ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಇಂದಿನಿಂದ 3 ದಿನಗಳ ಕಾಲ ವಿದೇಶಿ ಪ್ರವಾಸ

|
Google Oneindia Kannada News

ನವದೆಹಲಿ, ಮೇ 2 : ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ಮೂರು ದಿನಗಳ ಕಾಲ 3 ವಿದೇಶಗಳ(ಜರ್ಮನಿ, ಫ್ರಾನ್ಸ್, ಡೆನ್ಮಾರ್ಕ್) ಪ್ರವಾಸ ಹೊರಟಿದ್ದಾರೆ. ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ ಅವರ ಆಮಂತ್ರಣದ ಮೇರೆಗೆ ಮೋದಿ ಮೇ 2 ರಂದು ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ 6 ನೇ ಭಾರತ-ಜರ್ಮನಿ ಪಾಲುದಾರಿಕೆ ಸಹಕಾರ ಸಮಾಲೋಚನೆಯಲ್ಲಿ ಪ್ರಧಾನಿ ಮೋದಿ ಸಹ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರವಾಸಕ್ಕೂ ಮುನ್ನ ಮಾತನಾಡಿರುವ ಪ್ರಧಾನಿ, "ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದೇನೆ. ಶಾಂತಿ ಸಮೃದ್ದಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಪಾಲುದಾರರಾಗಿರುವ ಯುರೋಪಿನ ನಾಯಕರೊಂದೊಗಿನ ಸಹಕಾರ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆಸಲಿದ್ದೇನೆ," ಎಂದು ತಿಳಿಸಿದ್ದಾರೆ.

ಅಲ್ಲದೆ ತಮ್ಮ ಫ್ರಾನ್ಸ್‌ ಭೇಟಿಯು ಸಹ ಭಾರತ-ಫ್ರಾನ್ಸ್‌ ವ್ಯೂಹಾತ್ಮಕ ಪಾಲುದಾರಿಕೆಯ ಮುಂದಿನ ಹಂತದ ಧ್ವನಿಯನ್ನು ಹೊಂದಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಮೇ 3 ಮತ್ತು 4 ರಂದು ಡೆನ್ಮಾರ್ಕ್ ಕೋಪನ್‌ಹೆಗನ್‌ ಭೇಟಿ ನೀಡಲಿದ್ದು, ಡ್ಯಾನಿಶ್‌ ಪ್ರಧಾನಿ ಮಾಟ್‌ ಫ್ರೆಡ್ರಿಕ್‌ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

PM Narendra modi 3 days Europe visit

ಬಳಿಕ ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎಮ್ಯಾನುಯೆಲ್‌ ಮಾಕ್ರನ್‌ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ನಂತರ ಎರಡು ದೇಶಗಳ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಮೌಲ್ಯಮಾಪನಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಇನ್ನು ಪ್ರಧಾನಿ ಮೋದಿ ಪ್ರವಾಸದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಪ್ರತಿಕ್ರಿಯಿಸಿದ್ದು, 'ಹಿಂಸಾಚಾರನ್ನು ನಿಲ್ಲಿಸುವುದು ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆಗೆ ಮರುಳುವುದು ರಷ್ಯಾದ ಕ್ರಮಗಳನ್ನು ಬಲವಾಗಿ ಖಂಡಿಸಲು ಭಾರತ ಮುಂದಾಗಿಲ್ಲ. ಆದರೂ ಉಕ್ರೇನ್‌ನೊಂದಿಗಿನ ಸಂಬಂಧಗಳು ಹದಗೆಟ್ಟಿದ್ದರೂ ಸಹ ಭಾರತದ ಸ್ಥಾನದ ಬಗ್ಗೆ ಆಳವಾದ ಮೆಚ್ಚುಗೆ ಇದೆ,'' ಎಂದು ಕ್ವಾತ್ರಾ ತಿಳಿಸಿದ್ದಾರೆ.

PM Narendra modi 3 days Europe visit

ಪ್ರಧಾನಿ ಮೋದಿಯವರ ಈ ಪ್ರವಾಸದ ಪ್ರಮುಖ ಉದ್ದೇಶ ಇಂಧನ ಭದ್ರತೆಯಾಗಿದೆ. ಉಕ್ರೇನ್‌ ರಷ್ಯಾ ಯುದ್ಧದಿಂದಾಗಿ ಜಗತ್ತಿನಲ್ಲಿ ಶಕ್ತಿ ಸಂಪನ್ಮೂಲಗಳ ಕೊರತೆ ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು ಪ್ರಧಾನಿ ಮೋದಿ ವಿದೇಶಿ ನಾಯಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಒದರ ಜೊತೆಗೆ ವಿದೇಶಗಳೊಂದಿಗಿನ ದ್ವಿಪಕ್ಷಿಯ ಸಂಬಂಧ ಹಾಗೂ ಕೊರೊನಾ ನಂತರದ ಆರ್ಥಿಕತೆ, ಜಾಗತಿಕ ಭದ್ರತೆ ಮುಂತಾದ ಮಹತ್ವಪೂರ್ಣ ವಿಚಾರಗಳ ಕುರಿತು ಚರ್ಚಿಸುವ ಉದ್ದೇಶ ಹೊಂದಿದ್ದಾರೆ.

English summary
Prime minister narendra modi in the wee hours of monday departed for germany from new delhi as part of his three day visit to europe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X