ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಜಗತ್ತಿನ ದುಬಾರಿ 'ಚೌಕಿದಾರ': ಕಪಿಲ್ ಸಿಬಲ್

|
Google Oneindia Kannada News

ನವದೆಹಲಿ ಫೆಬ್ರವರಿ 24: "ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ದುಬಾರಿ ಚೌಕಿದಾರ" ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರೇ ಹೇಳಿದ್ದಾರೆ ತಾವೊಬ್ಬ ಚೌಕಿದಾರ(ವಾಚ್ ಮನ್) ಎಂದು. ಆದರೆ ಅವರಿಗೆ ಅರಿವಿಲ್ಲದೆ ಈ ಬ್ಯಾಂಕ್ ಅವ್ಯವಹಾರಗಳು ನಡೆಯುತ್ತಿರುವುದೇಕೆ? ನೀರವ್ ಮೋದಿಯಂಥವರು ಕೊಳ್ಳೆಹೊಡೆದು ಓಡಿಹೋಗುವಾಗ ಚೌಕಿದಾರ ಏನು ಮಾಡುತ್ತಿದ್ದರು?' ಎಂದು ಲೇವಡಿ ಮಾಡಿದ್ದಾರೆ.

'ಲೂಟಿ ಮಾಡಿ ಪರಾರಿಯಾಗಿ' ಇದು ಮೋದಿ ಸರ್ಕಾರದ ನೀತಿ: ಕಾಂಗ್ರೆಸ್ ಕಿಡಿ'ಲೂಟಿ ಮಾಡಿ ಪರಾರಿಯಾಗಿ' ಇದು ಮೋದಿ ಸರ್ಕಾರದ ನೀತಿ: ಕಾಂಗ್ರೆಸ್ ಕಿಡಿ

ಓರಿಯಂಟಲ್ ಬ್ಯಾಂಕ್ ನಲ್ಲೂ ಇಂಥದೇ ಅವ್ಯವಹಾರ ನಡೆದಿದೆ ಎಂಬುದು ಈಗ ಬೆಳಕಿಗೆ ಬರುತ್ತಿದೆ. ಅವ್ಯವಹಾರದ ಕುರಿತು 2017 ಆಗಸ್ಟ್ ನಲ್ಲೇ ದೂರು ನೀದಿದ್ದರೂ, ನಿನ್ನೆ(ಫೆ.24)ಯಷ್ಟೇ ಎಫ್ ಐಆರ್ ದಾಖಲಿಸಿಕೊಂದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

PM Modi world's costliest 'chowkidar': Congress

ಮೌನ ಮುರಿದ ಪ್ರಧಾನಿ ನೀರವ್ ಮೋದಿ ಹಗರಣದ ಬಗ್ಗೆ ಹೇಳಿದ್ದೇನು?ಮೌನ ಮುರಿದ ಪ್ರಧಾನಿ ನೀರವ್ ಮೋದಿ ಹಗರಣದ ಬಗ್ಗೆ ಹೇಳಿದ್ದೇನು?

ವಜ್ರವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಮೂಲಕ ನಡೆಸಿದ ಸುಮಾರು 11 ಸಾವಿರ ಕೋಟಿ ರೂ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆಯೇ ಅವರು ವಿದೇಶಕ್ಕೆ ಹಾರಿದ್ದರು. ವಿಜಯ್ ಮಲ್ಯಾ, ಲಲಿತ್ ಮೋದಿಯವರ ಪಟ್ಟಿಗೆ ನೀರವ್ ಮೋದಿ ಹೊಸ ಸೇರ್ಪಡೆಯಾಗಿದ್ದು, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡುವುದಕ್ಕೆ ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಇದೀಗ ಓರಿಯಂಟಲ್ ಬ್ಯಾಂಕ್ ನಲ್ಲೂ ಇಂಥದೇ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿತ್ತು. ಈ ಹಿನ್ನೆಲೆಯಲ್ಲ ನರೇಂದ್ರ ಮೋದಿಯವರ ವಿರುದ್ಧ ಕಪಿಲ್ ಸೀಬಲ್ ಕಿಡಿಕಾರಿದ್ದಾರೆ.

English summary
Addressing a press conference in Delhi, former union minister and senior Congress leader Kapil Sibal said, "World's costliest chowkidar is our prime minister. He gets accommodation, air travels and plays the role of chowkidar. Why are bank frauds happening under his vigil?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X