃಷ್ಟಿಯ ಬಗ್ಗೆ, ಮಾರಿಷಸ್ ಹಿಂದೂ ಮಹಾಸಾಗರ ಪ್ರದೇಶಕ್ಕೆ ಭಾರತದ ವಿಧಾನದ ಹೃದಯಭಾಗವಾಗಿದೆ ಎಂಬುದು ಇದಕ್ಕೆ ಕಾರಣ ಎಂದು ಮೋದಿ ಹೊಗಳಿದ್ದಾರೆ.

ಭಾರತಕ್ಕೆ ಸಂಬಂಧಿಸಿದಂತೆ, ಅಭಿವೃದ್ಧಿ ಸಹಕಾರದಲ್ಲಿ ಅತ್ಯಂತ ಮೂಲಭೂತ ತತ್ವವೆಂದರೆ ನಮ್ಮ ಪಾಲುದಾರರನ್ನು ಗೌರವಿಸುವುದು. ಅಭಿವೃದ್ಧಿ ಪಾಠಗಳ ಈ ಹಂಚಿಕೆ ನಮ್ಮ ಏಕೈಕ ಪ್ರೇರಣೆ. ಅದಕ್ಕಾಗಿಯೇ ನಮ್ಮ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತುಗಳೊಂದಿಗೆ ಬರುವುದಿಲ್ಲ. ಅಫ್ಘಾನಿಸ್ತಾನದ ಸಂಸತ್ತಿನ ಕಟ್ಟಡದಲ್ಲಿ ಸಹಾಯ ಮಾಡಲು ಭಾರತವನ್ನು ಗೌರವಿಸಿದರೆ, ನೈಜರ್‌ನಲ್ಲಿ ಮಹಾತ್ಮ ಗಾಂಧಿ ಕನ್ವೆನ್ಷನ್ ಸೆಂಟರ್ ತಯಾರಿಕೆಯಲ್ಲಿ ಸಹಕರಿಸಿದ ಹೆಮ್ಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

https://kannada.oneindia.com/news/business/pm-narendra-modi-meets-heads-of-banks-nbfcs-198198.html

English summary
Prime Minister Narendra Modi and Mauritian PM Pravind Jugnauth jointly inaugurate the new Supreme Court building of Mauritius through video conferencing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X